fbpx
ಸಮಾಚಾರ

ಧಾರ್ಮಿಕ ಭಾವನೆಗೆ ಧಕ್ಕೆ- “ನನ್ನಿಂದ ತಪ್ಪಾಗಿದೆ, ಕ್ಷಮಿಸಿ” ಎಂದು ಕ್ಷಮೆ ಕೇಳಿದ ಚಂದನ್

ಪ್ರಖ್ಯಾತ ಕನ್ನಡ ರ್ಯಾಪರ್‌ ಚಂದನ್ ಶೆಟ್ಟಿ ಮೇಲೆ ಮತ್ತೊಂದು ಆರೋಪ ಕೇಳಿಬಂದಿದೆ. ಚಂದನ್ ಶೆಟ್ಟಿ ತಾವೇ ಹಾಡಿ ಅಭಿನಯಿಸಿ ಬಿಡುಗಡೆ ಮಾಡಿದ ಕೋಲು ಮಂಡೆ ಎಂಬ ಹೊಸ ಹಾಡಿಗೆ ವಿರೋಧ ಕೇಳಿ ಬಂದಿದೆ.

ಮಲೈ ಮಹದೇಶ್ವರ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿರೋ ಆರೋಪ ಚಂದನ್ ಶೆಟ್ಟಿ ವಿರುದ್ಧ ಕೇಳಿಬಂದಿದೆ. ಚಂದನ್ ಶೆಟ್ಟಿ ಕೋಲು ಮಂಡೆ ಜಂಗಮ ದೇವ ಹಾಡನ್ನು ರೀಮಿಕ್ಸ್​ ಮಾಡಿದ್ದು ಬಿಡುಗಡೆಯಾಗಿರೋ ವಿಡಿಯೋದಲ್ಲಿ ಶರಣೆ ಸಂಕಣ್ಣೆಯನ್ನು ಅಶ್ಲೀಲವಾಗಿ ತೋರಿಸಲಾಗಿದೆ. ತುಂಡುಡುಗೆಯಲ್ಲಿ ತೋರಿಸಿ ಮಾದಪ್ಪನ ಭಕ್ತರ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ ಅಂತ ಆಕ್ರೋಶ ವ್ಯಕ್ತವಾಗಿದೆ.

 

 

ಮಲೆ ಮಹದೇಶ್ವರ ಸ್ವಾಮಿ ಗ್ರೂಪ್‍ನಲ್ಲಿ ಚಾಮರಾಜನಗರ ಜಿಲ್ಲೆಯ ಹಲವು ಯುವಕರು ಚಂದನ್ ವಿರುದ್ಧ ಕಿಡಿಕಾರಿದ್ದಾರೆ. ಹಾಡು ವೈರಲ್ ಆದ್ರೂ, ಚಾಮರಾಜನಗರದಲ್ಲಿ ಈ ಹಾಡಿಗೆ ವಿರೋಧ ವ್ಯಕ್ತವಾಗಿದೆ. ತಕ್ಷಣ ಆ ಹಾಡನ್ನು ಯೂಟ್ಯೂಬ್​ನಿಂದ ತೆಗೆಯಬೇಕು ಇಲ್ಲವಾದಲ್ಲಿ ಚಂದನ್​ ಮನೆ ಮುಂದೆ ಧರಣಿ ಮಾಡಬೇಕಾಗುತ್ತದೆ. ಹಾಗೂ ರಾಜ್ಯದಲ್ಲಿ ಅವರ ಕಾರ್ಯಕ್ರಮ ಬಹಿಷ್ಕರಿಸಬೇಕಾಗುತ್ತದೆ ಎಂದು ಆಗ್ರಹಿಸಿದ್ದಾರೆ.

 

 

ಈ ಸಂಬಂಧ ವಿಡಿಯೋ ಮಾಡಿ ಸ್ಪಷ್ಟನೆ ಕೊಟ್ಟ ಚಂದನ್, ಯಾರ ಭಾವನೆಗಳಿಗೂ ಧಕ್ಕೆ ಉಂಟು ಮಾಡಲು ಈ ಹಾಡನ್ನು ಮಾಡಿಲ್ಲ. ಈಗಿನ ಪೀಳಿಗೆಗೆ ನಮ್ಮ ಜಾನಪದ ತಲುಪಲಿ ಅನ್ನೋ ಕಾರಣಕ್ಕೆ ರ್ಯಾಪ್ ಹಾಡಿನ ರೂಪ ಕೊಟ್ಟಿದ್ದೆ. ಇದರಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಈಗಿನ ಪೀಳಿಗೆ ಮಕ್ಕಳಿಗೆ ಪ್ರಸ್ತುತ ಮ್ಯೂಸಿಕ್​ ಅನ್ನು ಮಿಕ್ಸ್​ ಮಾಡಿ ಇಂತಹ ಸಾಂಗ್​ ಅನ್ನು ನೀಡಿದಾಗ ಅದನ್ನು ಮುಂದಿನ ಪೀಳಿಗೆಗೆ ಅವರು ಕೊಂಡೊಯ್ಯುತ್ತಾರೆ ಎಂಬ ನಿಟ್ಟಿನಿಲ್ಲಿ ಈ ಸಾಂಗ್​ ಮಾಡಿದ್ದೇವೆ. ಈ ಹಾಡಿನಲ್ಲಿ ಬರುವ ಶಂಕಮ್ಮ ಪಾತ್ರಕ್ಕೆ ಅವಮಾನ ಮಾಡುವ ನಿಟ್ಟಿನಿಲ್ಲಿ ದೃಶ್ಯ ಚಿತ್ರೀಕರಣ ಮಾಡಿಲ್ಲ. ಏನಾದರೂ ತಪ್ಪಾಗಿದ್ದರೆ, ಅದು ನಮ್ಮ ಅರಿವೆ ಬರದೇ ಆಗಿರುತ್ತದೆ. ಹೀಗಾಗಿ ಯಾರು ಕೂಡ ಅನ್ಯತಾ ಭಾವಿಸಬೇಡಿ ಎಂದಿದ್ದಾರೆ.

ನಮ್ಮ ಸಂಸ್ಕೃತಿಯಲ್ಲಿ ಯಾವೆಲ್ಲಾ ಕಲೆಯಿಂದ ಎಂದು ಸಾರುವ ಉದ್ದೇಶದಿಂದ ಈ ಸಾಂಗ್​ ಮಾಡಿದೆ. ಇದಕ್ಕೆ ನಿಮ್ಮ ಸಹಕಾರ ಇರಲಿ. ಏನಾದರೂ ನಿಮಗೆ ಇದರಿಂದ ನೋವಾಗಿದ್ದರೆ ನಮ್ಮ ಇಡೀ ತಂಡದ ಪರವಾಗಿ ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆಂದು ಚಂದನ್​ ವಿಡಿಯೋ ಸಂದೇಶವನ್ನು ರವಾನಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top