fbpx
ಸಮಾಚಾರ

“ಇಂದ್ರಜಿತ್ ಹೇಳಿಕೆಯಿಂದ ನನ್ನ ಮದುವೆ ಮುರಿದು ಬಿತ್ತು” ಯುವ ನಟನ ಅಳಲು

ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಹೇಳಿಕೆಯಿಂದ ನನ್ನ ಮದುವೆಗೆ ತೊಂದರೆಯಾಗಿದೆ ಎಂದು ಯುವ ನಟ ಪವನ್ ಶೌರ್ಯ ಆರೋಪ ಮಾಡಿದ್ದಾರೆ.

ಸ್ಯಾಂಡಲ್‍ವುಡ್ ಮೂರನೇ ಪೀಳಿಗೆಯ ಯುವ ನಟ-ನಟಿಯರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಶನಿವಾರ ಇಂದ್ರಜಿತ್ ಲಂಕೇಶ್ ಅವರು ಬಹಿರಂಗ ಆರೋಪ ಮಾಡಿದ್ದರು. ಈಗ ಇದೇ ವಿಚಾರ ಬಹಳ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ. ಲಂಕೇಶ್ ಅವರ ಈ ಹೇಳಿಕೆ ನಮಗೆ ಸಮಸ್ಯೆಯನ್ನು ಹುಟ್ಟುಹಾಕಿದೆ ಎಂದು ಪವನ್ ಶೌರ್ಯ ಹೇಳಿದ್ದಾರೆ.

‘ಗೂಳಿಹಟ್ಟಿ’ ಸಿನಿಮಾ ಖ್ಯಾತಿಯ ಪವನ್ ಶೌರ್ಯ ಮುಂದಿನ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಪವನ್ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಕಾರಣ ಹೆಣ್ಣಿನ ಮನೆಯವರು ಡ್ರಗ್ಸ್ ವಿಚಾರವನ್ನು ಮುಂದಿಟ್ಟು ಮದುವೆಯನ್ನು ಮುರಿದಿದ್ದಾರೆ.

“ಹೊಸ ನಟರಿಂದ ಈ ರೀತಿಯಾಗಿ ಆಗುತ್ತಿದೆ ಎಂಬ ಆರೋಪವನ್ನು ಇಂದ್ರಜಿತ್​ ಲಂಕೇಶ್ ಮಾಡಿರೋದಕ್ಕೆ ಪವನ್​ ಬೇಸರ ವ್ಯಕ್ತಪಡಿಸಿದ್ದು, ಯಂಗ್ ನಟರು ಎಂದು ಹೇಳುವ ಬದಲು ಈ ಜಾಲದಲ್ಲಿ ಭಾಗಿಯಾಗಿರುವ ನಟರ ಹೆಸರನ್ನು ಹೇಳಲಿ, ಅದನ್ನು ಬಿಟ್ಟು ಯುವ​ ನಟರು ಎಂದು ಹೇಳುವುದು ಸರಿಯಲ್ಲ.”

“ಮುಂದಿನ ತಿಂಗಳು ನನ್ನ ಮದುವೆಗೆ ಎಲ್ಲ ತಯಾರಿ ಮಾಡ್ಕೊಂಡಿದ್ದೆವು, ಡ್ರಗ್ಸ್ ಕುರಿತ ಸುದ್ದಿ ನೋಡಿ ಹುಡುಗಿ ಕುಟುಂಬದವರಿಗೆ ಆತಂಕವಾಗಿದ್ದು, ಸ್ಯಾಂಡಲ್​​ವುಡ್​ ನಶೆ ಸುದ್ದಿ, ಈಗ ಸಂಬಂಧಗಳನ್ನೇ ಅನುಮಾನಿಸುವಂತೆ ಮಾಡಿದೆ,​ ಡ್ರಗ್ ದಂಧೆ ವಿವಾದದಿಂದ ಹೆಣ್ಣಿನ ಮನೆಯವರು ತಗಾದೆಮಾಡ್ತಿದ್ದಾರೆ.”

‘ಸಿನಿಮಾದವರು ಎಂದರೆ ಜನರು ಭಯ ಪಡುತ್ತಿದ್ದಾರೆ ಹೆಣ್ಣು ಕೊಡುವವರು ಅನುಮಾನದಿಂದ ನೋಡುತ್ತಿದ್ದಾರೆ. ನಮ್ಮನ್ನು ನಂಬೋದಾದ್ರು ಹೇಗೆ ಅನ್ನುವ ವಾತಾವರಣ ಸೃಷ್ಟಿ ಮಾಡಿದೆ ಈ ಡ್ರಗ್ಸ್ ವಿಚಾರ. ಮುಂದಿನ ತಿಂಗಳು ಇರುವ ಮದುವೆಗೆ ಎಲ್ಲವೂ ಸಿದ್ಧವಾಗಿತ್ತು ಆದರೆ ಈಗ ಮದುವೆ ಕ್ಯಾನ್ಸಲ್ ಆಗಿರುವ ಕಾರಣ ಮನೆಯಲ್ಲಿ ಶೂಟಿಂಗ್ಗೂ ಹೋಗಬೇಡ ಸಿನಿಮಾನೂ ಬೇಡ ಎಂದು ಹೇಳುತ್ತಿದ್ದಾರೆ’ ಎಂದು ಪವನ್ ಮಾತನಾಡಿದ್ದಾರೆ.

ಹಾಲು ತುಪ್ಪ, ಉಡುಂಬಾ, ಗೂಳಿಹಟ್ಟಿ ಮೊದಲಾದ ಚಿತ್ರಗಳಲ್ಲಿ ನಟಿಸಿರುವ ಪವನ್ ಶೌರ್ಯ ಇಂದ್ರಜಿತ್ ಲಂಕೇಶ್ ಅವರ ಮಾತಿಗೆ ಆಕ್ಷೇಪಿಸಿದ್ದು “ಅವರ ಹೇಳಿಕೆಯಿಂದ ನನ್ನ ವಿವಾಹ ಮಾತುಕತೆ ಮುರಿದಿದೆ” ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top