fbpx
ಸಮಾಚಾರ

ಪ್ರಧಾನಿ ಮೋದಿಯ ಟ್ವಿಟ್ಟರ್ ಖಾತೆ ಹ್ಯಾಕ್: ಕಿಡಿಗೇಡಿಗಳಿಂದ ಬೇಕಾಬಿಟ್ಟಿ ಪೋಸ್ಟ್!

ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದ್ದನ್ನು ಟ್ವಿಟ್ಟರ್ ಸಂಸ್ಥೆ ಇಂದು ದೃಢಪಡಿಸಿದೆ. ಟ್ವಿಟ್ಟರ್ ಖಾತೆಯಿಂದ ಕೆಲವು ಟ್ವೀಟ್‌ಗಳನ್ನು ಗುರುವಾರ ಮುಂಜಾನೆ ಮಾಡಲಾಗಿತ್ತು. ಖಾತೆಯನ್ನು ಸುರಕ್ಷಿತಗೊಳಿಸುವ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಟ್ವಿಟ್ಟರ್ ವಕ್ತಾರರು ತಿಳಿಸಿದ್ದಾರೆ.

 

 

ಪ್ರಧಾನಿ ಕಾರ್ಯಾಲಯದಿಂದ ಇನ್ನೂ ಅಧಿಕೃತ ಹೇಳಿಕೆ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಎರಡು ಟ್ವಿಟ್ಟರ್ ಅಕೌಂಟ್​ಗಳಿವೆ. @Narendra_in ಎಂಬ ತಾಣದ ಅಕೌಂಟ್ ಹ್ಯಾಕ್ ಆಗಿರುವುದು. ಇದರಲ್ಲಿ 25 ಲಕ್ಷ ಫಾಲೋವರ್ಸ್ ಇದ್ದಾರೆ. ಇದರಲ್ಲಿ ಅವರು ಹಿಂದಿಯಲ್ಲಿ ಹೆಚ್ಚಾಗಿ ಟ್ವೀಟ್ ಮಾಡುತ್ತಾರೆ. ಪ್ರಧಾನಿ ಅವರ ಮತ್ತೊಂದು ಅಕೌಂಟ್ ಇದ್ದು ಅದರಲ್ಲಿ 60 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್ ಇದ್ದಾರೆ. ಅದರದ್ದು ಹ್ಯಾಕ್ ಆಗಿದ್ದಂತಿಲ್ಲ.

ಇನ್ನು ಟ್ವೀಟ್‌ ಮಾಡಿರುವ ಹ್ಯಾಕರ್‌ಗಳು‌, ಕೋವಿಡ್ -19ಗಾಗಿ ಪಿಎಂ ನ್ಯಾಷನಲ್ ರಿಲೀಫ್ ಫಂಡ್‌ಗೆ ಉದಾರವಾಗಿ ದೇಣಿಗೆ ನೀಡುವಂತೆ ನಾನು ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ. ಈಗ ಭಾರತದಲ್ಲಿ ಕ್ರಿಪ್ಟೋ ಕರೆನ್ಸಿ ಪ್ರಾರಂಭವಾಗುತ್ತಿದೆ ಹೀಗಾಗಿ ಎಲ್ಲರು ದೇಣಿಗೆ ನೀಡಿ ಎಂದು ಟ್ವೀಟ್‌ ಮಾಡಲಾಗಿದೆ. ಅಲ್ಲದೇ ಈ ಅಕೌಂಟನ್ನು ಹ್ಯಾಕ್‌ ಮಾಡಲಾಗಿದೆ. ಜಾನಿ ವಿಕ್‌ ಎಂದು ಬರೆದುಕೊಂಡು ಸರಣಿ ಟ್ವೀಟ್‌ ಮಾಡಲಾಗಿದೆ.

ಬುಧವಾರ ರಾತ್ರಿ ಸುಮಾರು ಮೂರು ಗಂಟೆಗೆ ನರೇಂದ್ರ ಮೋದಿಯವರ ಖಾತೆಯಿಂದ ಒಂದು ಟ್ವೀಟ್ ಮಾಡಲಾಗಿತ್ತು. ಈ ಖಾತೆಯನ್ನ ಜಾನ್ ವಿಕ್ (hckindia@tutanota.com) ಮೂಲಕ ಹ್ಯಾಕ್ ಮಾಡಲಾಗಿದೆ. ನಾವು ಪೇಟಿಎಂ ಮಾಲ್ ಹ್ಯಾಕ್ ಮಾಡಿಲ್ಲ. ಮಗದೊಂದು ಟ್ವೀಟ್ ನಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ನ್ಯಾಶನಲ್ ರಿಲೀಫ್ ಫಂಡ್‍ಗೆ ಹಣ ಹಾಕುವಂತೆ ಹೇಳಲಾಗಿದೆ. ಆದ್ರೆ ಈ ಟ್ವೀಟ್ ಕೆಲವೇ ಕ್ಷಣಗಳಲ್ಲಿ ಡಿಲೀಟ್ ಮಾಡಲಾಗಿದೆ. ಹ್ಯಾಕ್ ಬಳಿಕ ಅರ್ಧಗಂಟೆಯಲ್ಲಿ ಸಮಸ್ಯೆ ಪರಿಹರಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top