fbpx
ಸಮಾಚಾರ

ಟೀಂ ಇಂಡಿಯಾ ಆಲ್ರೌಂಡರ್‌‌ಗೆ ಕೂಡಿ ಬಂತು ಕಂಕಣ ಭಾಗ್ಯ: ಪ್ರೇಯಸಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ವಿಜಯ್ ಶಂಕರ್

ಟೀಂ ಇಂಡಿಯಾ ಆಲ್‍ರೌಂಡರ್ 29 ವರ್ಷದ ವಿಜಯ್ ಶಂಕರ್ ಗುರುವಾರ ತಮ್ಮ ಗೆಳತಿ ವೈಶಾಲಿ ವಿಶ್ವೇಶ್ವರನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್‍ಸ್ಟಾದಲ್ಲಿ ನಿಶ್ಚಿತಾರ್ಥದ ಫೋಟೋ ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

 

View this post on Instagram

💍 PC – @ne_pictures_wedding

A post shared by Vijay Shankar (@vijay_41) on

 

ಶಂಕರ್ ತನ್ನ ಪ್ರೇಯಸಿ ವೈಶಾಲಿ ವಿಶ್ವೇಶ್ವರನ್ ಅವರೊಂದಿಗಿರುವ ಎರಡು ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದಾರೆ ಮತ್ತು ರಿಂಗ್ ಎಮೋಜಿಯೊಂದಿಗೆ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಇದೇ ವೇಳೆ ಕ್ರಿಕೆಟ್ ತಾರೆಯರಾದ ಕೆ.ಎಲ್. ರಾಹುಲ್, ಯಜುವೇಂದ್ರ ಚಾಹಲ್ ಮತ್ತು ಶ್ರೇಯಸ್ ಅಯ್ಯರ್ ಅವರು ವಿಜಯ್ ಶಂಕರ್ ಅವರಿಗೆ ಶುಭ ಕೋರಿದ್ದಾರೆ.

2019ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ವಿಜಯ್‌ ಶಂಕರ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು. ಇಲ್ಲಿಯವರೆಗೆ ವಿಜಯ್ ಶಂಕರ್ ಭಾರತ ತಂಡದ ಪರ 12 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನಾಡಿದ್ದಾರೆ. ಸದ್ಯ ಯುಎಇನಲ್ಲಿ ನಡೆಯಲಿರುವ ಐಪಿಎಲ್ 2020 ಟೂರ್ನಿಯಲ್ಲಿ ಹೈದರಾಬಾದ್ ತಂಡದ ಕಣಕ್ಕಿಳಿಯುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top