fbpx
ಸಮಾಚಾರ

“ಸನಾತನ ಧರ್ಮದಲ್ಲಿ ‘ಗಾಂಜಾ’ಗೆ ತುಳಸಿಯಷ್ಟೇ ಪವಿತ್ರ ಸ್ಥಾನವಿದೆ, ಗಾಂಜಾ ಸೇವನೆ ಕಾನೂನುಬದ್ಧವಾಗಬೇಕು” ನಟಿ ನಿವೇದಿತಾ

ಡ್ರಗ್ಸ್ ಮಾಫಿಯಾಗೂ ಸ್ಯಾಂಡಲ್ ವುಡ್ ಗೂ ನಂಟಿರುವ ಸುದ್ದಿ ಹೊರಬಂದ ಬಳಿಕ, ಅನೇಕ ನಟ, ನಟಿಯರು ತಮ್ಮದೇ ಆದ ಹೇಳಿಕೆ, ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇದರ ನಡುವೆ ನಟಿ ನಿವೇದಿತಾ ಗಾಂಜಾ ಸೇವನೆಯನ್ನು ಕಾನೂನುಬದ್ಧಗೊಳಿಸಿದರೆ ದೇಶದಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

ಕನ್ನಡದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ನಿವೇದಿತಾ, ಗಾಂಜಾ ಗಿಡವನ್ನು ತುಳಸಿಗೆ ಹೋಲಿಸಿದ್ದಾರೆ. ಅಷ್ಟೇ ಅಲ್ಲದೆ ಗಾಂಜಾ ‘ಮಹಿಮೆ’ಯನ್ನು ಕೊಂಡಾಗಿದ್ದಾರೆ. ಸನಾತನ ಧರ್ಮದಲ್ಲಿ ಗಾಂಜಾ ಗೆ ವಿಶೇಷ ಸ್ಥಾನವಿದೆ. ಆಯುರ್ವೇಧ ಮಾತ್ರವಲ್ಲದೆ ಅಲೋಪತಿಯಲ್ಲೂ ಸಹ ಗಾಂಜಾವನ್ನು ಬಳಸಲಾಗುತ್ತದೆ ಎಂದು ನಟಿ ನಿವೇದಿತಾ ಹೇಳಿದ್ದಾರೆ.

ಕೆಲವು ದಿನಗಳಿಂದ ನ್ಯೂಸ್ ಚಾನೆಲ್ ಗಳಲ್ಲಿ ಕೊಕೇನ್, ಹೆರಾಯಿನ್ ಜೊತೆಗೆ ಗಾಂಜಾವನ್ನು ಮಾದಕ ವಸ್ತು ಪಟ್ಟಿಗೆ ಸೇರಿಸಿಬಿಟ್ಟಿದ್ದಾರೆ. ಸನಾತನ ಧರ್ಮದ ಬಗ್ಗೆ ಅದರ ಆಚರಣೆಗಳ ಬಗ್ಗೆ ಕಾಳಜಿಯುಳ್ಳ ನನಗೆ ಇದನ್ನು ನೋಡಿ ಬಹುಬೇಸರವಾಗಿದೆ. ಸನಾತನ ಧರ್ಮದಲ್ಲಿ ಗಾಂಜಾಕ್ಕೆ ತನ್ನದೇ ಆದ ಸ್ಥಾನವಿದೆ. ಔಷಧೀಯಗುಣವುಳ್ಳ ದೇವಸಸ್ಯವೊಂದನ್ನು ಸಿಂಥೆಟಿಕ್ ಡ್ರಗ್ಸ್ ಜೊತೆಗೆ ಹೋಲಿಕೆ ಮಾಡುತ್ತಿರುವುದು ಧರ್ಮಕ್ಕೆ ಅದರ ಸನಾತನೆಗೆ ಮಾಡುವ ಅಪಚಾರ ಎಂದಿದ್ದಾರೆ ನಟಿ ನಿವೇದಿತಾ.

ಇದೇ ಗಾಂಜಾದಿಂದ ಜಗತ್ತಿನಲ್ಲಿ ಅಪರಾಧ ಪ್ರಮಾಣ ಕಡಿಮೆ ಆಗ್ತಿರೋದು. ಅದೆಷ್ಟೋ ದೇಶಗಳಲ್ಲಿ ಗಾಂಜಾ ಕಾನೂನಾತ್ಮಕಗೊಳಿಸಲಾಗಿದೆ. ಆ ದೇಶಗಳಲ್ಲಿ ಅಪರಾಧ ಪ್ರಮಾಣ ಕಡಿಮೆ ಆಗಿದೆ. ಆದ್ರೆ ನಮ್ಮಲ್ಲಿ ಸಿಂಥೆಟಿಕ್ ಮಾದಕ ವಸ್ತುಗಳು ಹಾಗೂ ಕುಡಿತದಿಂದ ಕ್ರೈಂ ರೇಟ್ ಅಧಿಕವಾಗ್ತಿದೆ. ಆದ್ದರಿಂದ ಗಾಂಜಾ ನಮ್ಮ ದೇಶದಲ್ಲೂ ಕಾನೂನಾತ್ಮಕ ಆಗಬೇಕು. ಇದು ಎಷ್ಟೋ ರೋಗಗಳಿಗೆ ಔಷಧ ಆಗಿದೆ’ ಅಂತ ನಿವೇದಿತಾ ಸಮರ್ಥಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top