fbpx
ಸಮಾಚಾರ

ನಿತ್ಯಾನಂದನ ಕೈಲಾಸದ ಕರೆನ್ಸಿ ಬಿಡುಗಡೆ: ಭಾರತೀಯ ರೂಪಾಯಿಗೆಷ್ಟು ಮೌಲ್ಯ?

ಕಳೆದ ವರ್ಷ ದೇಶ ಬಿಟ್ಟು ಪರಾರಿಯಾಗಿದ್ದ ಸ್ವಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ, ಕೈಲಾಸ ಎನ್ನುವ ಹೊಸ ದೇಶವನ್ನೇ ಕಟ್ಟಿಕೊಂಡಿರುವುದಾಗಿ ಹೇಳಿಕೊಂಡಿದ್ದ. ಇದೀಗ ಗಣೇಶ ಚತುರ್ಥಿಯ ದಿನ ತನ್ನ ದೇಶಕ್ಕೆ ಕೇಂದ್ರ ಬ್ಯಾಂಕ್‌(ರಿಸರ್ವ್‌ ಬ್ಯಾಂಕ್‌ ಆಫ್‌ ಕೈಲಾಸ್‌) ಸ್ಥಾಪಿಸಿದ್ದಾನೆ! ಅಲ್ಲದೇ, ಹೊಸ ಕರೆನ್ಸಿಯನ್ನೂ ಬಿಡುಗಡೆ ಮಾಡಿದ್ದಾನೆ.

ಕೈಲಾಸ್‌ ಡಾಲರ್‌ ಎಂದು ಹೊಸ ಕರೆನ್ಸಿಯನ್ನು ಕರೆಯಲಾಗಿದ್ದು ಈ ಕುರಿತು ಆತ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಕೈಲಾಸ ಹಾಗೂ ಅದರ ಸನ್ಯಾಸಿಗಳ ತಂಡ 100ಕ್ಕೂ ಹೆಚ್ಚು ಪುಸ್ತಕ, 360 ಲೇಖನಗಳು ಹಾಗೂ ಸಂಶೋಧನಾ ಪ್ರಬಂಧಗಳನ್ನು ಒಳಗೊಂಡ ಹಿಂದೂ ಆರ್ಥಿಕ ನೀತಿಗಳ ಬಗ್ಗೆ ವ್ಯಾಪಕ ಸಂಶೋಧನೆ ಮತ್ತು ಅಧ್ಯಯನ ನಡೆಸಿ, ಕರೆನ್ಸಿ ತಯಾರಿಸಲಾಗಿದೆ’ ಎಂದು ಹೇಳಲಾಗಿದೆ.

8 ವಿವಿಧ ಮುಖಬೆಲೆ ನಾಣ್ಯ
ನಿತ್ಯಾನಂದ ಶನಿವಾರ ಬಿಡುಗಡೆ ಮಾಡಿರುವ 8 ವಿವಿಧ ಮೌಲ್ಯಗಳನ್ನು ಹೊಂದಿವೆ. ಇಂಥ ಒಟ್ಟು 77 ಮಾದರಿಯ ನಾಣ್ಯಗಳನ್ನು ಅನಾವರಣಗೊಳಿಸಲಾಗಿದೆ.

ಎಲ್ಲವೂ ಬಂಗಾರದ ನಾಣ್ಯ
1 ಕೈಲಾಸಿಯನ್‌ ಡಾಲರ್‌ ಮುಖಬೆಲೆಯ ನಾಣ್ಯವು 11.66 ಗ್ರಾಮ್‌ ತೂಕ ಹೊಂದಿದೆ. ಮುಕ್ಕಾಲು ಡಾಲರ ನಾಣ್ಯ 8.74 ಗ್ರಾಂ, ಅರ್ಧ ಕೈಲಾಸಿಯನ್‌ ಡಾಲರ್‌ 5.81 ಗ್ರಾಂ, ಕಾಲು ಡಾಲರ್‌ನ ನಾಣ್ಯ 2.91 ಗ್ರಾಂ ತೂಕ ಹೊಂದಿದೆ. ಇದೇ ರೀತಿ 3,4,5,10 ಡಾಲರ್‌ನ ನಾಣ್ಯಗಳನ್ನೂ ಬಿಡುಗಡೆ ಮಾಡಲಾಗಿದೆ. ಈ ನಾಣ್ಯಗಳು ಶತಮಾನಗಳ ಹಿಂದೆ ಹಿಂದೂ ದೇಶಗಳಲ್ಲಿ ಬಳಸಲಾಗುತ್ತಿದ್ದ ನಾಣ್ಯಗಳ ಶೈಲಿಯನ್ನು ಹೊಂದಿವೆ.

ಭಾರತೀಯ ರೂಪಾಯಿಗೆಷ್ಟು ಮೌಲ್ಯ
ಅಷ್ಟಕ್ಕೂ ಇಲ್ಲಿನ ಕರೆನ್ಸಿ ಕೈಲಾಸಿಯನ್​ ಡಾಲರ್​. ಜತೆಗೆ, ಇತರ ನಾಣ್ಯಗಳನ್ನು ಬಿಡುಗಡೆ ಮಾಡಲಾಗಿದೆ. ಇದರ ಮೌಲ್ಯವೆಷ್ಟು ಎಂಬುದು ಇನ್ನೂ ಗೊತ್ತಾಗಿಲ್ಲ. ಡಾಲರ್​ ಎಂದ ಮೇಲೆ ಅಮೆರಿಕನ್​ ಡಾಲರ್​ ಮೌಲ್ಯವೇ ಹೊಂದಿರಬಹದು ಎಂದು ಅಂದಾಜಿಸಲಾಗುತ್ತಿದೆ. ಭಾರತೀಯ ರೂ. ವಿನಿಮಯ ದರ ಅಂದಾಜು 75 ರ.ಗಳಿಬಹುದೆಂದು ಅಂದಾಜಿಸಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top