fbpx
ಸಮಾಚಾರ

“ಚಿತ್ರರಂಗದಲ್ಲಿ ವಾಮ ಮಾರ್ಗದಲ್ಲಿ ಗೆದ್ದವರೇ ಡ್ರಗ್ಸ್ ದಾಸರು” ಚಿತ್ರರಂಗದ ಡ್ರಗ್ಸ್ ಮಾಫಿಯಾ ವಿರುದ್ಧ ಜಗ್ಗೇಶ್ ಆಕ್ರೋಶ

ಸಿನಿಮಾ ಜಗತ್ತಿನಲ್ಲಿ ಡ್ರಗ್ಸ್ ಬಳಕೆಯಾಗುತ್ತಿದೆ ಎಂಬ ಆರೋಪ ಅನೇಕ ಬಾರಿ ಕೇಳಿ ಬಂದಿದೆ. ಈ ಹಿಂದೆ ಟಾಲಿವುಡ್‌, ಬಾಲಿವುಡ್‌ನ ಹಲವು ಸ್ಟಾರ್‌ಗಳ ಮೇಲೆ ಡ್ರಗ್ಸ್ ಸೇವನೆ ಆರೋಪ ಇದೆ. ಇದೀಗ ಸ್ಯಾಂಡಲ್‌ವುಡ್‌ನಲ್ಲೂ ಡ್ರಗ್ಸ್ ವಾಸನೆ ಬಂದಿದ್ದು ಇದರ ಬೆನ್ನಲ್ಲೇ.. ಉಪ್ಪು ತಿಂದವ ನೀರು ಕುಡಿಯಲೇ ಬೇಕು ಅಂತಾ ಹಿರಿಯ ನಟ ಹಾಗೂ ಮಾಜಿ ಶಾಸಕ ಜಗ್ಗೇಶ್ ಮಾರ್ಮಿಕವಾಗಿ ಹೇಳಿದ್ದಾರೆ.

 

 

ಈ ಬಗ್ಗೆ ಸರಣಿ ಟ್ವೀಟ್​ ಮಾಡಿರುವ ಅವರು “ಶ್ರೇಷ್ಠ ಮನುಜನ್ಮ!ಅದುನಶ್ವರ ಸತ್ಯ!ಆದರು ಆ ನಶ್ವರದೇಹ ನಶಿಸುವಮುನ್ನ ಸಾರ್ಥಕಪಡಿಸಿ ಬದುಕಬೇಕು!ನಶೆ ಹಾದರದ ಹಿಂದೆ ಬರಿ ಸಿನಿಮ ಅಲ್ಲಾ ಸಮಾಜವೆ ಆಕರ್ಷಶಿತ ಆಗುತ್ತಿದೆ! ಯಾರು ಶ್ರಮಪಟ್ಟು ಜೀವನ ಗೆದ್ದಿರುತ್ತಾರೆ ಅವರ ಹೆಜ್ಜೆ ತಪ್ಪುದಾರಿ ತುಳಿಯದು!ಯಾರು ವಾಮಮಾರ್ಗದಲ್ಲಿ ಗೆದ್ದಿರುತ್ತಾರೆ ಅವರೆ ನಶೆಹಾದರದ ದಾಸರು!ಉಪ್ಪುತಿಂದವ ನೀರುಕುಡಿಯುವ!” ಎಂದು ಹೇಳಿದ್ದಾರೆ.

 

 

“ಸರಿಯಾಗಿ ಬಾಳಿಬದುಕುವ ನಿರ್ದಾರ ಮಾಡಿ ಶ್ರಮಿಸುವರು ಎಲ್ಲೆ ಇದ್ದರು ಶ್ರೇಷ್ಠವಾಗಿ ಉಳಿಯುತ್ತಾರೆ! ನಾನು ನನ್ನಿಷ್ಟ! ನನ್ನ ಬದುಕು ಎನ್ನುವರ ಮಠಕ್ಕೆ ಸೇರಿಸಿದರು ನಶೆ ಹಾದರದ ಬಿಸಿ ಹೆಂಚಿನಮೇಲೆ ಸ್ವಲ್ಪ ಕಾಲಬದುಕಿ ವಿಕೃತ ಆನಂದ ಅನುಭವಿಸಿ ಸೀದುಹೋಗುತ್ತಾರೆ! ಏಕ್ ಮಾರ್ ದೋ ತಕಡ ತಪ್ಪುಮಾಡಿದವರ ಬೆತ್ತಲೆ ಮಾಡಿ!ಆಗಲಾದರು ಜನಕ್ಕೆ ಅರಿವಾಗಲಿ!”

 

 

“ಬಲವಂತಕ್ಕೆ 2017 ಒಬ್ಬ ರಾಜಕಾರಣಿ ಪಾರ್ಟಿಗೆ ಹೋಗಿದ್ದೆ!ಅರ್ಧಘಂಟೆಗೆ ಆ ಜಾಗ ಅಲ್ಲಿದ್ದವರ ಆರ್ಭಟ!ಬಂದುಸೇರಿದ ಅರ್ಧಉಡುಗೆ ಸುಂದರಿಯರು!ಅದಕಂಡು ನಾನು ನನ್ನ ಆತ್ಮೀಯ ಯುವನಟ ಗ….!ಹೇಳದೆಕೇಳದೆ ಲಿಫ್ಟು ಬಳಸದೆ 12ಮಹಡಿ ಇಳಿದು ಓಡಿದೆವು!ಅದೆಕಡೆ ಇಂದಿಗು ನನಗೆ ಯಾರು ಕರೆಮಾಡದಂತೆ ಮೊಬೈಲ್ ವರ್ಜಿಸಿದೆ! ಅಲ್ಲಿದ್ದವರು ಸಮಾಜದ ಎಲ್ಲ ಮುಖಗಳು!” ಎಂದು ಜಗ್ಗೇಶ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top