fbpx
ಸಮಾಚಾರ

“ದೇಶವೇ ಹೆಮ್ಮೆಪಡುವಂತೆ ಮಾಡಿದ್ದೀರಿ” ಧೋನಿಗೆ ಎರಡು ಪುಟಗಳ ಭಾವನಾತ್ಮಕ ಪತ್ರ ಬರೆದ ಮೋದಿ

ಅಂತರರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಧನ್ಯವಾದ ಅರ್ಪಿಸಿ, ಭಾವುಕ ಪತ್ರ ಬರೆದಿದ್ದಾರೆ.

ಪ್ರಧಾನಿ ಬರೆದ ಸುದೀರ್ಘ ಎರಡು ಪುಟಗಳ ಪತ್ರವನ್ನು ಮಹೇಂದ್ರ ಸಿಂಗ್‌ ಧೋನಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪತ್ರಕ್ಕಾಗಿ ಧೋನಿ ಅವರು ಮೋದಿಗೆ ಕೃತಜ್ಞತೆಅರ್ಪಿಸಿದ್ದಾರೆ.

 

 

“ನಿಮ್ಮ ಹೆಜ್ಜೆಗುರುತುಗಳು ದಿಟ್ಟವೂ, ಧೈರ್ಯದಿಂದಲೂ ಕೂಡಿದೆ,ನೀವು ಇಡೀ ರಾಷ್ಟ್ರಮಟ್ಟದಲ್ಲಿ ಚರ್ಚೆಯ ಕೇಂದ್ರವಾಗಲು ನೀವು ಹಂಚಿಕೊಂಡ ಆ ವಿಡಿಯೋ ಸಾಕು, . 130 ಕೋಟಿ ಭಾರತೀಯರು ನಿಮ್ಮ ನಿವೃತ್ತಿ ಸುದ್ದಿಯಿಂದ ನಿರಾಶೆಗೊಂಡರು ಆದರೆ ಭಾರತೀಯ ಕ್ರಿಕೆಟ್‌ಗಾಗಿ ನೀವು ಮಾಡಿದ ಎಲ್ಲಾ ಕೆಲಸಗಳಿಗೆ ನಾವೆಲ್ಲರೂ ಎಂದೆಂದಿಗೂ ಕೃತಜ್ಞರಾಗಿರಬೇಕು” ಎಂದು ಪ್ರಧಾನಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಒಬ್ಬ ಆಟಗಾರನ ಹೇರ್‍ಸ್ಟೈಲ್ ಹೇಗೆ ಇದೆ ಎಂಬುದು ಮುಖ್ಯವಲ್ಲ. ಸೋಲು ಮತ್ತು ಗೆಲುವುಗಳ ಮಧ್ಯೆ ಆಟಗಾರನ ತಲೆ ಎಷ್ಟು ತಾಳ್ಮೆಯಿಂದ ಇರುತ್ತದೆ ಎಂಬುದು ಮುಖ್ಯವಾಗುತ್ತದೆ. ಈಗಿನ ಯುವ ಜನಗೆ ಒತ್ತಡ ಪರಿಸ್ಥಿತಿಯಲ್ಲೂ ಧೋನಿಯವರಂತೆ ತಾಳ್ಮೆಯಿಂದ ಇರುವುದನ್ನು ಕಲಿತುಕೊಳ್ಳಬೇಕು. ನೀವು ತಂಡವನ್ನು ಮುನ್ನಡೆಸುತ್ತಿದ್ದ ರೀತಿ ಮತ್ತು ನಿಮ್ಮ ಧೈರ್ಯವನ್ನು ಎಲ್ಲರೂ ಮೆಚ್ಚಲೇ ಬೇಕು ಎಂದು ಮೋದಿ ಧೋನಿಯವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಧೋನಿಯವರು ವೃತ್ತಿಪರ ಜೀವನ ಮತ್ತು ವೈಯಕ್ತಿಕ ಜೀವನವನ್ನು ಸರಿಯಾಗಿ ಬ್ಯಾಲೆನ್ಸ್ ಮಾಡಿದ್ದಾರೆ. ಜೊತೆಗೆ 2011ರ ವಿಶ್ವಕಪ್‍ನಲ್ಲಿ ಅವರು ಕೂಲ್ ಆಗಿ ಆಡಿ ಕಪ್ ಅನ್ನು ಗೆದ್ದುಕೊಟ್ಟಿದ್ದಾರೆ. 2007ರ ಟಿ-20 ವಿಶ್ವಕಪ್ ಅನ್ನು ಗೆದ್ದು ಅವರಲ್ಲಿರುವ ಛಲವನ್ನು ತೋರಿಸಿದ್ದಾರೆ. ಇಂಥಹ ಅದ್ಭುತ ಕ್ರೀಡಾಪಟುವಿನ ನಿವೃತ್ತಿ ನಂತರದ ಜೀವನ ಚೆನ್ನಾಗಿರಲಿ. ಮುಂದೆ ಅವರು ತಮ್ಮ ಕುಟುಂಬದ ಜೊತೆ ಉತ್ತಮವಾದ ಸಮಯವನ್ನು ಕಳೆಯಲಿ ಎಂದು ಮೋದಿಯವರು ಪತ್ರದ ಮೂಲಕ ಶುಭಕೋರಿದ್ದಾರೆ.

ಮೋದಿ ಬರೆದ ಪತ್ರವನ್ನು ಸಾಮಾಜಿಕ ತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಮಹೇಂದ್ರ ಸಿಂಗ್‌ ಧೋನಿ, ‘ಕಲಾವಿದ, ಸೈನಿಕ, ಕ್ರೀಡಾಳುಗಳು ಮೆಚ್ಚುಗೆಗಾಗಿ ಹಂಬಲಿಸುತ್ತಾರೆ. ತಮ್ಮ ಪರಿಶ್ರಮ, ತ್ಯಾಗ ಮನ್ನಣೆಗೆ ಪಾತ್ರವಾಗಬೇಕು, ಎಲ್ಲರೂ ಪ್ರಶಂಸಿಸಬೇಕು ಎಂದು ಅಪೇಕ್ಷಿಸುತ್ತಾರೆ. ಮೆಚ್ಚುಗೆ ಮತ್ತು ಶುಭಾಶಯಗಳಿಗಾಗಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಎಂದು ಧೋನಿ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top