fbpx
ಸಮಾಚಾರ

ಗಣೇಶ ಚತುರ್ಥಿಯಂದು ವಿಶೇಷ ಕೆಲಸ ಮಾಡಿದ ಹ್ಯಾಟ್ರಿಕ್ ಹೀರೊ ಶಿವಣ್ಣ; ಏನದು? ಇಲ್ಲಿದೆ ಮಾಹಿತಿ

ಗಣೇಶ ಚತುರ್ಥಿಯಂದು ಹ್ಯಾಟ್ರಿಕ್ ಹೀರೊ ಶಿವಣ್ಣ ಒಂದು ಮಾದರಿ ಕೆಲಸ ಮಾಡಿದ್ದಾರೆ. ಹೌದು ಮೈಸೂರು ಮೃಗಾಲಯದಲ್ಲಿ ಪಾರ್ವತಿ ಎಂಬ ಆನೆಯನ್ನು ಚಿತ್ರನಟ ಡಾ. ಶಿವರಾಜ್ ಕುಮಾರ್ ದತ್ತು ಸ್ವೀಕರಿಸಿದ್ದಾರೆ.

ಶಿವರಾಜ್‍ಕುಮಾರ್ 75 ಸಾವಿರ ರೂ ಪಾವತಿಸಿ ಮೃಗಾಲಯದ “ಭಾರತದ ಆನೆ – ಪಾರ್ವತಿಯನ್ನು ದತ್ತು ಸ್ವೀಕರಿಸಿದ್ದು, ಮುಂದಿನ ಒಂದು ವರ್ಷದ ಅವಧಿಗೆ ದತ್ತು ಪಡೆದುಕೊಂಡಿದ್ದಾರೆ ಎಂದು ಮೃಗಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.

‘ಕನ್ನಡ ಚಿತ್ರರಂಗದ ಖ್ಯಾತ ನಟ ಡಾ. ಶಿವರಾಜ್‌ಕುಮಾರ್‌ ಅವರು ಪಾರ್ವತಿ ಹೆಸರಿನ ಆನೆಯೊಂದನ್ನು 2020ರ ಆಗಸ್ಟ್‌ 20ರಿಂದ 2021ರ ಆಗಸ್ಟ್‌ 19ರವರೆಗೆ ದತ್ತು ಪಡೆದುಕೊಂಡಿದ್ದಾರೆ. ಅದಕ್ಕಾಗಿ 75 ಸಾವಿರ ರೂ. ನೀಡಿದ್ದಾರೆ. ಈ ಉತ್ತಮ ಕಾರ್ಯಕ್ರಮಕ್ಕಾಗಿ ಮೃಗಾಲಯದ ಅಡಳಿತ ಮಂಡಳಿ ಅವರನ್ನು ಅಭಿನಂದಿಸುತ್ತದೆ’ ಎಂದು ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ.

 

 

ಕೋವಿಡ್-19 ಸಂದರ್ಭದಲ್ಲಿ ನಟ ಶಿವರಾಜ್ ಕುಮಾರ್ ಭಾರತದ ಆನೆ ಪಾರ್ವತಿಯನ್ನು 20-08-2020 ರಿಂದ 19-08- 2021ರವರೆಗೆ ದತ್ತು ಪಡೆದಿದ್ದಾರೆ. ಈ ಮೂಲಕ ಮೃಗಾಲಯ ಮತ್ತು ಪ್ರಾಣಿಗಳ ನಿರ್ವಹಣೆಗೆ ಸಹಕಾರ ನೀಡಿರುವುದಕ್ಕೆ ಮೈಸೂರು ಮೃಗಾಲಯವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top