fbpx
ಸಮಾಚಾರ

ಬಹುಕಾಲದ ಗೆಳತಿಯೊಂದಿಗೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್ ಖ್ಯಾತಿಯ ನಟ ವಿನಾಯಕ್ ಜೋಶಿ

ಕಿರುತೆರೆ ಮತ್ತು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಸೆಳೆದಿರುವ ನಟ ವಿನಾಯಕ್ ಜೋಶಿ ಇಂದು (ಆಗಸ್ಟ್ 28) ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ವರ್ಷ ಬೆಳವಾಡಿ ಜೊತೆ ಶುಕ್ರವಾರ ನವಜೀವನ ಆರಂಭಿಸಿದ್ದಾರೆ.

ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ವಿವಾಹ ಸಮಾರಂಭ ನಡೆಯಿತು. 15 ರಿಂದ 55 ವರ್ಷದೊಳಗಿನವರಿಗಷ್ಟೇ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶವಿರುವುದರಿಂದ, ಮದುವೆಯಲ್ಲಿ ಸ್ನೇಹಿತರು ಮತ್ತು ಆಪ್ತರಷ್ಟೇ ಭಾಗಿಯಾಗಿದ್ದರು. ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಸ್ನೇಹಿತರಿಗಾಗಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಿದ್ದಾರೆ.

ವರ್ಷಾ ಬೆಳವಾಡಿ ಅವರು ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಖ್ಯಾತಿ ಪಡೆದಿದ್ದಾರೆ. ಇವರಿಬ್ಬರಿಗೆ ಬ್ಯಾಲದಲ್ಲಿ ಪರಿಚಯವಿತ್ತು. ಅಲ್ಲದೇ 25 ವರ್ಷಗಳ ನಂತರ ಮತ್ತೆ ಸಾಮಾನ್ಯ ಸ್ನೇಹಿತರಾಗಿ ಪರಿಯಚರಾಗಿದ್ದರು. ಕಳೆದ ವರ್ಷ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 120ನೇ ಸ್ಥಾನದಲ್ಲಿದ್ದರು. ಪ್ರಸ್ತುತ ವರ್ಷಾ ಒಂದು ಅಕಾಡೆಮಿಯಲ್ಲಿ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ.

‘ನಮ್ಮೂರ ಮಂದಾರ ಹೂವೆ’, ‘ಅಮೃತ ವರ್ಷಿಣಿ’, ‘ಲಾಲಿ’, ‘ಅಪ್ಪು’ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿರುವ ವಿನಾಯಕ್ ಜೋಶಿ ಟಿವಿ ಧಾರಾವಾಹಿಗಳು, ‘ಬಿಗ್ ಬಾಸ್ ಸೀಸನ್ 01’ರಲ್ಲಿ ಸಹ ಕಾಣಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top