fbpx
ಸಮಾಚಾರ

ಸಾಹಸಸಿಂಹ ವಿಷ್ಣುವರ್ಧನ್ ಅಪ್ಪಟ ಅಭಿಮಾನಿ ಆತ್ಮಹತ್ಯೆ

ಸಾಹಸಿಂಹ ವಿಷ್ಣುವರ್ಧನ್ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವವರನ್ನು ಲೋಕೇಶ್(52) ಎಂದು ಗುರುತಿಸಲಾಗಿದೆ. ಇವರು ದಾವಣಗೆರೆಯ ಕೆಟಿಜೆ ನಗರದ ಡಾಂಗೇ ಪಾರ್ಕ್ ಬಳಿ ಇರುವ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಲೋಕೇಶ್​, ನಗರದ KSRTC ಬಸ್ ನಿಲ್ದಾಣದ ಎದುರಿನ ಭಾರತ ಡಾಬಾ ಪಕ್ಕದಲ್ಲಿ ಬೀಡಾ ಅಂಗಡಿ ಮಾಲೀಕರಾಗಿದ್ದರು. ಪ್ರತಿ ವರ್ಷವೂ ವಿಷ್ಣುವರ್ಧನ್ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದರು. ಕಳೆದ ಬಾರಿಯಷ್ಟೇ ವಿಷ್ಣುವರ್ಧನ್ ಅವರ ಪಾತ್ರವೊಂದರ ಉಡುಪು ಧರಿಸಿ, 51 ಕೆ.ಜಿಯ ಕೇಕ್ ಕತ್ತರಿಸುವ ಮೂಲಕ ವಿಶಿಷ್ಟವಾಗಿ ವಿಷ್ಣುವರ್ಧನ್ ಅವರ ಹುಟ್ಟು ಹಬ್ಬವನ್ನು ಆಚರಿಸಿದ್ದರು.

ಸಾಹಸಸಿಂಹ ವಿಷ್ಣು ಅಭಿಮಾನಿಯಾಗಿ ಮಿಮಿಕ್ರಿ ಮಾಡುತ್ತಿದ್ದ ಲೋಕೇಶ್ ಅವರ ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ‌. ಈ ಬಗ್ಗೆ ದಾವಣಗೆರೆ ನಗರದ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರಿಂದ ತನಿಖೆ ಆರಂಭವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top