‘ರಾಕಿಂಗ್ ಸ್ಟಾರ್’ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗೆ ಕಳೆದ ವರ್ಷ ಗಂಡು ಮಗು ಜನಿಸಿತ್ತು. ಮಗ ಹುಟ್ಟಿ 10 ತಿಂಗಳಾದರೂ, ಮಗನ ಹೆಸರೇನು ಎಂಬುದು ಮಾತ್ರ ಬಹಿರಂಗಗೊಂಡಿರಲಿಲ್ಲ. ಇದೀಗ ಯಶ್ ಸರಳವಾಗಿ ಮಗನ ನಾಮಕರಣವನ್ನು ಮಾಡಿದ್ದು, ಹೆಸರನ್ನು ತಿಳಿಸಿದ್ದಾರೆ. ಅಂದಹಾಗೆ, ‘ರಾಕಿಂಗ್ ಸ್ಟಾರ್’ ಮಗನ ಹೆಸರು ‘ಯಥರ್ವ್ ಯಶ್’!
View this post on Instagram
ಯಶ್ ಮತ್ತು ರಾಧಿಕಾ ತಮ್ಮ ಮುದ್ದು ಮಗನಿಗೆ ಯಥರ್ವ್ ಯಶ್ ಎಂದು ನಾಮಕರಣ ಮಾಡಿದ್ದಾರೆ. ನಾಮಕರಣ ಸಂಭ್ರಮದ ವಿಡಿಯೋವನ್ನು ಯಶ್ ಮತ್ತು ರಾಧಿಕಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಾಮಕರಣದ ಕಾರ್ಯಕ್ರಮವನ್ನು ಯಶ್ ಸರಳವಾಗಿ ಆಚರಿಸಿದ್ದು, ಕಾರ್ಯಕ್ರಮದಲ್ಲಿ ಎರಡು ಕುಟುಂಬದರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು.
ಹಾಸನದ ತಮ್ಮ ತೋಟದ ಮನೆಯಲ್ಲೇ ಪರಿಸರದ ಮಧ್ಯೆ ನಾಮಕರಣ ಕಾರ್ಯಕ್ರಮ ನಡೆಸಿದ್ದು, ಮನೆ ಮಂದಿ ಮಾತ್ರ ನಾಮಕರಣದಲ್ಲಿ ಭಾಗಿಯಾಗಿದ್ದಾರೆ. ಇನ್ನು ಜೂನಿಯರ್ಗೆ ಏನೆಲ್ಲಾ ವಿಶೇಷತೆ ಇರುತ್ತದೆ ಎಂದು ಕುತೂಹಲವಿತ್ತು. ಇಂದು ಜೂನಿಯರ್ ವಿಡಿಯೋ ನೋಡಿ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
