fbpx
ಸಮಾಚಾರ

‘ಕೆಜಿಎಫ್​-2’ನಲ್ಲಿ ಅನಂತ್​ನಾಗ್​ ಬದಲಿಗೆ ಪ್ರಕಾಶ್​ ರೈ: ರಾಖಿಭಾಯ್ ಅಖಾಡಕ್ಕೆ ಎಂಟ್ರಿಕೊಟ್ಟ ಬಹುಭಾಷಾ ನಟ

ಭಾರತೀಯ ಚಿತ್ರರಂಗ ಎದುರು ನೋಡುತ್ತಿರುವ ಸಿನಿಮಾ ‘ಕೆಜಿಎಫ್ ಚಾಪ್ಟರ್-2’ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಿದೆ. ಮಿನರ್ವ ಮಿಲ್‍ನಲ್ಲಿ ಹಾಕಲಾಗಿರುವ ಅದ್ಧೂರಿ ಸೆಟ್‍ನಲ್ಲಿ ಚಿತ್ರೀಕರಣವನ್ನು ಶುರು ಮಾಡಲಾಗಿದೆ. ಇದೀಗ ಕೆಜಿಎಫ್ ಚಿತ್ರತಂಡಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಹೊಸದಾಗಿ ಸೇರಿಕೊಂಡಿದ್ದಾರೆ. ಆದರೆ ಪ್ರಕಾಶ್ ರೈ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಚಿತ್ರರಂಡ ರಿವೀಲ್ ಮಾಡಿಲ್ಲ.

ಮೂಲಗಳ ಪ್ರಕಾರ ‘ಕೆಜಿಎಫ್​​ ಚಾಪ್ಟರ್ 1’ರಲ್ಲಿ ಹಿರಿಯ ನಟ ಅನಂತ್​ ನಾಗ್​ ಮಾಡಿದ್ದ ಪಾತ್ರದಲ್ಲಿ ಈ ಬಾರಿ ಪ್ರಕಾಶ್​ ರೈ ಕಾಣಿಸಿಕೊಳ್ತಿದ್ದಾರೆ ಎನ್ನಲಾಗಿದೆ. ಆನಂದ್​ ಇಂಗಳಗಿ ಎಂಬ ಪಾತ್ರವನ್ನ ನಟ ಅನಂತ್​ನಾಗ್​ ಕೆಜಿಎಫ್​ ಮೊದಲ ಭಾಗದಲ್ಲಿ ನಿಭಾಯಿಸಿದ್ದರು. ಇದೀಗ ಆ ಪಾತ್ರದ ಜಾಗದಲ್ಲಿ ಪ್ರಕಾಶ್ ರೈ ಕುಳಿತಿದ್ದಾರೆ.

ಅನಂತ್ ನಾಗ್ ಕೆಜಿಎಫ್ ಸಿನಿಮಾದಿಂದ ಹೊರ ನಡೆದಿದ್ದು, ಅವರ ಪಾತ್ರದ ಬದಲು ಪ್ರಕಾಶ್ ರೈ ನಟಿಸಲಿದ್ದಾರೆ. ಚಾಪ್ಟರ್ 2ನಲ್ಲಿ ರಾಕಿ ಕುರಿತು ಕಥೆ ಹೇಳುವ ವೇಳೆ ಆನಂದ್ ಇಂಗಳಗಿ (ಅನಂತ್​ನಾಗ್​) ಮುಂದಿನ ಕಥೆಯನ್ನು ನನ್ನ ಶಿಷ್ಯ ಹೇಳುತ್ತಾನೆ ಅಂತ ಪ್ರಕಾಶ್ ರೈ ಪಾತ್ರವನ್ನು ಪರಿಚಯಿಸುತ್ತಾರೆ ಅಂತ ಮೂಲಗಳು ತಿಳಿಸಿವೆ.

ಸದ್ಯಕ್ಕೆ ನಟಿ ಮಾಳವಿಕಾ ಅವಿನಾಶ್ ಹಾಗೂ ಪ್ರಕಾಶ್ ರೈ ಕಾಂಬಿನೇಷನ್ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಕೆಜಿಎಫ್ ಚಿತ್ರತಂಡ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top