fbpx
ಸಮಾಚಾರ

ಅಪ್ಪ ಆಗ್ತಿದ್ದಾರೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ: ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ವಿರುಷ್ಕಾ

ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಪ್ಪ ಆಗುತ್ತಿದ್ದಾರೆ. ಹೌದು, ವಿರಾಟ್ ಪತ್ನಿ ಅನುಷ್ಕಾ ಶರ್ಮ ಈಗ ಗರ್ಭಿಣಿ. ಈ ವಿಚಾರವನ್ನು ಸ್ವತಃ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಬಹಿರಂಗಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋ ಹಾಕಿರುವ ಅನುಷ್ಕಾ, ನಾವು ಈಗ ಇಬ್ಬರಲ್ಲ ಮೂವರು ಎಂದು ಹೇಳಿದ್ದಾರೆ. ಈ ಮೂಲಕ ಅನುಷ್ಕಾ ಗರ್ಭಿಣಿ ಎಂಬುದನ್ನು ಅಧಿಕೃತಗೊಳಿಸಿದ್ದಾರೆ.

 

 

ಅನುಷ್ಕಾ ಶರ್ಮಾ ಹಾಗೂ ವಿರಾಟ್​ ಕೊಹ್ಲಿ 2017ರಲ್ಲಿ ವಿವಾಹವಾಗಿದ್ದರು. ದೂರದ ಇಟಲಿಗೆ ತೆರಳಿ ಮದುವೆಯಾಗಿದ್ದರು. ಮದುವೆಯಾಗಿ ಮೂರು ವರ್ಷಗಳ ನಂತರದಲ್ಲಿ ಈ ದಂಪತಿ ಸಿಹಿ ಸುದ್ದಿ ನೀಡಿದೆ. ವಿರಾಟ್​ ಹಾಗೂ ಅನುಷ್ಕಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top