fbpx
ಸಮಾಚಾರ

ನಟ ರವಿಶಂಕರ್ ಗೌಡ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ಕಳುಹಿಸಿದ ಸುದೀಪ್

ಪ್ರತಿಭಾನ್ವಿತ ಕಲಾವಿದ ಹಾಗೂ ಹಾಡುಗಾರ ರವಿಶಂಕರ್ ಗೌಡ ಅವರಿಗೆ ನೆನ್ನೆ ಹುಟ್ಟುಹಬ್ಬ. ರವಿಶಂಕರ್ ಗೌಡ ಬರ್ತಡೇ ಪ್ರಯುಕ್ತ ಕಿಚ್ಚ ಸುದೀಪ್ ವಿಶೇಷವಾದ ಕೇಕ್ ಕಳುಹಿಸಿದ್ದಾರೆ.

ಹೈದರಾಬಾದ್‌ನಲ್ಲಿ ಫ್ಯಾಂಟಮ್‌ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸುದೀಪ್ ಬೆಂಗಳೂರಿನ ನಿವಾಸಿಯಾಗಿರುವ ಡಾಕ್ಟರ್‌ ವಿಠ್ಠಲ್ ರಾವ್‌ ಅಲಿಯಸ್‌ ರವಿಶಂಕರ್ ಅವರ ಹುಟ್ಟುಹಬ್ಬಕ್ಕೆ ಸ್ಪೆಷಲ್ ಮೆಜೇಸ್‌ ಬರೆದು ಕೇಕ್‌ ಕಳುಹಿಸಿದ್ದಾರೆ. ‘No matter what the situation will be for you, Kiccha’ ಎಂದು ಬರೆಯಲಾಗಿದೆ.

 

 

ಹೀಗೆ ಸರ್ಪ್ರೈಸ್‌ ಆಗಿ ಬಂದ ಕೇಕ್‌ ಕಂಡು ರವಿಶಂಕರ್‌ ಗೌಡ ಖುಷಿಯಾಗಿದ್ದಾರೆ. ಕೇಕ್‌ನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು, ‘ಸ್ನೇಹದ ಸಲುಗೆ ಎಷ್ಟೇ ಇದ್ದರು.. ದೊಡ್ಡ ಗುಣವನ್ನು ಗೌರವಿಸಲೇಬೇಕು.. ಕಿಚ್ಚನಿಂದ ಕುಚೇಲನ ಮನೆಗೆ ಸ್ನೇಹದ ಪ್ರತೀಕ.. ಸಿಹಿ ಊರಣದ ಉಡುಗೊರೆ ರವಾನೆ.. ಈ ಅಸೀಮ ಪ್ರೀತಿಗೆ ಧನ್ಯವಾದಗಳು ದೀಪು..’ ಎಂದು ಬರೆದುಕೊಂಡಿದ್ದಾರೆ.

 

 

ಇನ್ನು, ‘ಕಿಚ್ಚ’ ಸುದೀಪ್‌ ಟ್ವಿಟ್ಟರ್‌ನಲ್ಲಿ ರವಿಶಂಕರ್‌ ಗೌಡಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ‘ನನ್ನ ಪ್ರೀತಿಯ ಗೆಳೆಯನಿಗೆ ಜನ್ಮದಿನದ ಶುಭಾಶಯಗಳು. ಎಲ್ಲರಲ್ಲೂ ನಗುವನ್ನು ಮೂಡಿಸುವ ನಿನಗೆ ಉತ್ತಮ ಆರೋಗ್ಯ, ಯಶಸ್ಸು ಸಿಗಲಿ’ ಎಂದು ಹಾರೈಸಿದ್ದಾರೆ ಕಿಚ್ಚ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top