fbpx
ಸಮಾಚಾರ

BPNL ನೇಮಕಾತಿ: 3348 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಪಶುಪಾಲನ್ ನಿಗಮ ನಿಯಮಿತ(BPNL) 2020ನೇ ಸಾಲಿನ ನೇಮಕಾತಿ ಆರಂಭಿಸಿದೆ. ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ, ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಸೇಲ್ಸ್ ಮ್ಯಾನೇಜರ್ ಸೇರಿದಂತೆ 3348 ಕ್ಕೂ ಅಧಿಕ ಹುದ್ದೆಗಳಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಆರ್ಜಿಗಳನ್ನು ಆಗಸ್ಟ್ 31ರೊಳಗೆ ಸಲ್ಲಿಸಬಹುದು.

ವಯೋಮಿತಿ:
ಕನಿಷ್ಠ ವಯಸ್ಸು 18 ವರ್ಷ ಗರಿಷ್ಠ ವಯಸ್ಸು 45 ವರ್ಷ

ಅರ್ಜಿ ಶುಲ್ಕ:
* ಸೇಲ್ಸ್ ಮ್ಯಾನೇಜರ್: 826ರೂ.
* ಸೇಲ್ಸ್ ಡೆವಲಪ್ಮೆಂಟ್ ಅಧಿಕಾರಿ: 708 ರೂ.
* ಸೇಲ್ಸ್ ಸಹಾಯಕ: 590 ರೂ.

ವಿದ್ಯಾರ್ಹತೆ:
ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10, 12ನೇ ತರಗತಿ ಉತ್ತೀರ್ಣ, ವಿಶ್ವವಿದ್ಯಾಲಯದಿಂದ ಪದವಿ.

ನೇಮಕಾತಿ ಪ್ರಕ್ರಿಯೆ:
ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲ ಅಭ್ಯರ್ಥಿಗಳ ಆಯ್ಕೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ನಡೆಯಲಿದೆ.

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top