fbpx
ಸಮಾಚಾರ

‘ಸೂಪರ್‌ ಸ್ಟಾರ್’‌ ಚಿತ್ರದ ಟೀಸರ್‌ಗೆ ರಾಕಿಂಗ್ ಸ್ಟಾರ್ ಯಶ್ ಹಿನ್ನಲೆ ಧ್ವನಿ

ನಟ ‘ರಾಕಿಂಗ್ ಸ್ಟಾರ್’ ಯಶ್ ಅವರು ಈಗಾಗಲೇ ಹೊಸ ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದಾರೆ. ಹಲವು ಸಿನಿಮಾಗಳ ಪೋಸ್ಟರ್, ಟೀಸರ್, ಟ್ರೇಲರ್ ರಿಲೀಸ್ ಮಾಡಿ, ಆ ಚಿತ್ರಗಳಿಗೆ ಬೆಂಬಲ ಸೂಚಿಸಿದ್ದರು. ಈಗ ಅವರು ಉಪೇಂದ್ರ ಸಹೋದರ ಪುತ್ರ ನಿರಂಜನ್ ಸುಧೀಂದ್ರಗೆ ಸಿನಿಮಾಕ್ಕೆ ಬೆಂಬಲ ನೀಡುತ್ತಿದ್ದಾರಂತೆ.

ನಿರಂಜನ್‌ ಸುಧೀಂದ್ರ ಅಭಿನಯದ ‘ಸೂಪರ್‌ಸ್ಟಾರ್‌’ ಚಿತ್ರದ ಟೀಸರ್‌ ಬಿಡುಗಡೆಗೆ ಸಜ್ಜಾಗಿದೆ. ರಾಕಿಂಗ್‌ ಸ್ಟಾರ್‌ ಯಶ್‌ ಧ್ವನಿಯಲ್ಲಿ ಚಿತ್ರದ ಟೀಸರ್‌ ಮೂಡಿ ಬರಲಿದ್ದು, ಈಗಾಗಲೇ ಟೀಸರ್‌ಗಾಗಿ ಯಶ್‌ ಅವರ ಖಡಕ್‌ ಧ್ವನಿಯನ್ನು ರೆಕಾರ್ಡ್‌ ಮಾಡಿಕೊಂಡಿದೆ ಚಿತ್ರತಂಡ. ಟೀಸರ್‌ ಆಗಸ್ಟ್‌ 20ರಂದು ಬಿಡುಗಡೆಯಾಗಲಿದೆ.

 

 

ನಿರಂಜನ್ ಸಿನಿಮಾ ಹೆಸರು ಸೂಪರ್ ಸ್ಟಾರ್ ಎಂದು ಇಡಲಾಗಿದೆ. ಆರ್ ವಿಬಿ ಮತ್ತು ಮೈಲಾರಿ ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾ ನಿರ್ಮಾಣ ವಾಗುತ್ತಿದೆ, ನಿರಂಜನ್ ಇದರಲ್ಲಿ ಡ್ಯಾನ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪಾತ್ರಕ್ಕಾಗಿ ನಿರಂಜನ್ ಹಲವು ಬದಲಾವಣೆ ಮಾಡಿದ್ದಾರೆ. ಅಕ್ಟೋಬರ್ ತಿಂಗಳಿನಿಂದ ಶೂಟಿಂಗ್ ಆರಂಭಿಸುವ ಸಾಧ್ಯತೆಯಿದೆ, ಹೀಗಾಗಿ ಉಳಿದ ಪಾತ್ರಗಳ ಕಲಾವಿದರ ಆಯ್ಕೆಯಲ್ಲಿ ಚಿತ್ರ ತಂಡ ನಿರತವಾಗಿದೆ. ಇನ್ನೂ ನಾಯಕಿ ಕೂಡ ಆಯ್ಕೆಯಾಗಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top