fbpx
ಸಮಾಚಾರ

ಸ್ಯಾಂಡಲ್‌ವುಡ್‌ ಡ್ರಗ್ ಮಾಫಿಯಾ: ಬಂಧನದ ಭೀತಿಯಲ್ಲಿ ‘ಮಾದಕ’ ನಟಿ ರಾಗಿಣಿ ಎಸ್ಕೇಪ್?

ಸ್ಯಾಂಡಲ್ವುಡ್ ನ ಕೆಲ ನಟ-ನಟಿಯರು ಡ್ರಗ್ಸ್ ಧಂದೆಯಲ್ಲಿ ತೊಡಗಿದ್ದಾರೆ ಎಂಬ ಗಂಭೀರ ಆರೋಪಗಳ ಬೆನ್ನಲ್ಲೇ ಸಿಸಿಬಿ ತನಿಖೆ ಚುರುಕುಗೊಳಿಸಿದ್ದು ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿಗೆ ನೋಟಿಸ್ ನೀಡಿದ್ದಾರೆ. ಈ ಬೆನ್ನಲ್ಲೇ ನಟಿ ಎಸ್ಕೇಪ್ ಆದ್ರಾ ಅನ್ನೋ ಪ್ರಶ್ನೆಯೊಂದು ಮೂಡಿದೆ.

ಮೇಡಂ ಮನೆಯಲ್ಲಿ ಇಲ್ಲಾ. ರಾತ್ರಿ 11 ಗಂಟೆಗೆ ಮನೆಯಿಂದ ಹೊರಗಡೆ ಹೋಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲಾ ಅಂತ ಯಲಹಂಕದಲ್ಲಿರುವ ಮನೆಯ ಸೆಕ್ಯುರಿಟಿ ಗಾರ್ಡ್ ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಗಿಣಿ ರಾತ್ರಿಯೇ ಮನೆ ಬಿಟ್ಟು ಬೇರೆ ಕಡೆಗೆ ತೆರಳಿದ್ರಾ..? ಅಥವಾ ಮನೆಯಲ್ಲಿಯೇ ಇದ್ದು ಇಲ್ಲಾ ಅಂತ ಹೇಳಿಸ್ತಿದ್ದಾರಾ ಎಂಬ ಅನುಮಾನ ಮೂಡಿದೆ.

ಆದರೆ ಮೊಬೈಲ್‌ ಲೋಕೇಷನ್‌ ಅಲ್ಲಿಯೇ ತೋರಿಸುತ್ತಿರುವ ಕಾರಣ ಸಿಸಿಬಿ ಅಧಿಕಾರಿಗಳು ರಾಗಿಣಿ ನಿವಾಸದ ಬಳಿಯೇ ತುಂಬಾ ಹೊತ್ತು ಕಾದರು.. ಎಷ್ಟು ಹೊತ್ತಾದರೂ ಬಾಗಿಲು ತೆರೆಯದ ಕಾರಣ ವಾಟ್ಸಪ್‌ನಲ್ಲಿ ಕಳುಹಿಸಲಾಗಿದೆ. ಮೆಸೇಜ್‌ ಮೂಲಕ ಬಂದಿರುವ ನೋಟಿಸ್‌ ನೋಡಿದ್ದಾರೆ, ಬ್ಲೂ ಟಿಕ್‌ ಬಂದಿದೆ. ಆದರೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಇಂದು ವಿಚಾರಣೆಗೆ ಹಾಜರಾಗ್ತಾರಾ ರಾಗಿಣಿ?, ಇಲ್ಲಾ ಕಾರಣ ಕೊಟ್ಟು ದಿನ ಮುಂದೆ ಹಾಕಲು ಪ್ಲಾನ್ ಮಾಡ್ತಿದ್ದಾರಾ ಎಂಬ ಪ್ರಶ್ನೆ ಕೂಡ ಮೂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top