fbpx
ಸಮಾಚಾರ

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ: “ಇತ್ತೀಚಿಗೆ ತೀರಿಕೊಂಡ ನಟನ ಪೋಸ್ಟ್ ಮಾರ್ಟಂ ಆಗಿಲ್ಲ ಏಕೆ?” ಇಂದ್ರಜಿತ್​ ಲಂಕೇಶ್​ ಸ್ಫೋಟಕ ಹೇಳಿಕೆ!

ಸಿನಿಮಾ ಜಗತ್ತಿನಲ್ಲಿ ಡ್ರಗ್ಸ್ ಬಳಕೆಯಾಗುತ್ತಿದೆ ಎಂಬ ಆರೋಪ ಅನೇಕ ಬಾರಿ ಕೇಳಿ ಬಂದಿದೆ. ಈ ಹಿಂದೆ ಟಾಲಿವುಡ್‌, ಬಾಲಿವುಡ್‌ನ ಹಲವು ಸ್ಟಾರ್‌ಗಳ ಮೇಲೆ ಡ್ರಗ್ಸ್ ಸೇವನೆ ಆರೋಪ ಇದೆ. ಇದೀಗ ಸ್ಯಾಂಡಲ್‌ವುಡ್‌ನಲ್ಲೂ ಡ್ರಗ್ಸ್ ವಾಸನೆ ಬಂದಿದ್ದು, ಈ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ನ್ನಡ ಸಿನಿಮಾರಂಗ ಮಾದಕ ಜಾಲದಲ್ಲಿ ಒಳಗೊಂಡಿದೆ. ಹಲವು ನಟ-ನಟಿಯರು ಹಾಗೂ ನಿರ್ದೇಶಕರು ಇದರಲ್ಲಿ ಭಾಗಿಯಾಗಿದ್ದಾರೆ. ಸಮಾಜಕ್ಕೆ ಒಳಿತಾಗಲಿ ಎಂಬ ಕಾರಣಕ್ಕೆ ಈ ವಿಚಾರವನ್ನು ನಾನು ಬಹಿರಂಗಪಡಿಸುತ್ತಿದ್ದೇನೆ. ಇಡೀ ಚಿತ್ರರಂಗ ಇದರಲ್ಲಿ ಭಾಗಿಯಾಗಿದೆ ಎಂದು ನಾನು ಹೇಳಲ್ಲ. ಆದರೆ, ಕೆಲವರು ಭಾಗಿಯಾಗಿರೋದ್ರಿಂದ ಇಡೀ ಚಿತ್ರರಂಗಕ್ಕೆ ಕೆಟ್ಟ ಹೆಸರು ಬರುತ್ತಿದೆ. ಈ ಮಾಫಿಯಾದ ಹಿಂದೆ ರಾಜಕಾರಣಿಗಳು, ಮಾಡೆಲ್ ಏಜೆನ್ಸಿಗಳು ಸೇರಿದಂತೆ ಇನ್ನು ಅನೇಕರು ಇದ್ದಾರೆಂದು ಗಂಭೀರ ಆರೋಪ ಮಾಡಿದರು.

‘ಇತ್ತೀಚೆಗೆ ತೀರಿಹೋದ ನಟರ ಪೋಸ್ಟ್ ಮಾರ್ಟಮ್ ಏಕೆ ಮಾಡ್ಲಿಲ್ಲ, ಪೊಲೀಸರು ಈ ಬಗ್ಗೆ ಏಕೆ ತಲೆ ಕೆಡಿಸಿಕೊಂಡಿಲ್ಲ?’ ಎಂಬ ಖಡಕ್ ಪ್ರಶ್ನೆ ಎತ್ತಿದ್ದಾರೆ. ‘ಇದಲ್ಲದೆ ಕೆಲವೇ ದಿನಗಳ ಹಿಂದೆ ಸೌತ್ ಎಂಡ್ ಸರ್ಕಲ್‌ ನಲ್ಲಿ ನಡೆದ ಅಪಘಾತದಲ್ಲಿ ಇದ್ದ ನಟರು ಹಾಗೂ ಉದ್ಯಮಿ ಮಕ್ಕಳು ಯಾರು ಎಂಬುದರ ಬಗ್ಗೆಯೂ ತನಿಖೆ ಆಗಬೇಕಿತ್ತು. ಅವರ ಹೆಸರುಗಳು ಬಹಿರಂಗವಾದರೂ ಪೊಲೀಸರು ಸರಿಯಾದ ತನಿಖೆಯನ್ನೇಕೆ ಮಾಡಲಿಲ್ಲ?’ ಎಂದು ಪ್ರಶ್ನಿಸಿದ್ದಾರೆ.

ಬಾಲಿವುಡ್ ಮಾದರಿಯಲ್ಲಿ ಇಲ್ಲೂ ಕೂಡ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ. ಪ್ರಚಾರ, ಮೋಜು, ನಶೆಗಾಗಿ ಮತ್ತು ಸಿನಿಮಾ ಅವಕಾಶಕ್ಕಾಗಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಹನಿಟ್ಯ್ರಾಪ್ ಕೂಡ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬೆಂಗಳೂರು ಕಮಿಷನರ್ ಕೂಡ ಇದರ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಕೆಲ ನಟಿಯರು ಏಕಾಏಕಿ ರಾತ್ರೋ ರಾತ್ರಿ ಜಾಗ್ವಾರ್ ಕಾರು, ಮನೆ ಎಲ್ಲವನ್ನು ಖರೀದಿಸಿದ್ದಾರೆ ಎಂದು ಹೇಳಿದ್ದರು. ಆದರೆ ಅವರ ಹೆಸರು ಹೇಳಲಿಲ್ಲ. ಅವರಿಗೆ ಅವರ ಹೆಸರು ಗೊತ್ತಿದೆ. ತನಿಖೆ ಆಗಿದೆ ಆದರೆ ಬಹಿರಂಗಪಡಿಸಿಲ್ಲ. ಇದರಲ್ಲಿ ರಾಜಕೀಯ ಒತ್ತಡವಿದೆ ಎಂದು ಲಂಕೇಶ್ ದೂರಿದ್ದಾರೆ.

ಒಂದು, ಎರಡು ಸಿನಿಮಾ ಮಾಡಿದ ನಟಿಯರು, ಹಿರಿಯ ನಟರ ಮಕ್ಕಳ ಜೊತೆ, ರಾಜಕಾರಣಿಗಳ ಮಕ್ಕಳ ಜೊತೆ ಪಾರ್ಟಿ ಮಾಡುತ್ತಾರೆ. ಇದರಿಂದ ಅವರ ಆರೋಗ್ಯಕ್ಕೂ ತೊಂದರೆಯಿದೆ. ಈ ಹಿಂದೆ ಕೂಡ ಒಬ್ಬ ನಟ ತೀರಿಹೋದರು ಅವರ ಮರಣೋತ್ತರ ಪರೀಕ್ಷೇಯೇ ಆಗಲಿಲ್ಲ. ಯಾಕೇ ಆಗಲಿಲ್ಲ? ರಾಜಕೀಯ ಒತ್ತಡವಿದೆಯೇ, ಪೊಲೀಸರಿಗೆ ಒತ್ತಡವಿತ್ತಾ? ಈ ಹಿಂದಿನಿಂದಲೂ ರೇವ್ ಪಾರ್ಟಿಗಳು ನಡೆಯುತ್ತಿವೆ. ಅದಕ್ಕೆ ತನಿಖೆಯಾಗಬೇಕು ಎಂದು ಹೇಳುತ್ತಿದ್ದೇನೆ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top