fbpx
ಸಮಾಚಾರ

ಈ ಭಾರಿ IPLನಲ್ಲಿ ದೆಹಲಿ ತಂಡದಲ್ಲಿ ‘ಮಂಕಡ್‌’ ಮಾಡದಂತೆ ಅಶ್ಚಿನ್‌ಗೆ ಕೋಚ್‌ ಎಚ್ಚರಿಕೆ!

‘ಮಂಕಡ್‌’ ಮೂಲಕ ಬ್ಯಾಟ್ಸ್‌ಮನ್‌ ಒಬ್ಬನನ್ನು ಔಟ್‌ ಮಾಡುವುದರ ವಿರುದ್ಧ ಇರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ ತಾವು ಕೋಚ್‌ ಮಾಡುತ್ತಿರುವ ಐಪಿಎಲ್‌ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಆ ರೀತಿ ಆಗದಂತೆ ಎಚ್ಚರ ವಹಿಸುವುದಾಗಿ ಹೇಳಿದ್ದಾರೆ.

ಕಳೆದ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ರಾಜಸ್ಥಾನ್ ರಾಯಲ್ಸ್ ಪರ ಆಡುವ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕರಾಗಿದ್ದ ಆರ್ ಅಶ್ವಿನ್ ಮಂಕಡ್ ಮೂಲಕ ಔಟ್ ಮಾಡಿದ್ದರು. ಈ ಬಾರಿ ಅಶ್ವಿನ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ.

ಮಂಕಂಡಿಂಗ್ ಮಾಡುವುದು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿದೆ ಎಂದಿರುವ ಪಾಂಟಿಂಗ್, ತಾವು ಕೋಚ್ ಮಾಡುತ್ತಿರುವ ಐಪಿಎಲ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆ ರೀತಿ ಆಗದಂತೆ ಎಚ್ಚರ ವಹಿಸುವುದಾಗಿ ಹೇಳಿದ್ದಾರೆ.

ಅಂದಹಾಗೆ ಈ ಬಾರಿ ಐಪಿಎಲ್​ನಲ್ಲಿ ಅಶ್ವಿನ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಲಿದ್ದು, ಕೋಚ್ ರಿಕಿ ಪಾಂಟಿಂಗ್ ಈ ಬಗ್ಗೆ ಮೊದಲು ಆಫ್ ಸ್ಪಿನ್ನರ್ ಬಳಿ ಚರ್ಚಿಸುವುದಾಗಿ ಹೇಳಿದ್ದಾರೆ. “ಅಶ್ವಿನ್ ಜೊತೆ ಈ ಬಗ್ಗೆ ಖಂಡಿತಾ ಚರ್ಚೆ ಮಾಡಲಿದ್ದೇನೆ. ದೊಡ್ಡ ಚರ್ಚೆಯೇ ಆಗುತ್ತದೆ ಎಂಬುದನ್ನು ನಾನು ಅರಿತಿದ್ದೇನೆ. ಆದರೂ, ನನ್ನ ಸಲಹೆಯನ್ನು ಅವರು ಸ್ವೀಕರಿಸುತ್ತಾರೆ ಎಂಬ ವಿಶ್ವಾಸವಿದೆ,” ಎಂದು ಪಾಂಟಿಂಗ್‌ ಹೇಳಿದ್ದಾರೆ.

“ಆರ್‌ ಅಶ್ವಿನ್‌ ಜೊತೆಗೆ ನಾನು ಮಂಕಡ್‌ ಬಗ್ಗೆ ಮಾತನಾಡಲಿದ್ದೇ. ಅವರೊಟ್ಟಿಗೆ ನಾನು ಮಾತನಾಡುವ ಮೊದಲ ಸಂಗತಿಯೇ ಇದು. ಖಂಡಿತಾ ಕಳೆದ ವರ್ಷ ಅವರು ನಮ್ಮ ತಂಡದಲ್ಲಿ ಇರಲಿಲ್ಲ. ನಮ್ಮ ತಂಡಕ್ಕೆ ಅವರು ಬೇಕೆಂದೇ ಈ ಬಾರಿ ಕರೆತಂದಿದ್ದೇವೆ,” ಎಂದು ‘ದಿ ಗ್ರೇಟ್ ಕ್ರಿಕೆಟರ್‌’ ಪಾಡ್‌ಕಾಸ್ಟ್‌ನಲ್ಲಿ ಪಾಂಟಿಂಗ್‌ ಹೇಳಿದ್ದಾರೆ.

ಕಳೆದ ಅಶ್ವಿನ್ ಮಾಡಿದ್ದ ರೀತಿಯನ್ನು ಗಮನಿಸಿ ತಂಡದ ಆಟಗಾರರಿಗೆ ಸೂಚನೆ ನೀಡಿದ್ದೆ. ಅಶ್ವಿನ್ ನೋಡಿ ಇತರ ಆಟಗಾರರನ್ನೇ ಇದನ್ನೇ ಮಾಡುವುದನ್ನು ಕಲಿಯುತ್ತಾರೆ. ಈ ರೀತಿ ಮಾಡಕೂಡದು ಎಂದು ಸೂಚಿಸಿದ್ದೆ ಎಂದು ಪಾಂಟಿಂಗ್ ಹೇಳಿದ್ದಾರೆ.

ಇದೇ ವೇಳೆ ಅಶ್ವಿನ್ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದಿರುವ ಪಂಟರ್ ಖ್ಯಾತಿಯ ಆಸೀಸ್​ನ ಮಾಜಿ ನಾಯಕ, ಆದರೂ ಡೆಲ್ಲಿ ತಂಡದಲ್ಲಿ ಈ ರೀತಿ ಮಾಡದೇ ಇರುವಂತೆ ತಾವು ನೀಡುವ ಸಲಹೆಯನ್ನು ಆಫ್ ಸ್ಪಿನ್ನರ್ ಸ್ವೀಕರಿಸುತ್ತಾರೆಂಬ ವಿಶ್ವಾಸವಿದೆ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top