fbpx
ಸಮಾಚಾರ

“ಚಿರು ಕುಟುಂಬವನ್ನು ಮತ್ತೆ ಮತ್ತೆ ನೋಯಿಸಬೇಡಿ” ನಟ ಸುದೀಪ್

ಸ್ಯಾಂಡಲ್‌ವುಡ್‌ ನಲ್ಲಿ ಸಂಚಲನ ಮೂಡಿಸುತ್ತಿರುವ ಡ್ರಗ್ಸ್ ಮಾಫಿಯಾ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪಕ್ಕೆ ಸರ್ಜಾ ಫ್ಯಾಮಿಲಿ ತಿರುಗೇಟು ಕೊಟ್ಟಿದೆ. ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡ್ಲಿಲ್ಲ? ಎಂದು ಪ್ರಶ್ನಿಸಿದ್ದರು. ಈ ಮಾತು ಸ್ಯಾಂಡಲ್​ವುಡ್​ ನಟನ ಸಾವಿನ ಬಗ್ಗೆ ಹೊಸ ಅನುಮಾನ ಹುಟ್ಟು ಹಾಕಿತ್ತು. ಈ ಬಗ್ಗೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.

ಚಿರು ನನಗೆ ಬಹಳ ಬೇಕಾದ, ಪ್ರಿಯವಾದ ಹುಡುಗ. ನಾನು ಅವನನ್ನು ತಮ್ಮನ ರೀತಿ ನೋಡಿಕೊಳ್ಳುತ್ತಿದ್ದೆ. ಅವನು ಕೂಡ ತಮ್ಮನ ರೀತಿಯೇ ಇದ್ದನು. ಈಗ ಅವನ ಬಗ್ಗೆ ಮಾತನಾಡುವುದು ಬೇಡ ಎಂದು ಸುದೀಪ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ಚಿರು ನನಗೆ ಬಹಳ ಬೇಕಾದ, ಪ್ರಿಯವಾದ ಹುಡುಗ. ನಾನು ಅವನನ್ನು ತಮ್ಮನ ರೀತಿ ನೋಡಿಕೊಳ್ಳುತ್ತಿದ್ದೆ. ಅವನು ಕೂಡ ತಮ್ಮನ ರೀತಿಯೇ ಇದ್ದನು. ಈಗ ಅವನ ಬಗ್ಗೆ ಮಾತನಾಡುವುದು ಬೇಡ. ಹೋದವರ ಬಗ್ಗೆ ಮತ್ತೆ ಕೆದಕಿ ಕೆದಕಿ ಮಾತನಾಡುವುದು ಬೇಡ ಎಂದರು.

ಅಷ್ಟೇ ಅಲ್ಲದೇ ಅವರಿಗೂ ಒಂದು ಕುಟುಂಬದ ಇದೆ. ಸುಂದರವಾದ ತಮ್ಮ ಇದ್ದಾನೆ. ಅಣ್ಣನ ಅಗಲಿಕೆಯಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೆಂಡತಿ ಇದ್ದಾರೆ, ಹೀಗಾಗಿ ಅವನ ಬಗ್ಗೆ ಮಾತನಾಡುವುದು ಬೇಡ ಎಂದರು.

ಇಂದ್ರಜಿತ್ ಈ ಹಿಂದೆ ಹೇಳಿದ್ದು ಏನು?
ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿದ್ದ ಇಂದ್ರಜಿತ್ ಅವರು “ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡ್ಲಿಲ್ಲ?” ಎಂದು ಪ್ರಶ್ನಿಸಿದ್ದರು. ಈ ಮಾತು ಸ್ಯಾಂಡಲ್​ವುಡ್​ ನಟನ ಸಾವಿನ ಬಗ್ಗೆ ಹೊಸ ಅನುಮಾನ ಹುಟ್ಟು ಹಾಕಿತ್ತು. ಇದರ ಬೆನ್ನಲ್ಲೇ ಇಂದ್ರಜಿತ್​ ಆರೋಪಕ್ಕೆ ಸರ್ಜಾ ಫ್ಯಾಮಿಲಿ ತಿರುಗೇಟು ಕೊಟ್ಟಿದೆ.

“ಇತ್ತೀಚಿಗೆ ಯುವ ನಟರೊಬ್ಬರು ತೀರಿಹೋದಾಗ ಎಲ್ಲರಿಗೂ ನೋವಾಗಿತ್ತು. ಆದರೆ ಈ ಬಗ್ಗೆ ಒಂದೇ ಒಂದು ತನಿಖೆ ಆಗಲಿಲ್ಲ. ಮೃತ ದೇಹಕ್ಕೆ ಯಾವುದೇ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಿಲ್ಲ. ಪೋಸ್ಟ್ ಮಾರ್ಟಮ್ ನಡೆಸದಂತೆ ರಾಜಕೀಯ ಒತ್ತಡ ಹೇರಲಾಯಿತು” ಎಂದು ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದರು.

“ಆ ನಟನ ಕುಟುಂಬಕ್ಕೆ ನೋವು ಮಾಡುವ ಉದ್ದೇಶ ನನಗಿಲ್ಲ. ಆದರೆ, ಮರಣೋತ್ತರ ಪರೀಕ್ಷೆ ಏಕೆ ನಡೆಸಿಲ್ಲವೆಂಬುದೇ ನನ್ನ ಪ್ರಶ್ನೆ. ಡ್ರಗ್ಸ್​ನಿಂದಲೇ ಆ ನಟ ಮೃತಪಟ್ಟಿದ್ದರಾ ಎಂದು ತನಿಖೆ ನಡೆಸಿದ್ದರೆ ಎಲ್ಲ ಮಾಹಿತಿ ಬಹಿರಂಗವಾಗುತ್ತಿತ್ತು. ಜೊತೆಗೆ, ಡ್ರಗ್ಸ್​ ಜಾಲದಲ್ಲಿ ಇನ್ನೂ ಯಾರೆಲ್ಲಾ ಇದ್ದಾರೆ. ಇದರಿಂದ ಯಾರ್ಯಾರಿಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದೆ ಎಂದೂ ತಿಳಿಸುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top