fbpx
ಸಮಾಚಾರ

ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆ: ಚಂದನ್ ಶೆಟ್ಟಿ ವಿರುದ್ಧ ದೂರು ದಾಖಲು

ಚಂದನ್ ಶೆಟ್ಟಿ ಅವರು ಕೋಲುಮಂಡೆ ಹಾಡಿನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಮಹಾದೇಶ್ವರನ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಚಂದನ್ ಶೆಟ್ಟಿ ವಿರುದ್ಧ ದೂರು ಸಹ ದಾಖಲಾಗಿದೆ.

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಚಂದನ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ. ಬಜರಂಗದಳ ಮುಖಂಡ ತೇಜಸ್ ಗೌಡ ಅವರು ಚಂದನ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ಸಂಬಂಧ ಕಬ್ಬನ್ ಪಾರ್ಕ್ ಪೊಲೀಸರು ಎನ್‍ಸಿಆರ್(ಗಂಭೀರವಲ್ಲದ ಪ್ರಕರಣ) ದಾಖಲು ಮಾಡಿದ್ದಾರೆ. ದೂರು ಸ್ವೀಕರಿಸಿ NCR ದಾಖಲು ಮಾಡಿರೋ ಪೊಲೀಸರು, ಪ್ರಕರಣ ಸಂಬಂಧ ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಮುಂದಾಗಿದ್ದಾರೆ.

ಏನಿದು ವಿವಾದ:
ಚಂದನ್ ಶೆಟ್ಟಿ ಕೋಲು ಮಂಡೆ ಜಂಗಮ ದೇವ ಹಾಡನ್ನು ರೀಮಿಕ್ಸ್​ ಮಾಡಿದ್ದು ಬಿಡುಗಡೆಯಾಗಿರೋ ವಿಡಿಯೋದಲ್ಲಿ ಶರಣೆ ಸಂಕಣ್ಣೆಯನ್ನು ಅಶ್ಲೀಲವಾಗಿ ತೋರಿಸಲಾಗಿದೆ. ತುಂಡುಡುಗೆಯಲ್ಲಿ ತೋರಿಸಿ ಮಾದಪ್ಪನ ಭಕ್ತರ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ ಅಂತ ಆಕ್ರೋಶ ವ್ಯಕ್ತವಾಗಿದೆ.

ಶಿವಶರಣೆ ಸಂಕಮ್ಮನ ಬಗ್ಗೆ ಅಶ್ಲೀಲ ಪ್ರದರ್ಶಿಸಲಾಗಿದೆ ಮತ್ತು ಭಕ್ತಿ ಗೀತೆಯನ್ನು ತಿರುಚಲಾಗಿದೆ. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಕ್ಷಮೆ ಕೇಳಿದ ಚಂದನ್:
ಈ ಸಂಬಂಧ ವಿಡಿಯೋ ಮಾಡಿ ಸ್ಪಷ್ಟನೆ ಕೊಟ್ಟ ಚಂದನ್, ಯಾರ ಭಾವನೆಗಳಿಗೂ ಧಕ್ಕೆ ಉಂಟು ಮಾಡಲು ಈ ಹಾಡನ್ನು ಮಾಡಿಲ್ಲ. ಈಗಿನ ಪೀಳಿಗೆಗೆ ನಮ್ಮ ಜಾನಪದ ತಲುಪಲಿ ಅನ್ನೋ ಕಾರಣಕ್ಕೆ ರ್ಯಾಪ್ ಹಾಡಿನ ರೂಪ ಕೊಟ್ಟಿದ್ದೆ. ಇದರಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಈಗಿನ ಪೀಳಿಗೆ ಮಕ್ಕಳಿಗೆ ಪ್ರಸ್ತುತ ಮ್ಯೂಸಿಕ್​ ಅನ್ನು ಮಿಕ್ಸ್​ ಮಾಡಿ ಇಂತಹ ಸಾಂಗ್​ ಅನ್ನು ನೀಡಿದಾಗ ಅದನ್ನು ಮುಂದಿನ ಪೀಳಿಗೆಗೆ ಅವರು ಕೊಂಡೊಯ್ಯುತ್ತಾರೆ ಎಂಬ ನಿಟ್ಟಿನಿಲ್ಲಿ ಈ ಸಾಂಗ್​ ಮಾಡಿದ್ದೇವೆ. ಈ ಹಾಡಿನಲ್ಲಿ ಬರುವ ಶಂಕಮ್ಮ ಪಾತ್ರಕ್ಕೆ ಅವಮಾನ ಮಾಡುವ ನಿಟ್ಟಿನಿಲ್ಲಿ ದೃಶ್ಯ ಚಿತ್ರೀಕರಣ ಮಾಡಿಲ್ಲ. ಏನಾದರೂ ತಪ್ಪಾಗಿದ್ದರೆ, ಅದು ನಮ್ಮ ಅರಿವೆ ಬರದೇ ಆಗಿರುತ್ತದೆ. ಹೀಗಾಗಿ ಯಾರು ಕೂಡ ಅನ್ಯತಾ ಭಾವಿಸಬೇಡಿ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top