fbpx
ಸಮಾಚಾರ

ಕೊನೆಗೂ ಫಿಕ್ಸ್ ಆಯ್ತು ಜೂನಿಯರ್ ಯಶ್‍ಗೆ ಹೆಸರು

ಯಶ್‌-ರಾಧಿಕಾ ಮಗಳಿಗೆ ಆಯ್ರಾ ಎಂದು ಹೆಸರಿಟ್ಟಿದ್ದಾರೆ. ಆದರೆ, ಮಗನ ಹೆಸರೇನು ಎಂಬುದು ಮಾತ್ರ ಈವರೆಗೂ ಬಹಿರಂಗಗೊಂಡಿಲ್ಲ. ಆದರೆ, ಈಗ ಆ ಬಗ್ಗೆಯೂ ರಾಧಿಕಾ ಮಾಹಿತಿ ನೀಡಿದ್ದಾರೆ.

ಆಯ್ರಾ ಅಕ್ಷರದ ಮೊದಲ ಹೆಸರು ಆ ಹಾಗೂ ಯಶ್ ಹೆಸರನ್ನು ಸೇರಿಸಿ ಆಯುಷ್ ಎಂದು ನಾಮಕರಣ ಮಾಡಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸದ್ಯ, ರಾಧಿಕಾ ಪಂಡಿತ್ ಈ ಎಲ್ಲ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ. ಮಗನಿಗೆ ಆಯುಷ್ ಎಂದು ನಾಮಕರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ ಶೀಘ್ರವೇ ಮಗನಿಗೆ ಹೊಸ ಹೆಸರನ್ನ ನಾಮಕರಣ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಶೀಘ್ರವೇ ಹೆಸರು ಬಹಿರಂಗ ಮಾಡುವ ಸೂಚನೆ ನೀಡಿದ್ದಾರೆ.

 

 

ರಾಧಿಕಾ ತಮ್ಮ ಇನ್ಸ್​ಟಾಗ್ರಾಮ್​ ಹಾಗೂ ಫೇಸ್​ಬುಕ್​ನಲ್ಲಿ ಮಗನ ಫೋಟೋವೊಂದನ್ನ ಪೋಸ್ಟ್​ ಮಾಡಿ, ‘ನನ್ನ ಮುಂಜಾನೆಯ ಖುಷಿಯ ಡೋಸ್. ಅತೀ ಹೆಚ್ಚು ಬಾರಿ ಕೇಳಲಾದ ಪ್ರಶ್ನೆಗೆ ಅತೀ ಶೀಘ್ರದಲ್ಲಿ ಉತ್ತರ ಸಿಗಲಿದೆ. ಕೊನೆಗೂ ಜೂನಿಯರ್​ಗೆ ಹೆಸರು ಸಿಗೋ ಟೈಮ್​ ಬಂತು. ನಿಮಗೆಲ್ಲಾ ತಿಳಿಸುತ್ತೇವೆ.. ಅಂದಹಾಗೆ ನಮ್ಮ ಮಗನಿಗೆ ‘ಆಯುಷ್’ ಅಂತ ಹೆಸರಿಟ್ಟಿಲ್ಲ’ ಅಂತ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top