fbpx
ಸಮಾಚಾರ

ಕಿಚ್ಚನ ಫ್ಯಾಂಟಮ್ ಜಗತ್ತಿಗೆ ‘ಪನ್ನಾ’ ಎಂಟ್ರಿ

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಬಹು ನಿರೀಕ್ಷಿತ ‘ಫ್ಯಾಂಟಮ್’ ಚಿತ್ರದ ಬಗ್ಗೆ ದಿನೆ ದಿನೇ ಕುತೂಹಲ ಹೆಚ್ಚಾಗುತ್ತಿದೆ. ಕಿಚ್ಚನ ಫ್ಯಾಂಟಮ್ ಲೋಕಕ್ಕೆ ಹೊಸ ಪಾತ್ರ ಪನ್ನಾ ಎಂಟ್ರಿಯಾಗಿದೆ. ಬುಧವಾರ ಫ್ಯಾಂಟಮ್ ಚಿತ್ರತಂಡ ಪನ್ನಾ ಪಾತ್ರ ಪರಿಚಯಿಸುವ ಬಗ್ಗೆ ಮಾಹಿತಿ ನೀಡಿತ್ತು.

ವಿಡಿಯೋ ಟ್ವೀಟ್ ಮಾಡಿರುವ ಅನೂಪ್ ಭಂಡಾರಿ ಪನ್ನಾ ಪಾತ್ರದ ಪರಿಚಯವನ್ನು ಮಾಡಿಕೊಟ್ಟಿದ್ದಾರೆ.ಈ ಸಿನಿಮಾದ ತುಂಬಾ ಸುಂದರವಾದ ಪಾತ್ರ ಅಪರ್ಣ ಬಲ್ಲಾಳ್​ ಅಂದರೆ ಪನ್ನಾ, ಈ ಪಾತ್ರವನ್ನು ನಿರ್ವಹಿಸುತ್ತಿರುವುದು ನೀತಾ ಅಶೋಕ್.

 

 

ಪನ್ನಾ ಮುಂಬೈನಲ್ಲಿ ಹುಟ್ಟಿ ಬೆಳೆದ ಹುಡುಗಿ. ಹಾಗಾಗಿ ಹಿಂದಿ ಮಿಶ್ರಿತ ಕನ್ನಡ ಮಾತನಾಡುತ್ತಾರೆ. ಪನ್ನಾ ಸಾಹಸಿಯಾಗಿದ್ದು ಎಲ್ಲವನ್ನು ತಿಳಿದುಕೊಳ್ಳುವ ಕುತುಹೂಲ ಹೊಂದಿರುವ ಯುವತಿ. ಫ್ಯಾಂಟಮ್ ಚಿತ್ರದಲ್ಲಿ ಅಪರ್ಣಾ ಬಲ್ಲಾಳ್ ಬಹು ಪ್ರಮುಖ ಪಾತ್ರ. ನೀತಾ ಅಶೋಕ್ ಈ ಪಾತ್ರದಲ್ಲಿ ನಟಿಸುತ್ತಿದ್ದು, ಮೊದಲ ಬಾರಿಗೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

 

 

ಉಳಿದಂತೆ ಚಿತ್ರಕ್ಕಾಗಿ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಕಾಡಿನ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಜಾಕ್‌ ಮಂಜು ನಿರ್ಮಾಣದ ಈ ಚಿತ್ರಕ್ಕೆ ಅಜನೀಶ್‌ ಲೋಕನಾಥ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಛಾಯಾಗ್ರಹಣದ ಹೊಣೆ ವಿಲಿಯಂ ಡೇವಿಡ್ ಅವರದ್ದು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top