fbpx
ಸಮಾಚಾರ

ಕರ್ನಾಟಕದ ದಿವ್ಯಾಂಗ ಮಹಿಳೆ ಬದುಕಿಗೆ ಬೆಳಕಾದ ಸೋನು ಸೂದ್: ತರಕಾರಿ ಅಂಗಡಿ ತೆರೆಯಲು ನೆರವು.

ಕೊರೋನಾ ಕಾಲದಲ್ಲಿ ಹಲವರ ಪಾಲಿಗೆ ಬಾಲಿವುಡ್ ನಟ ಸೋನು ಸೂದ್ ಅಕ್ಷರಶಃ ದೇವದೂತನಾಗಿ ಕಾಣಿಸಿಕೊಂಡಿದ್ದಾರೆ. ಯಾರೆಲ್ಲಾ ಕಷ್ಟದಲ್ಲಿದ್ದಾರೋ ಅವರಿಗೆ ತಮ್ಮ ಕೈಯಿಂದ ಸಾಧ್ಯವಾದ ಸಹಾಯವನ್ನು ಮಾಡುತ್ತಾ ಬರುತ್ತಿದ್ದಾರೆ ಸೋನು ಸೂದ್. ಇದೀಗ ಕರ್ನಾಟಕದ ದಿವ್ಯಂಗ ಮಹಿಳೆಯ ಕಷ್ಟಕ್ಕೆ ಸೋನು ಸೂದ್ ಸ್ಪಂದಿಸಿದ್ದಾರೆ.

 

 

ಬುಧವಾರ ಕರ್ನಾಟಕದ ವರಲಕ್ಷ್ಮಿ ಎಂಬಾಕೆ ನಟನ ಬಳಿ ತನಗೊಂದು ತರಕಾರಿ ಅಂಗಡಿ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಳು. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ್ದ ನಟ ಸೋನು ಸೂದ್ ಆಕೆಯ ಸಂಕಷ್ಟಕ್ಕೆ ಮಿಡಿದಿದ್ದಾರೆ.

ಕರ್ನಾಟಕ ಮಹಿಳೆಯೊಬ್ಬರು ನೆರವು ಕೋರಿ ಮೆಸೇಜ್ ಮಾಡಿದ್ದರು. ಹೆಲೋ ಸರ್, ನಾನು ವರ ಮಹಾಲಕ್ಷ್ಮಿ. ಕರ್ನಾಟಕದಲ್ಲಿದ್ದೇನೆ. ನಾನು ದಿವ್ಯಾಂಗಳು. ಎರಡು ವರ್ಷ ಹಿಂದೆ ತಂದೆ ತೀರಿಕೊಂಡರು. ನನಗೆ ಆದಾಯ ಮೂಲವಿಲ್ಲ. ತರಕಾರಿ ಅಂಗಡಿ ತೆರೆಯಲು ನನಗೆ ನಿಮ್ಮ ನೆರವು ಬೇಕು ಎಂದು ಕೇಳಿಕೊಂಡಿದ್ದರು.

ನಿಮಗಾಗಿ ತರಕಾರಿ ಅಂಗಡಿ ಕೆಲಸ ಆರಂಭಿಸುವುದರಿಂದ ಇಂದಿನ ಬೆಳಗು ಆರಂಭಿಸೋಣ. ನೀವು ತಯಾರಾಗಿ ಎಂದು ಸೋನು ಪ್ರತಿಕ್ರಿಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top