fbpx
ಸಮಾಚಾರ

ಸೆಪ್ಟೆಂಬರ್ 02: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ಸ್ಥಳ: ಕರ್ನಾಟಕ
ಸೆಪ್ಟೆಂಬರ್ 2, 2020 ಬುಧವಾರ
ವರ್ಷ : 1942 ಶಾರ್ವರಿ
ತಿಂಗಳು : ಭಾದ್ರಪದ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಪೂರ್ಣಿಮಾ 10:51 am
ನಕ್ಷತ್ರ : ಶತಭಿಷ 6:33 pm
ಯೋಗ : ಸುಕರ್ಮ 1:04 pm
ಕರಣ : ಬಾವ 10:51 am ಬಾಲವ 11:35 pm

Time to be Avoided
ರಾಹುಕಾಲ : 12:19 pm – 1:50 pm
ಯಮಗಂಡ : 7:43 am – 9:15 am
ದುರ್ಮುಹುರ್ತ : 11:54 am – 12:43 pm
ವಿಷ : 1:34 am – 3:19 am
ಗುಳಿಕ : 10:47 am – 12:19 pm

Good Time to be Used
ಅಮೃತಕಾಲ : 10:47 am – 12:30 pm

Other Data
ಸೂರ್ಯೋದಯ : 6:08 am
ಸುರ್ಯಾಸ್ತಮಯ : 6:29 pm
ರವಿರಾಶಿ : ಸಿಂಹ
ಚಂದ್ರರಾಶಿ : ಕುಂಭ

 

 

ನೀವು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಸರಿ ತಪ್ಪುಗಳ ವಿವೇಚನೆಯಿಲ್ಲದೆ ನೀವು ಮಾತ್ರವಲ್ಲದೆ ನಿಮ್ಮನ್ನು ನಂಬಿದವರೂ ತಪ್ಪು ದಾರಿ ತುಳಿಯುವ ಸಾಧ್ಯತೆ ಇದೆ.ಮಾತಿನಲ್ಲಿ ಹತೋಟಿ ಕಾಯ್ದುಕೊಳ್ಳದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸುವಿರಿ.

 

ನೀವು ತೆಗೆದುಕೊಳ್ಳುವ ನಿರ್ಧಾರಗಳೆಲ್ಲವೂ ಉತ್ತಮ ರೀತಿಯಲ್ಲಿಯೇ ಇರುತ್ತವೆ. ಮನೆಯಲ್ಲಿ ಶಾಂತಿ ಕರ್ಮಾದಿಗಳು ನಡೆಯುವವು. ಬೇರೆಯವರ ನೆರವನ್ನು ಸದುಪಯೋಗ ಪಡಿಸಿಕೊಳ್ಳಿ.

 

ಮತ್ತೊಬ್ಬರ ನೆರವನ್ನು ನಂಬಿ ಏನನ್ನೂ ಮಾಡಬೇಡಿ. ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ.  ವಿಪರೀತ ಮಾನಸಿಕ ಚಂಚಲತೆ ನಿಮ್ಮನ್ನು ಹೈರಾಣಾಗಿಸುವುದಲ್ಲದೇ ನಿಮ್ಮ ದೈನಂದಿನ ಬದುಕಿನ ಮೇಲೆ ಅಡ್ಡ ಪರಿಣಾಮ ಬೀರುವುದು

 

ನೀವು ಸದಾ ಎಚ್ಚರದಿಂದಿರುವುದು ಉತ್ತಮ. ನಿಮ್ಮಿಂದ ಉಪಕಾರ ಪಡೆದವರೇ ನಿಮ್ಮ ವಿರುದ್ಧ ಪಿತೂರಿ ನಡೆಸುವರು. ಮತ್ತೊಬ್ಬರಿಗೆ ಸಹಾಯ ರೂಪದಲ್ಲಿ ಕೊಟ್ಟ ಹಣ ನಿಮ್ಮ ಸಮಯಕ್ಕೆ ಬರದೆ ನೀವೇ ಸಾಲಗಾರರಾಗುವ ಸಂದರ್ಭ ಬರುವುದು. ಈ ವಿಷಯದಲ್ಲಿ ಸಾಕಷ್ಟು ಜಾಗ್ರತೆ ವಹಿಸಿ.

 

 

ಅತಿ ಮುಂಗೋಪದಿಂದ ಹಿರಿಯರೊಡನೆ ನಿಷ್ಠುರದ ಮಾತುಗಳನ್ನಾಡುವ ಪ್ರಸಂಗ ಬರಲಿದೆ. ಕಾರಣ ತಿಳಿಯದೇ ಕಠಿಣ ನಿರ್ಧಾರ ತೆಗೆದುಕೊಳ್ಳಬೇಡಿ. ಇಲ್ಲವಾದಲ್ಲಿ ಮನೆಯಲ್ಲಿ ದೊಡ್ಡ ಅನಾಹುತವೇ ನಡೆಯಬಹುದು. ಗೆಳೆಯರ ನಡುವೆ ಭಿನ್ನಾಭಿಪ್ರಾಯ ಮೂಡಲಿದೆ. ಆದರೆ ಅದು ಹೆಚ್ಚು ದಿನ ಇರುವುದಿಲ್ಲ.

 

 

ಎಂತಹ ಸನ್ನಿವೇಶ ಬಂದರೂ ನಿಭಾಯಿಸುವ ಛಾತಿಯುಳ್ಳ ನಿಮಗೆ ಯಾವುದೇ ಕೆಲಸ ಕಷ್ಟ ಎನಿಸುವುದಿಲ್ಲ. ದೈವಾನುಗ್ರಹ ಸಂಪೂರ್ಣ ನಿಮ್ಮ ಮೇಲಿದ್ದು ಎಲ್ಲವೂ ನೀವು ಅಂದುಕೊಂಡಂತೆ ನಡೆಯಲಿವೆ.

 

 

ಹಿರಿಯರೊಂದಿಗೆ ವಿನಾಕಾರಣ ವಾಗ್ವಾದ ಬೇಡ. ಯಾಣ ಅನಿವಾರ್ಯವಾಗದಿದ್ದಲ್ಲಿ ಮುಂದೂಡುವುದು ಒಳ್ಳೆಯದು. ಹಣಕಾಸು ವ್ಯವಹಾರದಲ್ಲಿ ಪ್ರಾಮಾಣಿಕತೆಯಿರಲಿ. ನೀವು ಎಷ್ಟೇ ಶ್ರಮ ಪಟ್ಟರೂ ಕೆಲಸಗಳು ಅರ್ಧಕ್ಕೆ ನಿಲ್ಲುವವು.

 

 

ಮತ್ತೊಬ್ಬರಿಗಾಗಿ ಶ್ರಮ ವಹಿಸಬೇಕಾಗುವುದು. ಆದರೆ ಪ್ರತಿಫಲ ಶೂನ್ಯವಾಗಿರುವುದು. ಸಾಧ್ಯವಾದಷ್ಟು ನೀವು ನಿಮ್ಮ ಪಾಡಿಗೆ ಇರುವುದು ಕ್ಷೇಮ. ಮನಸ್ಸು ಧಾರ್ಮಿಕ ವಿಚಾರಗಳ ಕಡೆ ಸೆಳೆಯಲಿದ್ದು ಅಂತಹ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ಅನೇಕ ಸಾಧು ಸಜ್ಜನರ ಸಹವಾಸವಾಗಲಿದೆ.

ಸಂಯಮದಿಂದ ವರ್ತಿಸಿದರೆ ನೆಮ್ಮದಿ ಜೀವನ ಕಂಡುಕೊಳ್ಳಬಹುದು. ಕುಲದೇವತಾ ಅನುಗ್ರಹದಿಂದ ನೀವು ಅಂದುಕೊಂಡ ಕಾರ್ಯಗಳು ಸುಸೂತ್ರವಾಗಿ ನೆರವೇರಲಿವೆ. ಮಡದಿ ಮಕ್ಕಳು ನಿಮಗೆ ಸಂತಸ ನೀಡುವರು. ಕಾರಣವಿಲ್ಲದೆ ಮತ್ತೊಬ್ಬರನ್ನು ಅವಮಾನಿಸಬೇಡಿ. ಮಾತಿನಲ್ಲಿ ಹಿಡಿತವಿರಲಿ.

 

 

ಹಣಕಾಸಿನ ವಿಷಯದಲ್ಲಿ ಬಿಗು ನಿಲುವು ತೋರುವುದು ಉತ್ತಮ. ಕುಟುಂಬ ಸದಸ್ಯರ ಸಮಸ್ಯೆಗಳಿಗೆ ನೀವೇ ಪರಿಹಾರ ಸೂಚಿಸುವ ಪ್ರಸಂಗ ಬರುವುದು. ಮಿತಿಮೀರಿದ ಹಾಗೂ ಅರ್ಥವಿಲ್ಲದ ಖರ್ಚಿಗೆ ಧನವ್ಯಯವಾಗಲಿದೆ.

 

ಬದುಕಿನಲ್ಲಿ ಬರಲಿರುವ ತಿರುವು ನಿಮ್ಮ ಭಾಗ್ಯವನ್ನೇ ಬದಲಾಯಿಸುವುದು ಮತ್ತು ಅದರಿಂದ ನಿಮ್ಮ ಅದೃಷ್ಟ ಖುಲಾಯಿಸಲಿದೆ. ಅನಿರೀಕ್ಷಿತವಾಗಿ ನಡೆಯುವ ಘಟನೆ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ತೋರಲಿದೆ.

 

ಮನೆಯಲ್ಲಿ ಜರುಗಲಿರುವ ಅಥವಾ ಜರುಗಿದ ಘಟನೆಗಳಿಗೆ ಹೆಚ್ಚಿನ ಮಹತ್ವ ಕೊಡದೆ ನಿಮ್ಮ ಕಾರ್ಯಗಳಲ್ಲಿ ಮಗ್ನರಾಗುವುದು ಉತ್ತಮ. ಅನವಶ್ಯಕ ವಿವಾದಗಳಿಗೆ ತಲೆ ಹಾಕಬೇಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top