fbpx
ಸಮಾಚಾರ

ಮಹಾತ್ಮ ಗಾಂಧಿ ಬಳಕೆ ಮಾಡುತ್ತಿದ್ದ ಕನ್ನಡಕ ದೊಡ್ಡ ಮೊತ್ತಕ್ಕೆ ಹರಾಜು: ಎಷ್ಟಕ್ಕೆ ಸೇಲ್​​ ಆಯ್ತು ಗೊತ್ತಾ ಗಾಂಧಿ ಕನ್ನಡಕ?

ಮಹಾತ್ಮಾ ಗಾಂಧಿ ಬಳಕೆ ಮಾಡಿದ್ದರು ಎನ್ನಲಾದ ಕನ್ನಡಕವನ್ನು ಬ್ರಿಟನ್ ನಲ್ಲಿ ಹರಾಜು ಮಾಡಲಾಗಿದೆ. ಮಹಾತ್ಮ ಗಾಂಧಿ ಅವರು ದಕ್ಷಿಣ ಆಫ್ರಿಕಾದಲ್ಲಿ ವಕೀಲಿಕೆ ಮಾಡುತ್ತಿದ್ದಾಗ ಬಳಕೆ ಮಾಡುತ್ತಿದ್ದ ಗೋಲ್ಡ್ ಪ್ಲೇಟೆಡ್ ಕನ್ನಡಕ ಇದಾಗಿದ್ದು, 1900 ರಲ್ಲಿ ಇದನ್ನು ಅವರಿಗೆ ಉಡುಗೊರೆಯಾಗಿ ನೀಡಲಾಗಿತ್ತು.

ಚಿನ್ನ ಲೇಪಿತ ಈ ಕನ್ನಡಕವನ್ನು ಬ್ರಿಟನ್‍ನಲ್ಲಿ 2.55 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಕಳೆದ ನಾಲ್ಕು ವಾರದ ಹಿಂದೆ ಈ ಕನ್ನಡ ನಮಗೆ ಸಿಕ್ಕಿದೆ. ಇದನ್ನು ಮಾರಾಟ ಮಾಡಿದವರು, ನಮ್ಮ ತಂದೆಯ ಚಿಕ್ಕಪ್ಪನಿಗೆ ಸ್ವತಃ ಗಾಂಧಿಜೀಯರೆ ಈ ಕನ್ನಡಕವನ್ನು ಗಿಫ್ಟ್ ಆಗಿ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ. ಅಸಾಮಾನ್ಯ ವಸ್ತುವಿಗಾಗಿ ಬಿಡ್ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ಈಸ್ಟ್ ಬ್ರಿಸ್ಟಲ್ ಬಿಡ್ ಹೌಸ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿದೆ.

ದಿ ಲೆಟರ್ ಬಾಕ್ಸ್ ಆಫ್ ಈಸ್ಟ್ ಬ್ರಿಸ್ಟೋಲ್ ಆಕ್ಷನ್ಸ್ ಇನ್ ಹ್ಯಾನ್ ಹ್ಯಾಮ್, ನೈಋತ್ಯ ಇಂಗ್ಲೆಂಡ್ ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅಂದಾಜು 10,000 ಪೌಂಡ್ಸ್ ನಿಂದ 15,000 ಪೌಂಡ್ ಗಳಷ್ಟು ಹಣ ಬರಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಆನ್ ಲೈನ್ ಬಿಡ್ ನಲ್ಲಿ ಬಿಡ್ಡಿಂಗ್ ಮೊತ್ತ ಏರಿಕೆಯಾಗಿ ಅಂತಿಮವಾಗಿ 260,000 (2.55 ಕೋಟಿ ರೂ) ಪೌಂಡ್ಸ್ ಗೆ ಮಾರಾಟವಾಗಿದೆ. ಅಮೆರಿಕದ ವ್ಯಕ್ತಿಯೊಬ್ಬರು ಆನ್‌ಲೈನ್‌ ಮೂಲಕ ಬಿಡ್ ಸಲ್ಲಿಸಿ ಈ ಕನ್ನಡಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ಕನ್ನಡಕವು ಇಂಗ್ಲೆಂಡ್‍ನ ಉದ್ಯಮಿಯೊಬ್ಬರ ಮನೆಯಲ್ಲಿ ಸಿಕ್ಕಿದ್ದು, ಅವರು ಹೇಳಿರುವ ಮಾಹಿತಿ ಪ್ರಕಾರ 1910 ಮತ್ತು 1930ರ ನಡುವೆ ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷ್ ಪೆಟ್ರೋಲಿಯಂನಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ಚಿಕ್ಕಪ್ಪನಿಗೆ ಈ ಕನ್ನಡಕವನ್ನು ಸ್ವತಃ ಗಾಂಧಿಜೀಯವರೆ ಕೊಟ್ಟಿದ್ದರು ಎಂದು ಅವರ ತಂದೆ ಉದ್ಯಮಿಗೆ ಹೇಳಿದ್ದರಂತೆ. ಹೀಗಾಗಿ ಇದನ್ನು ಅವರು ಮಾರಾಟ ಮಾಡಿದ್ದಾರೆ ಎಂದು ಈಸ್ಟ್ ಬ್ರಿಸ್ಟಲ್ ಬಿಡ್ ಹೌಸ್ ತಿಳಿಸಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top