fbpx
ಸಮಾಚಾರ

ತಮಿಳು ಹಾಸ್ಯ ನಟನ ಸರಳತೆಗೆ ಮಾರುಹೋದ ದುನಿಯಾ ವಿಜಯ್

ತಮಿಳಿನ ಖ್ಯಾತ ಹಾಸ್ಯ ನಟ ಯೋಗಿ ಬಾಬು ಸಖತ್​ ಸುದ್ದಿ ಮಾಡ್ತಿದ್ದಾರೆ. ಕಳೆದ ವಾರ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ರನ್ನ ಭೇಟಿ ಮಾಡಿದ ಯೋಗಿ ಬಾಬು ಮತ್ತೆ ಸುದ್ದಿಯಾಗಿದ್ದರು. ಸದ್ಯ ಯೋಗಿ ಬಾಬು ನಟ ದುನಿಯಾ ವಿಜಿಯವರನ್ನು ಭೇಟಿಯಾಗಿ ಮತ್ತೆ ಸುದ್ದಿಗೆ ಬಂದಿದ್ದಾರೆ.

ಮನೆಗೆ ಬಂದ ಯೋಗಿಬಾಬು ಅವರನ್ನು ಪ್ರೀತಿಯಿಂದ ಸ್ವಾಗತಿಸಿರುವ ವಿಜಯ್, ಹಾಸ್ಯನಟನ ಪ್ರತಿಭೆಯನ್ನು ಗೌರವಿಸಿದ್ದಾರೆ. ಈ ಬಗ್ಗೆ ಸ್ವತಃ ವಿಜಯ್ ಟ್ವಿಟ್ಟರ್ ಹಾಗು ಫೇಸ್‌ಬುಕ್‌ನಲ್ಲಿ ಸಂತಸ ಹಂಚಿಕೊಂಡಿದ್ದು, ‘ಯೋಗಿಬಾಬು ಅವರ ಸರಳತೆಗೆ ನಾನು ಫಿದಾ ಆದೆ” ಎಂದಿದ್ದಾರೆ.

ಪಕ್ಕದ ರಾಜ್ಯದ ಚಿತ್ರೋದ್ಯಮದಿಂದ ತಮ್ಮ ಮನೆಗೆ ಬಂದಿದ್ದ ಅಪರೂಪದ ಅತಿಥಿ ಬಾಬು ಬಗ್ಗೆ ‘ದುನಿಯಾ’ ವಿಜಯ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ‘ತಮಿಳು ಚಿತ್ರರಂಗದಲ್ಲಿ ಟೈಮಿಂಗ್ ಮತ್ತು ವಿಶಿಷ್ಟ ಅಭಿನಯದಿಂದ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಯೋಗಿ ಬಾಬು, ಇತ್ತೀಚೆಗೆ ನನ್ನ ಮನೆಗೆ ಬಂದಿದ್ದರು. ಕಾಲಿವುಡ್‌ನಲ್ಲಿ ಸ್ಟಾರ್ ಹಾಸ್ಯ ನಟರಾದರೂ ಅವರು ಸರಳತೆಗೆ ನಾನು ಫಿದಾ ಆದೆ. ನಿಮ್ಮ ಮುಂದಿನ ಚಿತ್ರ ಜೀವನ ಸಕ್ಸಸ್‌ಫುಲ್ ಆಗಲಿ’ ಎಂದು ಯೋಗಿ ಬಾಬು ಅವರಿಗೆ ಹಾರೈಸಿದ್ದಾರೆ ವಿಜಯ್‌.

 

ತಮಿಳು ಚಿತ್ರರಂಗದಲ್ಲಿ ಟೈಮಿಂಗ್ ಮತ್ತು ವಿಶಿಷ್ಟ ಅಭಿನಯದಿಂದ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಯೋಗಿ ಬಾಬು, ಇತ್ತೀಚೆಗೆ ನನ್ನ ಮನೆಗೆ…

Duniya Vijay ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಆಗಸ್ಟ್ 17, 2020

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top