fbpx
ಸಮಾಚಾರ

ಹಿಂದಿ ಹೇರಿಕೆ ಮಾಡಿದ ಕೇಂದ್ರ ಸರ್ಕಾರದ ಅಧಿಕಾರಿಯ ವಿರುದ್ಧ ಸಂಸದ ಜಿಸಿ ಚಂದ್ರಶೇಖರ್ ಆಕ್ರೋಶ

ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಬೂದಿ ಮುಚ್ಚಿದ ಕೆಂಡದಂತೆ ಇದ್ದ ಹಿಂದಿ ಹೇರಿಕೆಯ ಪರ-ವಿರೋಧದ ಚರ್ಚೆ ಇದೀಗ ಮತ್ತೆ ಕಾವು ಪಡೆದುಕೊಂಡಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರ ಹೇರಲು ಮುಂದಾಗಿರುವ ತ್ರಿಭಾಷಾ ನೀತಿ. ಕೇಂದ್ರ ಸರ್ಕಾರದ ಈ ನೀತಿಯ ವಿರುದ್ಧ ಇದೀಗ ಕರ್ನಾಟಕ ಮಾತ್ರವಲ್ಲ ಇಡೀ ದಕ್ಷಿಣ ಭಾರತ ಸಿಡಿದೆದ್ದು ನಿಂತಿದ್ದು ನೆಟ್ಟಿಗರು ಟೀಕಾಪ್ರಹಾರ ನಡೆಸಿದ್ದಾರೆ.

ಏಕೀ ಅನಗತ್ಯ ಹಿಂದಿ ಹೇರಿಕೆ? ಭಾರತವೆಂದರೆ ಕೇವಲ ಹಿಂದಿಭಾಷಿಕರ ದೇಶವೇ? ವಾದಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ. ಈ ಮಧ್ಯೆ ಕೇಂದ್ರ ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ಅವರ ನಡೆ ಹಿಂದಿ ಹೇರಿಕೆ ಅಭಿಯಾನಕ್ಕೆ ಕಾವು ಕೊಟ್ಟಿದೆ. ಹೌದು, ಹಿಂದಿ ಭಾಷೆ ತಿಳಿಯದವರು ಸಚಿವಾಲಯದ ತರಬೇತಿ ಕಾರ್ಯಕ್ರಮದಿಂದ ಹೊರ ಹೋಗಬಹುದೆಂದು ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾರವರು ಹೇಳಿರುವುದು ಹಿಂದೀಯೇತರರ ಕೋಪಕ್ಕೆ ಕಾರಣವಾಗಿದೆ.

ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾರವರ ವರ್ತನೆಯನ್ನು ಸಂಸದ ಜಿಸಿ ಚಂದ್ರಶೇಖರ್ ಅವರು ತೀವ್ರವಾಗಿ ಘಂಡಿಸಿದ್ದು ತಮ್ಮ ಟ್ವಿಟರ್ ಖಾತೆಯ ಮೂಲಕ ಆಕ್ರೋಶವನ್ನು ಹೊರಹಾಕಿದ್ದಾರೆ. ರಾಜೇಶ್ ಕೋಟೆಚಾ ಅವರನ್ನು ಅಮಾನತ್ತುಗೊಳಿಸಬೇಕಾಗಿ ಧ್ವನಿ ಎತ್ತಿದ್ದಾರೆ.

 

 

“ಕೇಂದ್ರ ಸಚಿವಾಲಯದ ಅಧಿಕಾರಿ ವೈದ್ಯರಿಗೆ ಹಿಂದಿ ಗೊತ್ತಿಲ್ಲದಿದ್ದರೆ ಸಭೆಯಿಂದ ಹೊರಹೋಗುವಂತೆ ಹೇಳುವ ವೀಡಿಯೊದ ಬಗ್ಗೆ ನಿಮ್ಮ ಗಮನಕ್ಕೆ ತರಲು ನಾನು ಬಯಸುತ್ತೇನೆ. ಇದು ಭಾರತದ ಏಕತೆ ಮತ್ತು ವೈವಿಧ್ಯತೆಯ ಮೇಲಿನ ನೇರ ದಾಳಿಯಾಗಿದ್ದು ಕಾರ್ಯದರ್ಶಿ ವೈದ್ಯ ರಾಜೇಶ್ ಈ ಕೂಡಲೇ ಕ್ಷಮೆಯಾಚಿಸಬೇಕು.” ಎಂದು ಸಂಸದ ಜಿಸಿ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.. ಪ್ರಧಾನಿ ಕಾರ್ಯಾಲಯ ಮತ್ತು ಕೇಂದ್ರ ಆಯುಷ್ ಸಚಿವರನ್ನು ಟ್ವೀಟ್ ನಲ್ಲಿ ಟ್ಯಾಗ್ ಮಾಡಿದ್ದಾರೆ.

ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ಅವರನ್ನು ಖಂಡಿಸಿರುವ ನೆಟ್ಟಿಗರು ಕಾರ್ಯದರ್ಶಿಯನ್ನು ಸರ್ಕಾರ ಅಮಾನತ್ತುಗೊಳಿಸಬೇಕು ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕು. ಹಿಂದಿ ಒತ್ತಲ್ಲದವರು ಇಂತಹವರ ವರ್ತನೆಯನ್ನು ಯಾವಾಗದವರೆಗೆ ಸಹಿಸಬೇಕು? ಎಂದು ಪ್ರಶ್ನಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top