fbpx
ಸಮಾಚಾರ

ನಟ ಯಶ್​ಗಾಗಿ ರೆಡಿಯಾಗಿದ್ದ KGF ಮಾದರಿಯ ಬೈಕ್​ ಸೀಜ್

ಕೆಜಿಎಫ್ ಸಿನಿಮಾದ ರಾಕಿ ಹೆಸರಿನ ಬೈಕ್ ಫಿಲ್ಮ್ ರಿಲೀಸ್ ನಂತರ ಯುವಕರಲ್ಲಿ ಸಖತ್ ಟ್ರೆಂಡ್​ ಹುಟ್ಟಿಹಾಕಿತ್ತು. ಹೊಸಕೋಟೆಯ ಯಶ್ ಅಭಿಮಾನಿಗಳು ಬೈಕೊಂದನ್ನು ಕೆಜಿಎಫ್ ಚಿತ್ರದಲ್ಲಿದ್ದಂತೆ ರೆಡಿ ಮಾಡಿಸಿದ್ದು, ಈ ಬೈಕನ್ನು ಪೊಲೀಸರು ಈಗ ಸೀಜ್ ಮಾಡಿದ್ದಾರೆ.

 

 

ಹೊಸಕೋಟೆ ಯಶ್ ಅಭಿಮಾನಿಗಳ ಸಂಘದ ಕಾರ್ಯದರ್ಶಿ ಸುನೀಲ್ ರಾಕಿ ಭಾಯ್​ಗೆ ಉಡುಗೊರೆಯಾಗಿ ನೀಡಲು ರೆಡಿ ಮಾಡಿದ್ದ ಬೈಕ್​ನಲ್ಲಿ ವೀಲಿಂಗ್ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಈ ಬೈಕ್ ಯಶ್​ಗೆ ಕೊಡೊ ಮೊದಲೇ ಕೆ‌.ಆರ್ ಪುರಂ ಮುಖ್ಯ ರಸ್ತೆಯಲ್ಲಿ ಜೋರು ಸೌಂಡ್ ಮಾಡ್ಕೊಡು ಸುನೀಲ್ ಮತ್ತು ಆತನ ಸ್ನೇಹಿತರು ವೀಲಿಂಗ್ ಮಾಡ್ತಿದ್ರು. ಈ ವೇಳೆ ಕೆ.ಆರ್ ಪುರಂ ಸಂಚಾರಿ ಪೊಲೀಸರ ಕೈಗೆ ಸುನಿಲ್ ಸಿಕ್ಕಿಬಿದ್ದಿದ್ದಾನೆ. ಬೈಕ್​ಅನ್ನು ಈಗಾಗಲೆ ಪೊಲೀಸರು ವಶಕ್ಕೆ ಪಡೆದಿದ್ದು ಆರೋಪಿ ಸುನೀಲ್​ನನ್ನು ವಿಚಾರಣೆ ನಡೆಸ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top