fbpx
ಸಮಾಚಾರ

“ಕೊಲೆ ಮಾಡಿದವ್ರೇ ನನ್ನ ಅಕ್ಕನ ಬಗ್ಗೆ ಮಾತ್ನಾಡ್ತಾರೆ” ಮುತಾಲಿಕ್ ಹೇಳಿಕೆಗೆ ಇಂದ್ರಜಿತ್ ಕಣ್ಣೀರು

ನನ್ನ ಅಕ್ಕ ಪತ್ರಕರ್ತೆ ಗೌರಿ ಲಂಕೇಶ್ ಸಾವಿನ ಕುರಿತು ಹೇಳಿಕೆ ನೀಡಿರುವುದು ತುಂಬಾ ನೋವು ತಂದಿದೆ ಎಂದು ಇಂದ್ರಜಿತ್ ಲಂಕೇಶ್ ಕಣ್ಣೀರು ಹಾಕಿದ್ದಾರೆ. ಈ ಕುರಿತು ಅವರ ನಿವಾಸದಲ್ಲಿ ಮಾತನಾಡಿರುವ ಇಂದ್ರಜಿತ್, ಅಕ್ಕ ಗೌರಿ ಲಂಕೇಶ್ ಅವರ ಬಗ್ಗೆ ಹೇಳಿಕೆ ನೀಡಿರುವುದು ತುಂಬಾ ದುಃಖ ತಂದಿದೆ. ಅವರ ತತ್ವ-ಸಿದ್ಧಾಂತ ಬೇರೆ ಇತ್ತು. ಅವರದ್ದು ಸೈದ್ಧಾಂತಿಕ ಕೊಲೆ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ.

ನಮ್ಮ ಅಕ್ಕ, ತಂದೆ ಕೊನೆಯ ಗಳಿಗೆವರೆಗೂ ಬರೆಯುತ್ತಲೇ ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಾ ಕಣ್ಣೀರು ಹಾಕಿದರು. ನಮ್ಮ ಅಕ್ಕನ ಸಾವು ಸಾವಲ್ಲ. ನಮ್ಮ ತಂದೆ ಹಾಗೂ ನಮ್ಮ ಅಕ್ಕ ಕೊನೆಯ ಗಳಿಗೆವರೆಗೂ ಮಾಧ್ಯಮಕ್ಕೆ ಸೇವೆ ಮಾಡಿದ್ದಾರೆ. ನಮ್ಮ ಅಕ್ಕ ಒಂದು ಸಿದ್ಧಾಂತಕ್ಕಾಗಿ ಸಾವು ಅನುಭವಿಸಬೇಕಿತ್ತಾ? ಎಂದು ಪ್ರಶ್ನಿಸಿದ್ರು

‘ಇತ್ತೀಚೆಗೆ ಮೃತಪಟ್ಟ ನಟನ ಪೋಸ್ಟ್‌ಮಾರ್ಟಂ’ ಹೇಳಿಕೆ ವಿಚಾರವಾಗಿ ಮಾತನಾಡಿದ ಲಂಕೇಶ್​ ನಾನು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ವಾಪಸ್ ಪಡೆದಿದ್ದೆ. ಆದರೆ, ನನ್ನ ಸಹೋದರಿ ಗೌರಿ ಲಂಕೇಶ್ ಬಗ್ಗೆ ಮಾತನಾಡುತ್ತಾರೆ. ಈ ಹೇಳಿಕೆ ನೀಡಿದ್ದು ಯಾರೆಂದು ನಾನು ಹೇಳುವುದೇ ಇಲ್ಲ. ಆದರೆ ಅವರು ಈ ರೀತಿಯಾಗಿ ಮಾತನಾಡುವುದು ಸರಿಯೇ? ಎಂದು ಇಂದ್ರಜಿತ್​ ಪ್ರಶ್ನಿಸಿದರು.

ತನಿಖೆ ನಡೆಯಲಿ, ಎಲ್ಲಾ ವಿಚಾರ ಬಯಲಿಗೆ ಬರುತ್ತದೆ. ನನ್ನ ತಂದೆ, ಅಕ್ಕ ಕೊನೇ ಕ್ಷಣದವರೆಗೆ ಸಮಾಜಕ್ಕಾಗಿ ಕೆಲಸ ಮಾಡಿದ್ದರು. ಆದರೆ, ಕೊಲೆ ಮಾಡಿದವರೇ ನನ್ನ ಅಕ್ಕನ ಬಗ್ಗೆ ಮಾತನಾಡುತ್ತಾರೆ. ಇದರಿಂದ ನಮಗೂ ಬೇಜಾರಾಗುವುದಿಲ್ಲವೇ? ಎಂದು ಇಂದ್ರಜಿತ್ ಲಂಕೇಶ್ ತಮ್ಮ ನೋವು ತೋಡಿಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top