fbpx
ಸಮಾಚಾರ

ಫ್ಯಾಂಟಮ್​ ಚಿತ್ರತಂಡದ ಕಡೆಯಿಂದ ಸಿಗಲಿದೆ ಮತ್ತೊಂದು ಸರ್ಪ್ರೈಸ್: ಸುಳಿವು ಕೊಟ್ಟ ಕಿಚ್ಚ!

ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಮತ್ತು ಕುತೂಹಲ ಹುಟ್ಟಿಸಿರುವ ಸಿನಿಮಾಗಳಲ್ಲಿ ಒಂದಾಗಿರುವ ‘ಫ್ಯಾಂಟಮ್’ ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಸಿನಿಮಾಭಿಮಾನಿಗಳ ಗಮನ ಸಳೆಯುತ್ತಿದೆ. ಈ ಚಿತ್ರಕ್ಕೆ ‘ರಂಗಿತರಂಗ’ ಖ್ಯಾತಿಯ ನಿರ್ದೇಶಕ ಅನೂಪ್‌ ಭಂಡಾರಿ ಆ್ಯಕ್ಷನ್‌-ಕಟ್ ಹೇಳುತ್ತಿದ್ದು, ಚಿತ್ರದ ಒಂದೊಂದೇ ಪಾತ್ರಗಳನ್ನು ಬಹಿರಂಗಪಡಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಕಿಚ್ಚ ಸುದೀಪ್‌, ನಿರೂಪ್ ಭಂಡಾರಿ ಮತ್ತು ನಟಿ ನೀತಾ ಅಶೋಕ್ ಅವರ ಪಾತ್ರಗಳ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಲಾಗಿತ್ತು. ಪಾತ್ರ ಪರಿಚಯ ಪೋಸ್ಟರ್ ರಿಲೀಸ್ ಮಾಡಿ ಅವುಗಳ ಹಿಂದೆಯೇ ಒಂದು ಕೌತುಕವನ್ನೂ ಮೂಡಿಸಲಾಗಿತ್ತು. ಇದೀಗ ಚಿತ್ರತಂಡ ಮತ್ತೊಂದು ಸರ್ಪ್ರೈಸ್ ನೀಡುವ ಸುಳಿವು ನೀಡಿದೆ.

 

 

ಫ್ಯಾಂಟಮ್​ ಚಿತ್ರತಂಡದೊಂದಿಗೆ ಗಣಪತಿ ಹಬ್ಬ ಆಚರಿಸಿರುವ ಕಿಚ್ಚ ಸುದೀಪ್​ ಇನ್ಸ್ಟಾಗ್ರಾಮ್ ನಲ್ಲಿ ಗ್ರೂಪ್ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಈ ಫೋಟೋಗೆ “ಗಣೇಶ ಹಬ್ಬದ ನಂತ್ರ ಮತ್ತೆ ಚಿತ್ರೀಕರಣಕ್ಕೆ ಮರಳುತ್ತಿದ್ದೇವೆ. ಪ್ಯಾಂಟಮ್ ತಂಡದಿಂದ ಮುಂದೆ ಏನು? ಕಾದು ನೋಡಿ” ಎಂದು ಕ್ಯಾಪ್ಷನ್ ನೀಡಿದ್ದು ಮತ್ತೊಂದು ಸರ್ಪ್ರೈಸ್​ ನೀಡುವುದಾಗಿ ಸುಳಿವು ನೀಡಿದ್ದಾರೆ.

 
ಮುಂದಿನವಾರ (sep 02) ಚಿತ್ರದ ನಾಯಕ ಸುದೀಪ್ ಅವರ ಜನ್ಮದಿನವಿದ್ದು ಕಿಚ್ಚನ ಬರ್ತಡೇ ಅಂಗವಾಗಿ ಟೀಸರ್ ರೀತಿಯ ಒಂದು ಝಲಕ್ ಅನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಹೇಳಿಲ್ಲ ಬಹುಷಃ ಇನ್ನೆರಡು ದಿನಗಳಲ್ಲಿ ಅದನ್ನು ಘೋಷಿಸಬಹುದು.
 

ಉಳಿದಂತೆ ಚಿತ್ರಕ್ಕಾಗಿ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಕಾಡಿನ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಜಾಕ್‌ ಮಂಜು ನಿರ್ಮಾಣದ ಈ ಚಿತ್ರಕ್ಕೆ ಅಜನೀಶ್‌ ಲೋಕನಾಥ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಛಾಯಾಗ್ರಹಣದ ಹೊಣೆ ವಿಲಿಯಂ ಡೇವಿಡ್ ಅವರದ್ದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top