fbpx
ಸಮಾಚಾರ

ಒಂದು ಕಾಲದಲ್ಲಿ ಕೊತ್ತಂಬರಿ ಸೊಪ್ಪು ಮಾರುತ್ತಿದ್ದ ವ್ಯಕ್ತಿ ಈಗ ಬಾಲಿವುಡ್ ಸ್ಟಾರ್ ನಟ

ಕೊತ್ತಂಬರಿ ಸೊಪ್ಪು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸೌಂಡ್ ಆಗಿದೆ. ಟ್ರೋಲ್ ಪೇಜ್‌ಗಳಂತೂ ಕೊತ್ತಂಬರು ಸೊಪ್ಪು ಹಿಡ್ಕೊಂಡು ಹಿಗ್ಗಾ ಮುಗ್ಗಾ ಟ್ರೋಲ್ ಮಾಡಿದ್ದಾರೆ.

ಗಮನಿಸಬೇಕಾದ ವಿಚಾರ ಏನಂದ್ರೆ ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಕೊತ್ತಂಬರಿ ಸೊಪ್ಪು ಮಾರೀನೇ ಜೀವನ ನಡೆಸುತ್ತಿದ್ದರು. ಇವರು ಕೊತ್ತಂಬರಿ ಸೊಪ್ಪು ಮಾರಿ ನಂತರ ದೊಡ್ಡ ಸ್ಟಾರ್ ಆಗಿದ್ದಾರೆ. ಕೊತ್ತಂಬರಿ ಸೊಪ್ಪು ಮಾರಿ ದೊಡ್ಡ ನಟನಾದ್ರು ಎಂದು ಈ ಸಂದರ್ಭದಲ್ಲಿ ನವಾಜುದ್ದೀನ್ ಸಾಧನೆ ಬಗ್ಗೆ ಕೂಡ ಚರ್ಚೆಯಾಗುತ್ತಿದೆ,.

ಅಸಲಿಗೆ ಚಿತ್ರರಂಗಕ್ಕೆ ಕಾಲಿಟ್ಟವರಲ್ಲಿ ಅನೇಕರು ಸಿನಿಮಾ ಹಿನ್ನೆಲೆಯಿಂದಲೇ ಬಂದವರಲ್ಲ.. ಹಾಗೆ ಬಂದ ಪ್ರತಿ ಕಲಾವಿದನ ಹಿಂದೆಯೂ ಒಂದೊಂದು ಕಥೆ ಇರುತ್ತದೆ. ಅಂಥಾ ಕಲಾವಿದರಲ್ಲಿ ಬಾಲಿವುಡ್ ನ ಬಹುಬೇಡಿಕೆಯ ನಟ ನವಾಜುದ್ದೀನ್​ ಸಿದ್ಧಕಿ ಕೂಡ ಒಬ್ಬರು. ಬಾಲಿವುಡ್ ನಲ್ಲಿ ಮಿಂಚುತ್ತಿರುವ ಅವರು, ಸಿನಿಮಾ ಹಿನ್ನೆಲೆಯಿಂದ ಬಂದವರಲ್ಲ. ತಾವು ನಡೆದ ಬಂದ ಕಷ್ಟದ ಹಾದಿಯನ್ನು ಅವರು ಕಳೆದ ವರ್ಷ ಕಪಿಲ್​ ಶರ್ಮಾ ಶೋನಲ್ಲಿ ನೆನಪಿಸಿಕೊಂಡಿದ್ದರು..

ಕಪಿಲ್ ಶರ್ಮಾ ಶೋನಲ್ಲಿ ತಮ್ಮ ನೋವಿನ ದಿನಗಳನ್ನು ಮೆಲುಕು ಹಾಕಿದ್ದ ಸಿದ್ದಿಕಿ ಭಾವುಕರಾದರು. “ಚಿತ್ರರಂಗಕ್ಕೆ ಬರುವ ಮುನ್ನ ನಾನು ತರಕಾರಿ ಮಂಡಿಗೆ ಹೋಗಿ 200ರೂ. ಮೌಲ್ಯದ ಕೊತ್ತಂಬರಿ ಸೊಪ್ಪನ್ನು ಖರೀದಿಸಿ ಅದನ್ನು ಮನೆ ಮನೆಗೆ ತೆರಳಿ ಮಾರುತ್ತಿದೆ.. ಕೆಲವೊಮ್ಮೆ ಸೊಪ್ಪು ಹಳದಿ ಬಣ್ಣಕ್ಕೆ ತಿರುಗುತ್ತಿತ್ತು. ಆಗ, ಅದನ್ನು ಯಾರೂ ಖರೀದಿಸುತ್ತಿರಲಿಲ್ಲ.. ಸೊಪ್ಪು ಹಳದಿ ಬಣ್ಣಕ್ಕೆ ತಿರುಗುವ ಬಗ್ಗೆ ಮಂಡಿಗೆ ಹೋಗಿ ಹೇಳುತ್ತಿತ್ತೇ. ಆಗ ಅವರು ಸೊಪ್ಪಿಗೆ ನೀರು ಚಿಮುಕಿಸಿ ಮಾರಾಟ ಮಾಡುವಂತೆ ಹೇಳುತ್ತಿದ್ದರು. 200 ರೂ. ಕೊತ್ತಂಬರಿ ಸೊಪ್ಪು ಮಾರಿ ಜೇವನ ನಡೆಸುತ್ತಿದ್ದೆ” ಎಂದಿದ್ದರು ನವಾಜುದ್ದೀನ್.

“ಕಿರಿಯ​ ಕಲಾವಿದನಾಗಿ ನಟಿಸುವಾಗ ಒಮ್ಮೆ 4000ರೂ. ಸಂಭಾವನೆ ಸಿಕ್ಕಿತ್ತು. ಅದರಲ್ಲಿ, 1,800 ರೂವನ್ನು ಕೊತ್ತಂಬರಿ ಸೊಪ್ಪಿನ ಮೇಲೆ ಹೂಡಿಕೆ ಮಾಡಿ ಬಿಟ್ಟಿದ್ದೆ… ಅದಾದ ಮೇಲೆ ಸಿನಿಮಾಗಳಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ಸಿಗುತ್ತಾ ಬಂದವು ನಾನು ಕೊತ್ತಂಬರಿ ಸೊಪ್ಪನ್ನು ಮಾರುವುದನ್ನು ಬಿಟ್ಟೆ.. ನಿಧಾನವಾಗಿ ಚಿತ್ರರಂಗದಲ್ಲಿ ಬೆಳೆಯುತ್ತಾ ಬಂದೆ “ಎಂದು ಸಿದ್ದಿಕಿ ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top