fbpx
ಸಮಾಚಾರ

ರಿಲೀಸ್ ಆಯ್ತು ಕೋಟಿಗೊಬ್ಬ 3 ಟೀಸರ್: ಕಾಮಿಡಿ ಕಚಗುಳಿ ಇಟ್ಟ ಕೋಟಿಗೊಬ್ಬ

ಕಿಚ್ಚ ಸುದೀಪ್​ ಇಂದು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸುಸಮಯದಲ್ಲಿ ಅವರ ಅಭಿನಯದ ಕೋಟಿಗೊಬ್ಬ 3 ಚಿತ್ರತಂಡ ಕಿಚ್ಚನ ಅಭಿಮಾನಿಗಳಿಗಾಗಿ ಒಂದು ಉಡುಗೊರೆ ನೀಡಿದ್ದಾರೆ. ಕೋಟಿಗೊಬ್ಬ ಚಿತ್ರತಂಡದ ಕಡೆಯಿಂದ ಹೊಸ ಟೀಸರ್ ರಿಲೀಸ್ ಮಾಡಿದ್ದಾರೆ.

ಈ ಹಿಂದೆ ಬಿಡುಗಡೆಯಾಗಿದ್ದ ಫಸ್ಟ್ ಲುಕ್, ಟೀಸರ್ ಸಿನಿಮಾ ಮಾಸ್ ಅಭಿಮಾನಿಗಳನ್ನ ಸೆಳೆದಿತ್ತು. ಇದೀಗ ಚಿತ್ರದ ಕಾಮಿಡಿ ಕಚಗುಳಿ ಝಲಕ್, ಕ್ಯೂಟ್ ಲವ್ ಸ್ಟೋರಿ ಇಂದು ಬಿಡುಗಡೆ ಟೀಸರ್ ನಲ್ಲಿ ನೋಡಬಹುದಾಗಿದೆ. ಅದರಲ್ಲೂ ಟೀಸರ್‌ನಲ್ಲಿ ಬ್ಯಾಗ್ರೌಂಡ್‌ನಲ್ಲಿ ಪ್ಲೇ ಆಗುತ್ತಿರುವ ‘ಟಚ್‌ ಆದ್ರೆ ಬೈಕೋಬೇಡಿ ಸಾರಿ’ ಹಾಡು ತುಂಬಾನೇ ಕ್ರಿಯೇಟಿವ್ ಅಗಿ ಮೂಡಿ ಬಂದಿದೆ.

ಚಿತ್ರದಲ್ಲಿ ಅಭಿನಯ ಚಕ್ರವರ್ತಿಗೆ ಮಡೋನಾ ಸೆಬಾಸ್ಟಿಯನ್ ಮತ್ತು ಶ್ರದ್ಧಾ ಜೊತೆಯಾಗಿದ್ದಾರೆ. ಶಿವಕಾರ್ತಿಕ್ ನಿರ್ದೇಶನ, ಸೂರಪ್ಪ ಬಾಬು ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಮ್ಯೂಸಿಕಲ್ ಪೈಲ್ವಾನ್ ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ. ಮೊದಲ ಬಾರಿ ಬಾಲಿವುಡ್‍ನಟ ಅಫ್ತಾಬ್ ಕೋಟಿಗೊಬ್ಬ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top