fbpx
ಸಮಾಚಾರ

ಅಪ್ಪನ ಆರೋಗ್ಯದಲ್ಲಿ ಚೇತರಿಕೆಯಿಲ್ಲ: ಫೇಸ್‌ಬುಕ್ ವಿಡಿಯೋದಲ್ಲಿ ಕಣ್ಣೀರಿಟ್ಟ ಎಸ್‌ಪಿಬಿ ಪುತ್ರ

‘ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ‌ ಇಂದು ಕೂಡ ಯಾವುದೇ ಸುಧಾರಣೆ ಕಂಡುಬಂದಿಲ್ಲ. ನಿನ್ನೆಯಂತೆಯೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇದೆ. ವೈದ್ಯರು ಐಸಿಯುನಲ್ಲಿಯೇ ಚಿಕಿತ್ಸೆ ಮುಂದುವರಿಸಿದ್ದಾರೆ’ ಎಂದು ಅವರ ಪುತ್ರ ಎಸ್.ಪಿ. ಚರಣ್‌ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಹಾಗಿದ್ದರೂ ಚರಣ್ ವೀಡಿಯೊದಲ್ಲಿ ಕಣ್ಣೀರು ಹಾಕಿದ್ದು ಗಾಯಕ ಶೀಘ್ರದಲ್ಲೇ ಚೇತರಿಸಿಕೊಳ್ಳಲು ಚಿತ್ರರಂಗದ ಸದಸ್ಯರು ಸಾಮೂಹಿಕ ಪ್ರಾರ್ಥನಾ ಸಭೆಯನ್ನು ಆಯೋಜಿಸಿದ್ದಕ್ಕಾಗಿ ಇಡೀ ಚಲನಚಿತ್ರ ಕ್ಷೇತ್ರದ ಸೋದರರು ಹಾಗೂ ಅವರ ತಂದೆಯ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಿಮ್ಮೆಲ್ಲರ ಟ್ವೀಟ್ ಹಾಗೂ ವೀಡಿಯೊಗಳನ್ನು ನೋಡುವುದರಿಂದ ನಮಗೆ ಭರವಸೆ ಸಿಗುತ್ತದೆ ಎಂದು ಚರಣ್ ವಿಡಿಯೋದಲ್ಲಿ ಹೇಳಿದ್ದಾರೆ.

 

#SPB health update 20/8/20 and Thanks to all the great people praying for my father. #spb

Charan Sripathi Panditharadhyula ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಆಗಸ್ಟ್ 20, 2020

 

“ನನ್ನ ತಂದೆಯ ಆರೋಗ್ಯ ಸ್ಥಿತಿಯಲ್ಲಿ ಇದುವರೆಗೆ ಯಾವುದೇ ದೊಡ್ಡ ಬೆಳವಣಿಗೆಗಳು ಕಂಡುಬಂದಿಲ್ಲ. ಆದ್ದರಿಂದ, ಹೆಚ್ಚಾಗಿ ಹೇಳಲು ಏನೂ ಇಲ್ಲ ಎಂದು ನಾನು ಭಾವಿಸಿದ್ದೇನೆ, ಆದರೆ ರವಸೆಯನ್ನು ಜೀವಂತವಾಗಿರಿಸಿದ್ದೇನೆ. ನಂಬಿಕೆ ಉಳ್ಳವನಾಗಿದ್ದೇನೆ. ನಮ್ಮ ಕುಟುಂಬದ ಒಳಿತಿಗಾಗಿ ತಾವೆಲ್ಲಾ ಮಾಡುತ್ತಿರುವ ಪ್ರಾರ್ಥನೆಗಳು ಖಂಡಿತವಾಗಿಯೂ ನನ್ನ ತಂದೆಯನ್ನು ಸಾಧ್ಯವಾದಷ್ಟು ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುತ್ತವೆ ಎಂಬ ವಿಶ್ವಾಸವಿದೆ ಎಂದು ಚರಣ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top