fbpx
ಸಮಾಚಾರ

ಸಿನಿರಸಿಕರ ಮನಗೆದ್ದ ಡಾ.ರಾಜ್‌ಕುಮಾರ್​ ಮೊಮ್ಮಗಳ ಮೊದಲ ಸಿನಿಮಾದ ಹಾಡು

ಡಾ. ರಾಜ್‌ಕುಮಾರ್ ಕುಟುಂಬವೇ ಒಂದು ಕಲಾವಿದರ ಕುಟುಂಬ. ಡಾ.ರಾಜ್ ಬಳಿಕ ಅವರ ಮಕ್ಕಳು ನಂತರ ಈಗ ಮೊಮ್ಮಕ್ಕಳು ಚಿತ್ರರಂಗದಲ್ಲಿ ಮೆರೆಯುತ್ತಿದ್ದಾರೆ. ಈಗಾಗಲೇ ವಿನಯ್​ ರಾಘವೇಂದ್ರ ರಾಜ್​ ಕುಮಾರ್​ , ರಾಮ್​ ಕುಮಾರ್​ ಅವರ ಮಗ ಧೀರೆನ್, ಪಾರ್ವತಮ್ಮ ರಾಜ್ ಕುಮಾರ್ ಅವರ ತಮ್ಮನ ಮಗ ಸೂರಜ್ ಚಿತ್ರರಂಗಕ್ಕೆ ಧುಮುಕಿದ್ದು ರಾಜ್ ಕುಟುಂಬದ ಮತ್ತೊಂದು ಕುಡಿ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದೆ.

ರಾಜ್ ಪುತ್ರಿ ಪೂರ್ಣಿಮಾ ಮತ್ತು ನಟ ರಾಮ್​ಕುಮಾರ್​ ದಂಪತಿಗಳ ಮಗ ಧೀರೆನ್​ ರಾಮ್​ಕುಮಾರ್​ ತಮ್ಮ ಮೊದಲ ಸಿನಿಮಾಸಿತಯಾರಿಯಲ್ಲಿರುವಾಗಲೇ ತಮ್ಮ ಪುತ್ರಿ ಧನ್ಯ ರಾಮ್​ಕುಮಾರ್​ ಅವರನ್ನು ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.. ಅಣ್ಣನಿಗೆ ಪೈಪೋಟಿ ನೀಡುವ ರೀತಿಯಲ್ಲಿ ಸಜ್ಜಾಗಿದ್ದಾರೆ.

‘ನಿನ್ನ ಸನಿಹಕೆ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಧನ್ಯ ಪಾದಾರ್ಪಣೆ ಮಾಡುತ್ತಿದ್ದಾರೆ. ಮದುವೆಯ ಮಮತೆಯ ಕರೆಯೋಲೆ ಖ್ಯಾತಿಯ ನಾಯಕ ನಟ ಸೂರಜ್ ಗೌಡಗೆ ಜೋಡಿಯಾಗಿ ಧನ್ಯಾ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಸುಮನ್ ಜಾದುಗಾರ್ ಚೊಚ್ಚಲ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.

ಇನ್ನು ಈ ಚಿತ್ರದ ಸುಂದರವಾದ ಹಾಡೊಂದನ್ನ ಚಿತ್ರ ತಂಡ ಇಂದು ಬಿಡುಗಡೆ ಮಾಡಿದೆ. ಹಾಡನ್ನು ಕೇಳಿದ ಜನ ಮನಸೆಳೆಯುವಂತಿದೆ ಹಾಡಿನ ಲಿರಿಕ್ಸ್​ ಹಾಗೂ ಮ್ಯೂಸಿಕ್​ ಅಂತ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

​ ‘ಮಳೆ ಮಳೆ’ ಎಂಬ ಈ ಹಾಡಿಗೆ ಬಹಳ ಸೊಗಸಾಗಿ ರಾಗ ಸಂಯೋಜನೆ ಮಾಡಿ ಅದ್ಭುತವಾಗಿ ಹಾಡಿದ್ದಾರೆ ಸಂಗೀತ ನಿರ್ದೇಶಕ ರಘು ದೀಕ್ಷಿತ್. ಇನ್ನು ಈ ಸುಂದರ ಹಾಡಿಗೆ ವಾಸುಕಿ ವೈಭವ್​ ಸಾಹಿತ್ಯ​ ಬರೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top