fbpx
ಸಮಾಚಾರ

“ಬದುಕೋದೇ ಬೇಡ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ತೀರ್ಮಾನಿಸಿದ್ದೆ” ರಘು ದೀಕ್ಷಿತ್ ಸಾವಿನ ನಿರ್ಧಾರಕ್ಕೆ ಕಾರಣವೇನು ?

ಸೈಕೊ, ಜಸ್ಟ್ ಮಾತ್ ಮಾತಲ್ಲಿ ಮತ್ತು ತೀರಾ ಇತ್ತೀಚೆಗೆ ಲವ್ ಮಾಕ್ಟೇಲ್ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದವರು ರಘು ದೀಕ್ಷಿತ್. ಸೈಕೊ ಮತ್ತು ಜಸ್ಟ್ ಮಾತ್ ಮಾತಲ್ಲಿ ಚಿತ್ರಗಳಿಗೆ ಮಾಡಿದ ಸಂಗೀತ ಜನಪ್ರಿಯವಾಗಿ ಒಳ್ಳೆ ಹೆಸರು ಗಳಿಸಿದ್ದ ರಘು ದೀಕ್ಷಿತ್ ಇದೀಗ ತಾವು ಖಿನ್ನತೆಗೆ ಒಳಗಾಗಿದ್ದರ ಬಗ್ಗೆ ಮಾತನಾಡಿದ್ದಾರೆ.

ಖಿನ್ನತೆಯಿಂದ ಆತ್ಮಹತ್ಯೆಯ ಅಂಚಿಗೆ ಹೋಗಿ ಹೊರಗೆ ಬಂದ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಬಳಿಕ ಖಿನ್ನತೆ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಇದೀಗ ರಘು ದೀಕ್ಷಿತ್ ಅವರು, ನಿರೂಪಕಿ ಅನುಶ್ರಿ ಅವರೊಟ್ಟಿಗಿನ ಯೂಟ್ಯೂಬ್ ಸಂವಾದದಲ್ಲಿ ತಾವು ಅನುಭವಿಸಿದ ಖಿನ್ನತೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

“ಲಾಕ್‌ಡೌನ್ ಸಮಯದಲ್ಲಿ ಬದುಕುವುದೋ-ಸಾಯುವುದೋ ಎಂಬ ಆಲೋಚನೆಗಳು ನನ್ನ ತಲೆಗೆ ಬಂದಿತ್ತು. ಆಗ ನಾನು ತುಂಬಾ ಕಷ್ಟ ಪಟ್ಟು, ಸೂಕ್ತ ಚಿಕಿತ್ಸೆಗಳನ್ನು ಪಡೆದುಕೊಂಡು ಖಿನ್ನತೆಯಿಂದ ಹೊರಗೆ ಬಂದೆ.

“ಮೊದಲ ಒಂದು ತಿಂಗಳು ಕೇವಲ ತಿನ್ನುವುದು ಹಾಗೂ ಮಲಗುವುದರಲ್ಲೇ ಕಳೆದ. ಸದಾ ಬೆಡ್‌ ಮೇಲೆ ಮಲಗಿರುತ್ತಲೇ ಇದ್ದೆ. ಸ್ವಿಗ್ಗಿಯಿಂದ ಊಟ ಆರ್ಡರ್ ಮಾಡಿಕೊಂಡು ತಿನ್ನುತ್ತಿದ್ದೆ. ಶೌಚಾಲಯಕ್ಕೆ ಮಾತ್ರವೇ ಎದ್ದು ನಡೆದುಕೊಂಡು ಹೋಗುತ್ತಿದ್ದೆ, ವಿಪರೀತ ದೇಹ ತೂಕ ಹೆಚ್ಚಿಸಿಕೊಂಡಿದ್ದೆ”

” ಒಂದು ದಿನ ಕನ್ನಡಿಯಲ್ಲಿ ನನ್ನ ಮುಖ ನೋಡಿ ನನಗೇ ಅಸಹ್ಯ ಎನಿಸಿತ್ತು. ನನ್ನ ದೇಹದ ತೂಕ ಕೂಡ ಜಾಸ್ತಿ ಆಗಿತ್ತು. ನಂತರ ಡಯಟ್​ ಮಾಡಿ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲಿ ಥೆರೆಪಿಸ್ಟ್​ಗಳನ್ನು ಕನ್ಸಲ್ಟ್​ ಮಾಡಿದ್ದೆ. ಈಗ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದೇನೆ,” ಎಂದಿದ್ದಾರೆ.

“ಈ ಸಿನಿಮಾ ಮಾಡಿದರೆ ಖುಷಿ ಸಿಗುತ್ತದೆ. ಇಷ್ಟು ಹಣ ಮಾಡಿದರೆ ಖುಷಿ ಸಿಗುತ್ತದೆ ಎನ್ನುವ ಕಲ್ಪನೆ ಇರುತ್ತದೆ. ನಾನು ಥೆರೆಪಿಸ್ಟ್​ಗಳನ್ನು ಭೇಟಿ ಮಾಡಿದ ನಂತರ ನನ್ನ ಆಲೋಚನೆಗೆ ಹೊಸ ರೂಪ ಸಿಕ್ಕಿತ್ತು. ಅವರಿಂದ ನನ್ನ ಬಾಳು ಹಾಳಾಯ್ತು ಎಂದು ಅನೇಕರು ಓಡಾಡಿಕೊಂಡಿರುತ್ತಾರೆ. ಆದರೆ, ಈ ಕೋರ್ಸ್​ ಮುಗಿದ ನಂತ ನನ್ನ ಆಲೋಚನೆಗಳು ತಪ್ಪು, ಎಂಬುದು ಅರಿವಾಗಿದೆ,” ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top