fbpx
ಸಮಾಚಾರ

ಐಪಿಎಲ್ ಆರಂಭಕ್ಕೂ ಮುನ್ನವೇ RCBಗೆ ಶಾಕ್: ಟೂರ್ನಿಯಿಂದಲೇ ಹೊರಬಿದ್ದ ಸ್ಟಾರ್ ಆಟಗಾರ

ಆರ್​ಸಿಬಿ ತಂಡದಲ್ಲಿ ಆಡುತ್ತಿದ್ದ ಆಸ್ಟ್ರೇಲಿಯಾದ ವೇಗದ ಬೌಲರ್ ಕೇನ್ ರಿಚರ್ಡ್‍ಸನ್ ಅವರು ಟೂರ್ನಿಯಿಂದ ಹೊರಬಂದಿದ್ದಾರೆ. ಈ ಜಾಗಕ್ಕೆ ಆಸಿಸ್‍ನ ಮತ್ತೋರ್ವ ಲೆಗ್ ಸ್ಪಿನ್ನರ್ ಎಂಟ್ರಿ ಕೊಟ್ಟಿದ್ದಾರೆ.

ಐಪಿಎಲ್ ಆರಂಭಗೊಳ್ಳಲು ಇನ್ನೇನು ಕೆಲವೇ ದಿನ ಬಾಕಿಯಿದೆ. ಅಂತೆಯೇ ಎಲ್ಲ ತಂಡಗಳು ಈಗಾಗಲೇ ಯುಎಇ ತಲುಪ್ಪಿದ್ದು, ಚೆನ್ನೈ ತಂಡವನ್ನು ಹೊರತುಪಡಿಸಿ ಉಳಿದ ತಂಡಗಳು ಅಭ್ಯಾಸವನ್ನು ಆರಂಭ ಮಾಡಿವೆ. ಇದರ ನಡುವೆ ಆರ್​ಸಿಬಿ ತಂಡಕ್ಕೆ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆಡಮ್ ಜಂಪಾ ಅವರು ಹೊಸದಾಗಿ ಸೇರ್ಪಡೆಯಾಗಿದ್ದಾರೆ.

 

 

ಮೂಲಗಳ ಮಾಹಿತಿ ಪ್ರಕಾರ ಕೇನ್ ರಿಚರ್ಡ್ಸನ್ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕಾರಣದಿಂದಾಗಿ ಈ ಬಾರಿಯ ಟೂರ್ನಿಯನ್ನು ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಆದರೆ ವೇಗಿಯ ಸ್ಥಾನಕ್ಕೆ ಸ್ಪಿನ್ನರ್ ಆಯ್ಕೆ ಮಾಡಿಕೊಂಡು ಆರ್‌ಸಿಬಿ ಫ್ರಾಂಚೈಸಿ ಅಚ್ಚರಿ ಮೂಡಿಸಿದೆ.

“ಆಡಮ್‌ ಝಂಪಾ ಆರ್‌ಸಿಬಿ ಕಲರ್ಸ್ ತೊಡಲು ಆಗಮಿಸುತ್ತಿರುವುದರಿಂದ ನಾವು ರೋಮಂಚನಗೊಂಡಿದ್ದೇವೆ. ಅವರು ಕೇನ್‌ ರಿಚರ್ಡ್‌ಸನ್‌ ಅವರ ಸ್ಥಾನವನ್ನು ತುಂಬಿದ್ದಾರೆ,” ಎಂದು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸೋಮವಾರ ರಾತ್ರಿ ಟ್ವೀಟ್‌ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top