fbpx
ಸಮಾಚಾರ

ನನಗೆ ರಕ್ಷಣೆ ಬೇಕು,ನನ್ನ ತಂದೆಯೇ ನನ್ನನ್ನು ಕೊಲ್ಲಲು ಬರುತ್ತಿದ್ದಾರೆ” ಕಣ್ಣೀರಿಟ್ಟ ಕಿರುತೆರೆ ನಟಿ

ಧಾರಾವಾಹಿ ಹಾಗೂ ಸಿನಿಮಾ ನಟಿ ತೃಪ್ತಿ ಶಂಖ್ದಾರ್‍ಗೆ ಆಕೆಯ ತಂದೆಯೇ ಕೊಲೆ ಬೆದರಿಕೆ ಹಾಕಿರುವ ವಿಚಾರವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಸ್ವತಃ ನಟಿಯೇ ವಿಡಿಯೋ ಮಾಡಿ ತನ್ನ ತಂದೆಯ ವಿರುದ್ಧ ಆರೋಪ ಮಾಡಿದ್ದಾಳೆ. ಅಲ್ಲದೆ ತನಗೆ ರಕ್ಷಣೆ ನೀಡುವಂತೆ ಆಕೆ ವಿಡಿಯೋ ಮೂಲಕ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾಳೆ.

ತಂದೆಯ ಕುರಿತು ಐದು ವಿಡಿಯೋಗಳನ್ನು ಇನ್‌ಸ್ಟಾಗ್ರಾಂ ನಲ್ಲಿ ಹಾಕಿರುವ ನಟಿ ತೃಪ್ತಿ, ‘ನನ್ನ ತಂದೆ ನನಗೆ ಕಿರುಕುಳ ನೀಡುತ್ತಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನನ್ನು ಕತ್ತಿಯಿಂದ ಕತ್ತರಿಸಲು ಸಹ ಯತ್ನಿಸಿದರು’ ಎಂದಿರುವ ನಟಿ ಕೈ ಮೇಲೆ ಆಗಿರುವ ಗಾಯದ ಗುರುತು ಸಹ ವಿಡಿಯೋದಲ್ಲಿ ತೋರಿಸಿದ್ದಾರೆ.

ಯಾವುದೋ ಹುಡುಗನೊಂದಿಗೆ ಮದುವೆ ಆಗುವಂತೆ ನನ್ನನ್ನು ಪೀಡಿಸುತ್ತಿದ್ದಾರೆ. ನನಗಿನ್ನೂ ಹತ್ತೊಂಬತ್ತು ವರ್ಷ ವಯಸ್ಸು. ನನಗೆ ಆ ವ್ಯಕ್ತಿಯೊಂದಿಗೆ ಮದುವೆ ಆಗಲು ಇಷ್ಟವಿಲ್ಲ. ಆದರೆ ಅಪ್ಪ ನನ್ನನ್ನು ಬಿಡುತ್ತಿಲ್ಲ. ನನಗೆ ಯಾರಾದರೂ ಸಹಾಯ ಮಾಡಿ ಎಂದು ಅಂಗಲಾಚಿದ್ದಾರೆ ನಟಿ.

ಹಿಂದಿಯ ಪ್ರಸಿದ್ಧ ಕುಂಕುಮ ಭಾಗ್ಯ ಧಾರವಾಹಿ ನಟಿ ತೃಪ್ತಿ ಶಂಖಧರ್ ಉತ್ತರ ಪ್ರದೇಶದ ಬರೇಲಿ ಮೂಲದವರು. ನಟಿಯಾಗಬೇಕೆಂದು ಉತ್ತರ ಪ್ರದೇಶದಿಂದ ಮುಂಬೈಗೆ ತೃಪ್ತಿಯನ್ನು ಕಳುಹಿಸಿಕೊಟ್ಟಿದ್ದರು ಆಕೆಯ ತಂದೆ ರಾಮ್ ರತನ್ ಶಂಖಧರ್. ಮುಂಬೈಗೆ ಬಂದಿದ್ದ ತೃಪ್ತಿ ಕುಂಕುಮ್ ಭಾಗ್ಯ ಧಾರವಾಹಿಯಲ್ಲಿ ನಟಿಸಿದ್ದಳು. ಅದಲ್ಲದೆ ದಕ್ಷಿಣ ಭಾರತದ ಚಿತ್ರಗಳಲ್ಲಿಯೂ ನಟಿಸಿದ್ದಳು.

ಅಲ್ಲದೆ ಫಿಲಂ ಇಂಡಸ್ಟ್ರಿಗೆ ಸೇರಿಕೊಳ್ಳಲು ಮುಂಬೈಗೆ ತೆರಳಿದ್ದಾಗ ಕೊಟ್ಟ ಹಣವನ್ನು ವಾಪಸ್ ನೀಡುವಂತೆ ಗದರಿಸುತ್ತಿದ್ದಾರೆ ಅಂತ ಕೂಡ ತೃಪ್ತಿ ವಿಡಿಯೋದಲ್ಲಿ ಹೇಳಿಕೊಳ್ಳುವ ಮೂಲಕ ತಂದೆಯ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top