fbpx
ಸಮಾಚಾರ

ನಟಿ ರಮ್ಯಾಗೆ ಶುರು ಆಗಿದೆ ಹೊಸ ಸಮಸ್ಯೆ: ಫ್ಯಾನ್ಸ್‌ಗೆ ಪ್ರಶ್ನೆ, ನೀವೇ ಸಹಕರಿಸಿ!

ಸಿನಿಮಾದಿಂದ ದೂರಾಗಿ, ಈಗ ರಾಜಕೀಯದಲ್ಲೂ ಗ್ಯಾಪ್‌ ಪಡೆದುಕೊಂಡಿರುವ ರಮ್ಯಾ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚು ಸಕ್ರಿಯ ಆಗಿದ್ದಾರೆ. ಇಷ್ಟದ ಫೋಟೋಗಳನ್ನು ಹಂಚಿಕೊಳ್ಳುತ್ತ, ಸೆಲೆಬ್ರಿಟಿ ಸ್ನೇಹಿತರ ಪೋಸ್ಟ್‌ಗಳಿಗೆ ಕಾಮೆಂಟ್‌ ಮಾಡುತ್ತ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ಅವರಿಗೆ ಸೈಬರ್‌ ಕಿಡಿಗೇಡಿಗಳು ಕಾಟ ಕೊಡಲು ಆರಂಭಿಸಿದ್ದಾರೆ. ಅವರ ಅಕೌಂಟ್ ಹ್ಯಾಕ್‌ ಆಗಿದೆ ಎನ್ನಲಾಗುತ್ತಿದೆ.

 

 

ರಮ್ಯಾ ಅಕೌಂಟ್‌ನಲ್ಲಿ ಆಗಿದ್ದೇನು?:
ಅಗಸ್ಟ್‌ 26ರಂದು ವಿಶ್ವ ಶ್ವಾನಗಳ ದಿನದಂದು ತಮ್ಮ ಮುದ್ದಿನ ಸಾಕು ನಾಯಿಗಳ ಪೋಟೋ ಶೇರ್ ಮಾಡಿಕೊಂಡ ನಂತರ ರಮ್ಯಾ ಅಕೌಂಟ್‌ನಲ್ಲಿ ಏನೋ ಸಮಸ್ಯೆ ಸೃಷ್ಟಿಯಾಗಿದೆ. ಈ ಹಿಂದೆ ಶೇರ್ ಮಾಡಲಾಗಿದ್ದ ಪೋಟೋಗಳೂ ಕಾಣಿಸುತ್ತಿಲ್ಲ. ಆದರೆ ಇನ್‌ಸ್ಟಾಗ್ರಾಂ ಸ್ಟೋರಿ ಮಾತ್ರ ಎಲ್ಲರಿಗೂ ಕಾಣಿಸುತ್ತಿದೆ. ಈ ಸಮಸ್ಯೆಯನ್ನು ಬಗೆ ಹರಿಸಲು ದಿನವಿಡೀ ಶ್ರಮಿಸಿದರೂ ಫಲ ಸಿಗಲಿಲ್ಲವೆಂದು ಅಭಿಮಾನಿಗಳಲ್ಲಿ ನೋವು ತೋಡಿಕೊಂಡಿದ್ದಾರೆ.

 

 

ರಮ್ಯಾ ಈವರೆಗೆ ಒಟ್ಟು 73 ಪೋಸ್ಟ್ಗಳನ್ನು ಹಾಕಿದ್ದಾರೆ. ಆದರೆ, ಅವರ ವಾಲ್ ಮೇಲೆ ಯಾವುದೇ ಪೋಸ್ಟ್ಗಳು ಕೂಡ ಕಾಣುತ್ತಿಲ್ಲ. ಈ ಬಗ್ಗೆ ಬರೆದುಕೊಂಡಿರುವ ರಮ್ಯಾ, ಇಡೀ ದೀನ ಇದೇ ರೀತಿ ಆಗುತ್ತಿದೆ. ಯಾವುದೇ ಪೋಸ್ಟ್ಗಳು ಕೂಡ ಕಾಣುತ್ತಿಲ್ಲ. ರಿಫ್ರೆಶ್ ಮಾಡಿದರೂ ಕೂಡ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top