fbpx
ಸಮಾಚಾರ

ಬಹುಭಾಷಾ ನಟಿಗೆ ಕೂಡಿಬಂದ ಕಂಕಣ ಭಾಗ್ಯ: ಮದುವೆಯಾಗುವ ಹುಡುಗ ಯಾರು?

ಕಾಲಿವುಡ್​, ಟಾಲಿವುಡ್​ ಸೇರಿದಂತೆ ಕನ್ನಡದಲ್ಲೂ ನಟಿಸಿರುವ ಹಾಸ್ಯ ನಟಿ ವಿದ್ಯುಲ್ಲೇಖಾ ರಾಮನ್​ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಪ್ರೀತಿಸಿದ ಹುಡುಗನೊಂದಿಗೆ ಇತ್ತೀಚೆಗಷ್ಟೆ ರೋಕಾ ಮಾಡಿಕೊಂಡಿದ್ದಾರೆ. ಇನ್ನು ಸದ್ಯದಲ್ಲೇ ಇವರ ನಿಶ್ಚಿತಾರ್ಥ ಹಾಗೂ ಮದುವೆಯ ದಿನಾಂಕ ತಿಳಿಯಲಿದೆ.

ವಿದ್ಯುಲ್ಲೇಖಾ ಅವರನ್ನು ಮದುವೆ ಆಗಲಿರುವ ಹುಡುಗನ ಹೆಸರು ಸಂಜಯ್‌. ಚೆನ್ನೈನವರಾದ ಸಂಜಯ್ ಉದ್ಯಮಿ ಆಗಿದ್ದಾರೆ. ಜೊತೆಗೆ ಡಯೇಟಿಷಿಯನ್ ಕೂಡ ಹೌದು. ರೋಖಾ ಕಾರ್ಯಕ್ರಮವನ್ನು ಸರಳವಾಗಿ ಮಾಡಲಾಗಿದೆ.

 

 

ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿರುವ ವಿದ್ಯುಲ್ಲೇಖಾ, ‘ನಾವಿಬ್ಬರು ಎಂಗೇಜ್ ಆಗಿದ್ದೇವೆ. ನಮ್ಮ ರೋಖಾ ಕಾರ್ಯಕ್ರಮವು ಆಗಸ್ಟ್ 26ರಂದು ನಡೆದಿದೆ. ಇದರಲ್ಲಿ ನಮ್ಮ ಕುಟುಂಬದ ಕೆಲವೇ ಕೆಲವು ಆಪ್ತರು ಮಾತ್ರ ಭಾಗಿಯಾಗಿದ್ದರು. ಅಂದಹಾಗೆ, ನಾವು ಮಾಸ್ಕ್‌ ಧರಿಸಿದ್ದೆವು. ಆದರೆ, ಫೋಟೋಗಾಗಿ ತೆಗೆದಿದ್ದೇವೆ. ಯಾರಾದರೂ ಕೇಳುವುದಕ್ಕೂ ಮುನ್ನ ನಾನೇ ಹೇಳುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆ ಮತ್ತು ಆಶೀರ್ವಾದಗಳಿಗೆ ಧನ್ಯವಾದಗಳು’ ಎಂದಿದ್ದಾರೆ.

ವಿದ್ಯುಲ್ಲೇಖಾ 2012ರಲ್ಲಿ ಗೌತಮ್ ಮೆನನ್ ಜೊತೆ ‘Neethaane En Ponvasantham’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸಿನಿ ಪ್ರಪಂಚಕ್ಕೆ ಕಾಲಿಟ್ಟರು. ಎಂಟು ವರ್ಷದ ಸಿನಿಮಾ ಜರ್ನಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top