fbpx
ಸಮಾಚಾರ

ಮಾರುಕಟ್ಟೆಗೆ ‘ಮೋದಿ ಇಡ್ಲಿ’ ಎಂಟ್ರಿ: 10 ರೂಗೆ ನಾಲ್ಕು ಇಡ್ಲಿ

ಅಮ್ಮ ಕ್ಯಾಂಟೀನ್, ಇಂದಿರಾ ಕ್ಯಾಂಟೀನ್ ಎಂದು ಹೊಟೇಲ್ ಗಳಿಗೆ ಹೆಸರು ಇಡುವುದನ್ನು ಕೇಳಿದ್ದೇವೆ. ತಮಿಳುನಾಡಿನ ಬಿಜೆಪಿ ಮುಖಂಡರೊಬ್ಬರು ಇಡ್ಲಿಗೆ ‘ಮೋದಿ ಇಡ್ಲಿ’ ಎಂದು ಹೆಸರಿಟ್ಟು, ಕಡಿಮೆ ಬೆಲೆಯಲ್ಲಿ ಗ್ರಾಹಕರ ಹೊಟ್ಟೆ ತುಂಬಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಮೋದಿ ಹೆಸರಿನ ಇಡ್ಲಿ ಮಾರಾಟ ಮಾಡುವ ಐಡಿಯಾ ಇಲ್ಲಿನ ರಾಜ್ಯ ಬಿಜೆಪಿ ನಾಯಕ ಮಹೇಶ್ ಅವರದ್ದಾಗಿದೆ. ಅವರೇ ನಗರಾದ್ಯಂತ ಈ ಬಗ್ಗೆ ಪೋಸ್ಟರ್ ಹಾಕಿಸಿದ್ದು. ಸೋಶಿಯಲ್ ಮೀಡಿಯಾದಲ್ಲಿ ಪಿಎಂ ಮೋದಿ ಜೊತೆಗೆ ಇಡ್ಲಿಯ ಫೋಟೋ ಭಾರೀ ವೈರಲ್ ಆಗಿದೆ.

 

 

ಪೋಸ್ಟರ್​​ಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯ ಭಾವಚಿತ್ರದ ಜೊತೆಗೆ ಮಹೇಶ್​ ಅವರ ಫೋಟೋ ಇದೆ. ಲೋಟಸ್ ಹೀರೋ ಮಹೇಶ್​ ಅರ್ಪಿಸುವ ಮೋದಿ ಇಡ್ಲಿ. 10 ರೂಪಾಯಿಗೆ 4 ಇಡ್ಲಿ ಹಾಗೂ ಸಾಂಬಾರ್ ಶೀಘ್ರದಲ್ಲೇ ಸೇಲಂನಲ್ಲಿ ಪರಿಚಯಿಸಲಾಗುತ್ತದೆ. ಅತ್ಯಾಧುನಿಕ ಅಡುಗೆ ಉಪಕರಣಗಳೊಂದಿಗೆ ತಯಾರಿಸಿದ್ದು, ರುಚಿಕರ ಹಾಗೂ ಆರೋಗ್ಯಕರ ಅನ್ನೋ ಪೋಸ್ಟರ್​​ಗಳು ರಾರಾಜಿಸುತ್ತಿವೆ.

“ಲೋಟಸ್ ಹಿರೋ ಮಹೇಶ್ ಪರಿಚಯಿಸುತ್ತಿದ್ದಾರೆ ಮೋದಿ ಇಡ್ಲಿ. 10 ರೂ.ಗೆ ನಾಲ್ಕು ಇಡ್ಲಿಗಳ ಜೊತೆಗೆ ಸಾಂಬಾರ್. ಸೇಲಂನಲ್ಲಿ ಶೀಘ್ರದಲ್ಲಿಯೇ ಪರಿಚಯಿಸಲಾಗುವುದು. ಮಾಡರ್ನ್ ಕಿಚನ್ ಪರಿಕ್ಕರಗಳಿಂದ ತಯಾರಿಸಲಾಗಿರುವ ಟೆಸ್ಟಿ ಹಾಗೂ ಹೆಲ್ದಿ” ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top