fbpx
ಸಮಾಚಾರ

KGF-2 ಸಿನೆಮಾ ಬಹಿಷ್ಕರಿಸುವಂತೆ ಬಿಜೆಪಿ ಬೆಂಬಲಿಗರಿಂದ #Boycott_KGF_chapter2 ಅಭಿಯಾನ.

ಬಹುನಿರೀಕ್ಷಿತ ಕೆಜಿಎಫ್​ ಚಾಪ್ಟರ್ 2 ತಂಡ ಚಿತ್ರೀಕರಣಕ್ಕೆ ಚಾಲನೆ ನೀಡಿದೆ. ಇದೀಗ ಮೊದಲ ದಿನದ ಶೂಟಿಂಗ್​ನ ಫೋಟೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕೆಜಿಎಫ್ ನಲ್ಲಿ ಪ್ರಕಾಶ್ ರಾಜ್ ಗೆ ಪ್ರಮುಖ ಪಾತ್ರವೊಂದನ್ನು ಕೊಡಲಾಗಿದ್ದು ರೈ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ. ಪ್ರಕಾಶ್ ರೈ ಕೆಜಿಎಫ್ ನಲ್ಲಿ ಇದ್ದಾರೆ ಎಂಬ ಕಾರಣಕ್ಕೆ ಬಿಜೆಪಿ ಫುಲ್ ಗರಂ ಆಗಿದ್ದಾರೆ.

 

 

ಪ್ರಕಾಶ್ ರೈ ಚಿತ್ರದಲ್ಲಿ ನಟಿಸಿದರೆ ನಾವು ಕೆಜಿಎಫ್ -2 ಸಿನೆಮಾ ಬಾಯ್ಕಾ​ಟ್ ಮಾಡಿದ್ದೇವೆ ಅಂತ ಬಿಜೆಪಿ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜೊತೆ #Boycott_KGF_chapter_2 ಹ್ಯಾಶ್ ಟ್ಯಾಗ್ ನಡಿಯಲ್ಲಿ ಟ್ವೀಟ್ ಮಾಡುವ ಮೂಲಕ ಚಿತ್ರತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

 

ಪ್ರಕಾಶ್ ರಾಜ್ ರನ್ನು ಕೆಜಿಎಫ್ ಚಿತ್ರದಿಂದ ಕೈ ಬಿಡಬೇಕು ಇಲ್ಲದಿದ್ದರೆ ನಾವು ಚಿತ್ರವನ್ನು ಬಹಿಷ್ಕರಿಸುತ್ತೇವೆ ಎಂಬಂತ ಪೋಸ್ಟ್ ಗಳನ್ನೂ ಹಾಕಿ ಚಿತ್ರತಂಡದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಅಸಮಾಧಾನದ ಕಿಡಿ ಕಜಿಎಫ್​ ಸಿನಿಮಾದ ರಿಲೀಸ್​ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದಕ್ಕೆ ಕಾಲವೇ ಉತ್ತರಿಸಲಿದೆ.

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top