fbpx
ಸಮಾಚಾರ

ಬಿಗ್ ಬ್ರೇಕಿಂಗ್: ಉತ್ತರ ಕೊರಿಯಾ ಸರ್ವಾಧಿಕಾರಿ ‘ಕಿಮ್’ ಸಾವು..?!

ಉತ್ತರ ಕೊರಿ­ಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ತೀವ್ರ ಅನಾರೋಗ್ಯಕ್ಕೊಳಗಾಗಿದ್ದು ಕೋಮಾಗೆ ಜಾರಿದ್ದಾರೆಂಬ ವರದಿಗಳ ಮಧ್ಯೆಯೇ ಅವರು ಮೃತಪಟ್ಟಿದ್ದಾರೆಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಸರ್ವಾ­­ಧಿಕಾರಿ ವ್ಯವಸ್ಥೆ ಇರುವಂತಹ ಉತ್ತರ ಕೊರಿಯಾ ಆಡಳಿತ ಈ ವಿಚಾರದಲ್ಲಿಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ಒಂದೊಮ್ಮೆ ಉನ್‌ ಸತ್ತಿರುವುದು ನಿಜವಾಗಿದ್ದರೂ ಅವರ ಉತ್ತರಾಧಿಕಾರಿ ನೇಮಕವಾದ ಬೆನ್ನಲ್ಲೇ ಸಾವಿನ ಸುದ್ದಿ ಘೋಷಿಸುವ ಸಾಧ್ಯತೆಗಳಿವೆ. ದಕ್ಷಿಣ ಕೊರಿಯಾದ ಕೆಲ ಮಾಧ್ಯಮಗಳು ಸರ್ವಾಕಾರಿ ಮೃತಪಟ್ಟಿದ್ದಾರೆ. ಈ ವಿಷಯವನ್ನು ಉತ್ತರ ಕೊರಿಯಾ ಆಡಳಿತ ಗೌಪ್ಯವಾಗಿರಿಸಿದೆ ಎಂದು ವರದಿ ಮಾಡಿದೆ.

ಅಂದಹಾಗೆ ಉತ್ತರ ಕೊರಿಯಾದಲ್ಲಿ ಸರ್ವಾಕಾರಿ ಮೃತಪಟ್ಟರೆ ಆ ಸಂಗತಿಯನ್ನು ತಕ್ಷಣ ಬಹಿರಂಗಗೊಳಿಸುವುದಿಲ್ಲ. ಉತ್ತರಾಧಿಕಾರಿಯನ್ನು ನೇಮಕ ಮಾಡಿ ಘೋಷಿಸಿದ ನಂತರವಷ್ಟೇ ಸಾವಿನ ಸುದ್ದಿಯನ್ನು ತಿಳಿಸುವ ಸಂಪ್ರದಾಯ ಅಲ್ಲಿ ಜಾರಿಯಲ್ಲಿದೆ.

36 ವರ್ಷದ ಕಿಮ್‌ ಜಾಂಗ್‌ ಉನ್‌ ಕಳೆದ ಕೆಲವು ತಿಂಗಳಿಂದ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಅವರಿಗೆ ತೀವ್ರ­ತರದ ಆರೋಗ್ಯ ಸಮಸ್ಯೆಗಳಿದ್ದು ಇತ್ತೀಚೆಗೆ ಕೋಮಾಗೆ ಜಾರಿದ್ದಾರೆಯೇ ಹೊರತು ಸತ್ತಿಲ್ಲ ಎಂದು ದ.ಕೊರಿಯಾದ ಅಧ್ಯಕ್ಷರಿಗೆ ರಾಜಕೀಯ ಕಾರ‍್ಯದರ್ಶಿ­ಯಾಗಿದ್ದ ಚಾಂಗ್‌ ಸಾಂಗ್‌ ಮಿನ್‌ ಹೇಳಿಕೆ ನೀಡಿದ್ದರು.

ಇದಾದ ಬಳಿಕ ಪತ್ರಕರ್ತ­ರೊಬ್ಬರು ಕಿಮ್‌ ಸತ್ತಿದ್ದು, ಉದ್ದೇಶಪೂರ್ವಕವಾಗಿಯೇ ಅದು ಅಂತಾರಾಷ್ಟ್ರೀಯ ಸಮುದಾಯದಿಂದ ಮುಚ್ಚಿಡುತ್ತಿದೆ ಎಂದು ಹೇಳಿದ ಬೆನ್ನಲ್ಲೇ ಸಾವಿನ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಉತ್ತರ ಕೊರಿಯಾದಿಂದ ಯಾವುದೇ ಪ್ರತಿಕ್ರಿಯೆ ಅಥವಾ ಸ್ಪಷ್ಟನೆ ದೊರೆತಿಲ್ಲ.

ಕಿಮ್ ಚೈನ್ ಸ್ಮೋಕರ್ ಆಗಿದ್ದು, ಆತನ ದೇಹದ ತೂಕ ಜಾಸ್ತಿಯಾಗಿದೆ. ಜೊತೆಗೆ ಕುಟುಂಬ ಈ ಹಿಂದೆಯಿಂದಲೂ ಹೃದಯರಕ್ತನಾಳದ ಸಮಸ್ಯೆಯನ್ನು ಬಳಲಿದ್ದ ಇತಿಹಾಸವನ್ನು ಹೊಂದಿದೆ ಎಂದು ವರದಿಯಾಗಿದೆ. ಈ ಕಾರಣದಿಂದ ಆತನ ಆರೋಗ್ಯ ಹದಗೆಟ್ಟಿದ್ದು ಆತ ಸಾವನ್ನಪ್ಪಿರಬಹುದು ಎಂದು ಹೇಳಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top