fbpx
ಸಮಾಚಾರ

ರವಿಚಂದ್ರನ್ ಮಾವ, ಮಾಜಿ ಸಂಸದ ವೇಲು ವಿಧಿವಶ

ನಟ‌‌ ರವಿಚಂದ್ರನ್ ಅವರ ಮಾವ, ಶ್ರೀಮತಿ ಸುಮತಿ ರವಿಚಂದ್ರನ್ ಅವರ ತಂದೆ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಎ. ಎಂ. ವೇಲು ಮುದಲಿಯಾರ್ ಅವರು ನಿಧನರಾಗಿದ್ದಾರೆ. ಎರಡು ದಿನಗಳ ಹಿಂದೆ ಚೆನ್ನೈನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

1980ರಲ್ಲಿ ತಮಿಳುನಾಡಿನ ಆರಕೋಣಂ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಗೆದ್ದು ಸಚಿವರಾಗಿ ಸೇವೆ ಸಲ್ಲಿಸಿದ್ದರು. 1996ರಲ್ಲಿ ಮೂಪನಾರ್ ಕಾಂಗ್ರೆಸ್ ಮೂಲಕ ಆಯ್ಕೆಯಾಗಿದ್ದರು.

ವಯಸ್ಸಾಗಿದ್ದರೂ ಕೂಡ ಸಕ್ರಿಯರಾಗಿದ್ದ ವೇಲು ಅವರಿಗೆ ಕಳೆದೆರಡು ದಿನಗಳ ಹಿಂದೆ ಹೃದಯಾಘಾತವಾಗಿತ್ತು ಎನ್ನಲಾಗಿದೆ. ಎ.ಎಂ.ವೇಲು ಅವರು ವಿದ್ಯಾಸಂಸ್ಥೆಗಳನ್ನು ನಡೆಸುವ ಮೂಲಕ ಪ್ರಸಿದ್ಧರಾಗಿದ್ದರಲ್ಲದೆ ಹಲವು ಬಸ್‍ಗಳ ಮಾಲೀಕರಾಗಿದ್ದರು.

ತಮ್ಮ ಸ್ವಂತ ಊರಾದ ಶೋಲಿಂಗೂರಿನಲ್ಲಿ ಮೊದಲ ಚಿತ್ರಮಂದಿರವನ್ನು ತಮ್ಮ ಪ್ರೀತಿಯ ಮಗಳಾದ ಸುಮತಿ ಅವರ ಹೆಸರಿನಲ್ಲಿ ಕಟ್ಟಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top