fbpx
ಸಮಾಚಾರ

“ಚಿರು ಸರ್ಜಾ ಹೆಸರು ಸೇರಿಸಿದ್ದಕ್ಕೆ, ಆ ಮಗು ಮೇಘನಾ ಸ್ಥಿತಿ ಏನಾಗಿರಬೇಡ” ಹಿರಿಯ ನಟ ದೊಡ್ಡಣ್ಣ ಬೇಸರ

ಸ್ಯಾಂಡಲ್‌ವುಡ್‌ ನಲ್ಲಿ ಸಂಚಲನ ಮೂಡಿಸುತ್ತಿರುವ ಡ್ರಗ್ಸ್ ಮಾಫಿಯಾ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪಕ್ಕೆ ಸರ್ಜಾ ಫ್ಯಾಮಿಲಿ ತಿರುಗೇಟು ಕೊಟ್ಟಿದೆ. ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡ್ಲಿಲ್ಲ? ಎಂದು ಪ್ರಶ್ನಿಸಿದ್ದರು. ಈ ಮಾತು ಸ್ಯಾಂಡಲ್​ವುಡ್​ ನಟನ ಸಾವಿನ ಬಗ್ಗೆ ಹೊಸ ಅನುಮಾನ ಹುಟ್ಟು ಹಾಕಿತ್ತು. ಈ ಬಗ್ಗೆ ಹಿರಿಯ ನಟ ದೊಡ್ಡಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತಂತೆ ಇದೇ ಮೊದಲ ಬಾರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಂದನವನದ ಪ್ರಮುಖರು ಬುಧವಾರ ಸಭೆ ಸೇರಿದ್ದರು.

ಈ ವೇಳೆ ಮಾತನಾಡಿದ ಹಿರಿಯ ನಟ ದೊಡ್ಡಣ್ಣ ‘ನಾವು ಚಿತ್ರರಂಗಕ್ಕೆ ಬಂದಾಗ ಇಂಥದ್ದನ್ನೆಲ್ಲ ಕಂಡಿಲ್ಲ. ಯಾಕೆಂದರೆ ನಮ್ಮ ತಲೆ ಮೇಲೆ ಜವಾಬ್ದಾರಿ ಜಾಸ್ತಿ ಇತ್ತು. ಇದ್ದ ಸರ್ಕಾರಿ ನೌಕರಿಗಳನ್ನು ಬಿಟ್ಟು, ಕಲೆಯನ್ನು ನಂಬಿಕೊಂಡು ಇಲ್ಲಿಗೆ ಬಂದಿದ್ವಿ. ನಮಗೆ ಬೇರೇನೂ ಅಲ್ಲ, ಎರಡು ಹೊತ್ತಿನ ಅನ್ನ ಸಿಕ್ಕಿದ್ದರೆ ಸಾಕಿತ್ತು. ಇದನ್ನು ಒಂದು ಗುರುಕುಲದಂತೆ ನೋಡಿದವರು ನಾವು. ನಮಗೆ ಡ್ರಗ್ಸ್‌ ಬಗ್ಗೆ ದೇವರಾಣೆ ಗೊತ್ತಿರಲಿಲ್ಲ’ ಎಂದಿದ್ದಾರೆ ದೊಡ್ಡಣ್ಣ.

‘ ಈ ಪ್ರಕರಣದಲ್ಲಿ ಸತ್ತವರ ವಿಷಯ ತೆಗೆದುಕೊಂಡಿದ್ದು ನನಗೆ ಬಹಳ ನೋವುಂಟುಮಾಡಿದೆ. ಯಾಕೆಂದರೆ ನಾವು ಅಕ್ಕ-ತಂಗಿಯರ ಜೊತೆ ಹುಟ್ಟಿದ್ದೇವೆ. ನಮಗೂ ಮಕ್ಕಳಿವೆ. ಹೊಟ್ಟೆಯಲ್ಲಿ ಕಂದಮ್ಮನ ಹೊತ್ತಿಕೊಂಡಿರುವ ಆ ಮಗು ನೋವಲ್ಲಿದೆ. ಪತಿಯ ಕಳೆಬರಕ್ಕೆ ಮುತ್ತು ಕೊಟ್ಟಿರೋದನ್ನ ಇಡೀ ರಾಜ್ಯ ನೋಡಿದೆ. ಈಗ ಇಂತಹ ನೋವನ್ನ ಆ ಮಗುವಿನ ಕೊಟ್ಟರೆ ಹೇಗೆ? 70 ವರ್ಷದ ನಾಗರಿಕನಾಗಿ ಇಂತಹ ಆರೋಪಗಳನ್ನ ಕೇಳಿ ಮನಸ್ಸಿಗೆ ಕಷ್ಟ ಆಯ್ತು ಎಂದು ಹಿರಿಯ ನಟ ದೊಡ್ಡಣ್ಣ ಭಾವುಕರಾದ್ರು.

ಇಂದ್ರಜಿತ್ ಈ ಹಿಂದೆ ಹೇಳಿದ್ದು ಏನು?
ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿದ್ದ ಇಂದ್ರಜಿತ್ ಅವರು “ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡ್ಲಿಲ್ಲ?” ಎಂದು ಪ್ರಶ್ನಿಸಿದ್ದರು. ಈ ಮಾತು ಸ್ಯಾಂಡಲ್​ವುಡ್​ ನಟನ ಸಾವಿನ ಬಗ್ಗೆ ಹೊಸ ಅನುಮಾನ ಹುಟ್ಟು ಹಾಕಿತ್ತು. ಇದರ ಬೆನ್ನಲ್ಲೇ ಇಂದ್ರಜಿತ್​ ಆರೋಪಕ್ಕೆ ಸರ್ಜಾ ಫ್ಯಾಮಿಲಿ ತಿರುಗೇಟು ಕೊಟ್ಟಿದೆ.

“ಇತ್ತೀಚಿಗೆ ಯುವ ನಟರೊಬ್ಬರು ತೀರಿಹೋದಾಗ ಎಲ್ಲರಿಗೂ ನೋವಾಗಿತ್ತು. ಆದರೆ ಈ ಬಗ್ಗೆ ಒಂದೇ ಒಂದು ತನಿಖೆ ಆಗಲಿಲ್ಲ. ಮೃತ ದೇಹಕ್ಕೆ ಯಾವುದೇ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಿಲ್ಲ. ಪೋಸ್ಟ್ ಮಾರ್ಟಮ್ ನಡೆಸದಂತೆ ರಾಜಕೀಯ ಒತ್ತಡ ಹೇರಲಾಯಿತು” ಎಂದು ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದರು.

“ಆ ನಟನ ಕುಟುಂಬಕ್ಕೆ ನೋವು ಮಾಡುವ ಉದ್ದೇಶ ನನಗಿಲ್ಲ. ಆದರೆ, ಮರಣೋತ್ತರ ಪರೀಕ್ಷೆ ಏಕೆ ನಡೆಸಿಲ್ಲವೆಂಬುದೇ ನನ್ನ ಪ್ರಶ್ನೆ. ಡ್ರಗ್ಸ್​ನಿಂದಲೇ ಆ ನಟ ಮೃತಪಟ್ಟಿದ್ದರಾ ಎಂದು ತನಿಖೆ ನಡೆಸಿದ್ದರೆ ಎಲ್ಲ ಮಾಹಿತಿ ಬಹಿರಂಗವಾಗುತ್ತಿತ್ತು. ಜೊತೆಗೆ, ಡ್ರಗ್ಸ್​ ಜಾಲದಲ್ಲಿ ಇನ್ನೂ ಯಾರೆಲ್ಲಾ ಇದ್ದಾರೆ. ಇದರಿಂದ ಯಾರ್ಯಾರಿಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದೆ ಎಂದೂ ತಿಳಿಸುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top