fbpx
ಸಮಾಚಾರ

“ರಾಜಕೀಯ ಪ್ರವೇಶಿಸಬೇಕಾ’ ಟ್ವಿಟ್ಟರ್ ಪೋಸ್ಟ್: ಯದುವೀರ್ ಒಡೆಯರ್ ಸ್ಪಷ್ಟನೆ

ಮೈಸೂರಿನ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ? ಒಡೆಯರ್‌ ಸೇರುವುದಾದರೂ ಯಾವ ಪಕ್ಷಕ್ಕೆ? ಇಂತಹದೊಂದು ಚರ್ಚೆ ಇದೀಗ ಟ್ವಿಟರ್‌ನಲ್ಲಿ ನಡೆಯುತ್ತಿದೆ. ಇದಕ್ಕೆ ಕಾರಣವಾಗಿದ್ದು ಅವರ ಹೆಸರಿನಲ್ಲಿ ಮಾಡಿರುವಂತಹ ಒಂದು ಟ್ವೀಟ್‌.

ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹೆಸರಲ್ಲಿ ಕಿಡಿಗೇಡಿಗಳು ಫೇಕ್​ ಟ್ವಿಟರ್​ ಖಾತೆ ರಚಿಸಿದ್ದಾರೆ. ಅಷ್ಟೇ ಅಲ್ಲದೆ ನಾನು ರಾಜಕಾರಣ ಪ್ರವೇಶಿಸಲೇ…? ಎಂದು ಜನರನ್ನು ಪ್ರಶ್ನಿಸಿ ಯದುವೀರ್​ ಒಡೆಯರ್ ಹೆಸರಲ್ಲಿ ಪೋಲ್​ ಹಾಕಿದ್ದಾರೆ.

 

 

ಆದರೆ ಈ ಪೋಸ್ಟ್ ಕುರಿತು ಯದುವೀರ್ ಒಡೆಯರ್ ಅವರೇ ಖುದ್ದು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಅಕೌಂಟ್ ತೆರೆದಿರುವ ವಿಷಯನ್ನು ಗಮನಿಸಿದ ಯದುವೀರ್ ಒಡೆಯರ್, ಟ್ವಿಟ್ಟರ್ ನಲ್ಲಿ ತಮ್ಮ ಹೆಸರಿನಲ್ಲಿರುವುದು ಫೇಕ್ ಅಕೌಂಟ್ ಎಂದು ಸ್ಕ್ರೀನ್ ಶಾಟ್ ತೆಗೆದು ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top