fbpx
ಸಮಾಚಾರ

ಅಂದು #ElevateMosa ಇಂದು ಕನ್ನಡಿಗ ವ್ಯದ್ಯರ ಸಾವು: ಕನ್ನಡ ವಿರೋಧಿ ಐಎಎಸ್ ಅಧಿಕಾರಿ ದರ್ಪಕ್ಕೆ ಅಂತ್ಯ ಯಾವಾಗ

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಾ ಆರೋಗ್ಯಾಧಿಕಾರಿ ಆತ್ಮಹತ್ಯೆ ಪ್ರಕರಣ ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಹಿರಿಯ ಅಧಿಕಾರಿಗಳ ಒತ್ತಡ ತಾಳಲಾರದೆ ಡಾ ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಉತ್ತರಭಾರತೀಯ ಐಎಎಸ್ ಅಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ನಾಗೇಂದ್ರ ಅವರಿಗೆ ಕಿರುಕುಳ ಕೊಟ್ಟಿದ್ದರು ಎಂಬ ಮಾತು ಕೇಳಿಬರುತ್ತಿವೆ.

ಡಾ. ನಾಗೇಂದ್ರ ಅವರಿಗೆ ಜಿಲ್ಲಾ ಪಂಚಾಯಿತಿ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಅವರಿಂದ ಒತ್ತಡ ಇತ್ತು ಎನ್ನಲಾಗಿದೆ. ಕೊರೊನಾ ಟೆಸ್ಟ್ ಟಾರ್ಗೆಟ್ ಹೆಚ್ಚು ನೀಡಿ ಕಡ್ಡಾಯವಾಗಿ ಮಾಡಲೇಬೇಕೆಂದು ಒತ್ತಡ ಹಾಕಲಾಗಿದೆ. ಇಲಾಖೆಯಲ್ಲಿ ನೌಕರರ ಸಂಖ್ಯೆ ಬಹಳ ಕಡಮೆ ಇದ್ದರೂ ಹೆಚ್ಚುವರಿ ಕೆಲಸ ನೀಡುತ್ತಿದ್ದರು. ಜೊತೆಗೆ 6 ತಿಂಗಳಿಂದ ಒಂದು ದಿನವೂ ರೆಜೆ ನೀಡದೆ ಕೆಲಸ ಮಾಡಿಸಿಕೊಂಡಿದ್ದಾರೆ.

ಕಳೆದ ಆರು ತಿಂಗಳುಗಳಿಂದ ಟಿಎಚ್‌ಓ ಡಾ. ನಾಗೇಂದ್ರ ಅವರು ಒಂದು ದಿನವೂ ರಜೆಯನ್ನು ತೆಗೆದುಕೊಂಡಿರಲಿಲ್ಲ. ಆದರೂ ಜಿಪಂ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಡಾ. ನಾಗೇಂದ್ರ ಅವರ ಮೇಲೆ ರಾಜ್ಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಆಗಾಗ ಕಿರುಕುಳವನ್ನು ಕೊಡುತ್ತಿದ್ದರು. ಹೀಗಾಗಿ ಅತ್ಯಂತ ಸೂಕ್ಷ್ಮ ಮನಸ್ಸಿನ ಡಾ. ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ.

ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಒತ್ತಡ ಹಾಕುತ್ತಿದ್ದರು. ಸಿಇಓ ಮಿಶ್ರಾ ಕೊಡುತ್ತಿದ್ದ ಕೆಲಸದ ಒತ್ತಡವನ್ನು ನಿಭಾಯಿಸಲು ಖಾಲಿ ಹುದ್ದೆಗಳಿಂದ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಜಿಪಂ ಸಿಇಓ ಮಿಶ್ರಾ ಕಿರುಕುಳದಿಂದ ಡಾ. ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸಂಬಂಧಿಕರು, ಸರ್ಕಾರಿ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ಪ್ರಶಾಂತ್ ಕುಮಾರ್ ಮಿಶ್ರ ಕನ್ನಡಿಗರಿಗೆ ಕಿರುಕುಳ ಕೊಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2019ರಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯಲ್ಲಿ ಕೂಡ ಕನ್ನಡಿಗರನ್ನು ತುಳಿಯುವ ಪ್ರಯತ್ನ ಪಟ್ಟಿದ್ದರು.

ರಾಜ್ಯದ ಐಟಿ ಕ್ಷೇತ್ರದಲ್ಲಿ ಯುವ ಉದ್ಯೋಗಿಗಳಿಗೆ ಉತ್ತೇಜನ ನೀಡಲು ರೂಪಿಸಿದ್ದ ಎಲಿವೇಟ್‌-100 ಯೋಜನೆಯಲ್ಲಿ ಕರ್ನಾಟಕದ ಯುವ ಉದ್ಯಮಿಗಳಿಗೆ ಅರ್ಹತೆ ಇದ್ದರೂ ಅನರ್ಹಗೊಳಿಸಿ ಉತ್ತರ ಭಾರತೀಯ ಉದ್ಯಮಿಗಳಿಗೆ ಮಿಶ್ರಾ ಮಣೆ ಹಾಕಿದ್ದರು. ಈ ಹಗರಣ ಬಯಲಾದ ನಂತರ ಅವರನ್ನು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯಿಂದ ವರ್ಗಾವಣೆ ಕೂಡ ಮಾಡಲಾಗಿತ್ತು. ಈಗ ನಾಗೇಂದ್ರ ಅವರಿಗೂ ಕಿರುಕುಳಕೊಟ್ಟು ಅವರ ಸಾವಿಗೆ ನೇರ ಕಾರಣರಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top