fbpx
ಸಮಾಚಾರ

“ಕೇಸ್ ಸಾಬೀತಾದ್ರೆ ಸತ್ತವನಿಗೆ ಶಿಕ್ಷೆ ಕೊಡೋಕಾಗುತ್ತಾ” ಇಂದ್ರಜಿತ್ ಆರೋಪಕ್ಕೆ ದರ್ಶನ್ ತಿರುಗೇಟು

ಸ್ಯಾಂಡಲ್‌ವುಡ್‌ ನಲ್ಲಿ ಸಂಚಲನ ಮೂಡಿಸುತ್ತಿರುವ ಡ್ರಗ್ಸ್ ಮಾಫಿಯಾ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪಕ್ಕೆ ಸರ್ಜಾ ಫ್ಯಾಮಿಲಿ ತಿರುಗೇಟು ಕೊಟ್ಟಿದೆ. ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡ್ಲಿಲ್ಲ? ಎಂದು ಪ್ರಶ್ನಿಸಿದ್ದರು. ಈ ಮಾತು ಸ್ಯಾಂಡಲ್​ವುಡ್​ ನಟನ ಸಾವಿನ ಬಗ್ಗೆ ಹೊಸ ಅನುಮಾನ ಹುಟ್ಟು ಹಾಕಿತ್ತು. ಇದರ ಬೆನ್ನಲ್ಲೇ ಇಂದ್ರಜಿತ್​ ಆರೋಪಕ್ಕೆ ನಟ ದರ್ಶನ್ ತಿರುಗೇಟು ನೀಡಿದ್ದಾರೆ.

ಜೊತೆಗೆ ಚಿರಂಜೀವಿ ಸರ್ಜಾ ಅವರ ಮೇಲೆ ಬಂದಿರುವ ಆರೋಪಕ್ಕೆ ದರ್ಶನ್ ಭಾರಿ ಬೇಸರ ವ್ಯಕ್ತಪಡಿಸಿದ್ದು, ಸತ್ತವರ ಹೆಸರನ್ನು ಕೆಡಿಸುವುದು ಎಷ್ಟರ ಮಟ್ಟಿಗೆ ಶೋಭೆ ತರುತ್ತದೆ ಎಂದಿದ್ದಾರೆ. ಇಂದ್ರಜಿತ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ದರ್ಶನ್ “ಡ್ರಗ್ಸ್ ವಿಚಾರದಲ್ಲಿ ಚಿರು ಹೆಸರನ್ನು ಹೇಳುತ್ತಿರುವುದು ನನಗೆ ತುಂಬಾ ಬೇಸರವಾಯಿತು. ಚಿರು ಸತ್ತು ಮೂರು ತಿಂಗಳು ಆಗಿದೆ. ಅವನು ಎಲ್ಲಿದ್ದಾನೋ, ಹೇಗಿದ್ದಾನೋ ಗೊತ್ತಿಲ್ಲ. ಒಂದು ವೇಳೆ ಈ ಕೇಸ್ ಆಗಿ ಸಾಬೀತಾಯಿತು ಅಂದರೆ ಅವನಿಗೆ ಶಿಕ್ಷೆ ಕೊಡಲು ಆಗುತ್ತಾ.?” ಎಂದು ಪ್ರಶ್ನಿಸಿದರು

“ಸತ್ತೋನು ಕೊಲೆಗಾರನಾದರೂ ನಾವು ವರ್ಷದ ತಿಥಿ ಮಾಡುತ್ತೇವೆ. ಇದನ್ನು ನಮ್ಮ ತಂದೆ-ತಾಯಿ ಹೇಳಿಕೊಟ್ಟಿದ್ದಾರೆ. ಅವನು ಒಳ್ಳೆಯವನು ಕೆಟ್ಟೋನು ಎಂದು ನೋಡುವುದಿಲ್ಲ. ಸತ್ತ ಮೇಲೆ ಅವರ ಬಗ್ಗೆ ಒಳ್ಳೆಯ ಮಾತನಾಡೋಣ. ದಯವಿಟ್ಟು ಕೆಟ್ಟದಂತೂ ಮಾತನಾಡಬೇಡಿ” ಎಂದು ದರ್ಶನ್ ಮನವಿ ಮಾಡಿಕೊಂಡರು.

ಇಂದ್ರಜಿತ್ ಮಾಡಿದ್ದ ಆರೋಪವೇನು?
ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿದ್ದ ಇಂದ್ರಜಿತ್ ಅವರು “ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡ್ಲಿಲ್ಲ?” ಎಂದು ಪ್ರಶ್ನಿಸಿದ್ದರು. ಈ ಮಾತು ಸ್ಯಾಂಡಲ್​ವುಡ್​ ನಟನ ಸಾವಿನ ಬಗ್ಗೆ ಹೊಸ ಅನುಮಾನ ಹುಟ್ಟು ಹಾಕಿತ್ತು. ಇದರ ಬೆನ್ನಲ್ಲೇ ಇಂದ್ರಜಿತ್​ ಆರೋಪಕ್ಕೆ ಸರ್ಜಾ ಫ್ಯಾಮಿಲಿ ತಿರುಗೇಟು ಕೊಟ್ಟಿದೆ.

“ಇತ್ತೀಚಿಗೆ ಯುವ ನಟರೊಬ್ಬರು ತೀರಿಹೋದಾಗ ಎಲ್ಲರಿಗೂ ನೋವಾಗಿತ್ತು. ಆದರೆ ಈ ಬಗ್ಗೆ ಒಂದೇ ಒಂದು ತನಿಖೆ ಆಗಲಿಲ್ಲ. ಮೃತ ದೇಹಕ್ಕೆ ಯಾವುದೇ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಿಲ್ಲ. ಪೋಸ್ಟ್ ಮಾರ್ಟಮ್ ನಡೆಸದಂತೆ ರಾಜಕೀಯ ಒತ್ತಡ ಹೇರಲಾಯಿತು” ಎಂದು ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದರು.

“ಆ ನಟನ ಕುಟುಂಬಕ್ಕೆ ನೋವು ಮಾಡುವ ಉದ್ದೇಶ ನನಗಿಲ್ಲ. ಆದರೆ, ಮರಣೋತ್ತರ ಪರೀಕ್ಷೆ ಏಕೆ ನಡೆಸಿಲ್ಲವೆಂಬುದೇ ನನ್ನ ಪ್ರಶ್ನೆ. ಡ್ರಗ್ಸ್​ನಿಂದಲೇ ಆ ನಟ ಮೃತಪಟ್ಟಿದ್ದರಾ ಎಂದು ತನಿಖೆ ನಡೆಸಿದ್ದರೆ ಎಲ್ಲ ಮಾಹಿತಿ ಬಹಿರಂಗವಾಗುತ್ತಿತ್ತು. ಜೊತೆಗೆ, ಡ್ರಗ್ಸ್​ ಜಾಲದಲ್ಲಿ ಇನ್ನೂ ಯಾರೆಲ್ಲಾ ಇದ್ದಾರೆ. ಇದರಿಂದ ಯಾರ್ಯಾರಿಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದೆ ಎಂದೂ ತಿಳಿಸುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top