fbpx
ಸಮಾಚಾರ

“ಸಂಜನಾ ಗಲೀಜು.. ರಾಗಿಣಿ ಘಮ ಘಮ ನಾರುತ್ತಿದ್ದಾಳಾ?” ಪ್ರಶಾಂತ್ ಸಂಬರಗಿ ಪ್ರಶ್ನೆ

ಸ್ಯಾಂಡಲ್​ ವುಡ್​ಗೆ ಡ್ರಗ್ ಮಾಫಿಯಾ ಲಿಂಕ್ ಇದೆ ಎನ್ನುವ ವಿಷಯ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿದ ಸಿನಿಮಾ ವಿತರಕ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​​​​​​ ಸಂಬರಗಿ ನಟಿಯರಾದ ರಾಗಿಣಿ ಮತ್ತು ಸಂಜನಾ ಗಲ್ರಾಣಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಯುಬಿ ಸಿಟಿಯಲ್ಲಿ ರಾಗಿಣಿ ಆರ್​​ಟಿಓ ಇನ್ಸ್​ಪೆಕ್ಟರ್​​ ಜತೆ ಓಡಾಡಿಕೊಂಡಿದ್ದಳು. ಆತನ ಜತೆ ಮದ್ವೆ ಆಗ್ತೀನಿ ಅಂತಾ ರಾಗಿಣಿ ನನಗೆ ಹೇಳಿದ್ದಳು. ಈ ಥರಾ ಕಚಡಾ ದಂಧೆ..ಅದೂ ಸೆಕ್ಸ್​ ಅಂತಾ ನನಗೆ ಗೊತ್ತಿರಲಿಲ್ಲ. ರಾಗಿಣಿ ಏನು ಘಮ್​​..ಘಮ್​​​..ಅಂತಾ ಸ್ಮೆಲ್​ ಬರ್ತಾರಾ..? ಗಬ್ಬು ನಾಥ ಅಂಥೇಳಿ ಇಲ್ಲರಿಗೂ ಗೊತ್ತು” ಎಂದು ರಾಗಿಣಿ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಸಂಬರಗಿ ಕಿಡಿಕಾರಿದ್ದಾರೆ.

ಇನ್ನು ನಟಿ ಸಂಜನಾ ಗಲ್ರಾನಿ ಬಗ್ಗೆ ಮಾತನಾಡಿದ ಸಂಬರಗಿ ಯಾರೋಬ್ಬರ ತೇಜೋವಧೆ ಮಾಡುವುದು ನನ್ನ ಉದ್ದೇಶವಲ್ಲ, ಸಂಜನಾ ಬಗ್ಗೆ ಸಿನಿಮಾ ಇಂಡಸ್ಟ್ರಿಗೆ ಗೊತ್ತು, ಆಕೆ ಬಗ್ಗೆ ಮಾತನಾಡಿ ನಾನು ಬಾಯಿ ಗಲೀಜು ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಬಿಸಿಬಿಸಿ ಎಂಬ ಸಿನಿಮಾದಲ್ಲಿ ಸಂಜನಾ ಅವರಿಗೆ ಪಾತ್ರ ಕೊಡಲು ಹೋಗಿದ್ದೇವು, ಸಿಂಧ್ ಸ್ಕೂಲಿಗೆ ಹೋಗಿ ಆಕೆಯನ್ನು ನೋಡಿದ್ದೆವು, ಆದರೆ ಮೈನರ್ ಎಂಬ ಕಾರಣಕ್ಕೆ ಆಕೆಯನ್ನು ಆ ಸಿನಿಮಾದಲ್ಲಿ ನಟಿಸಲು ಆಗಲಿಲ್ಲ, ಆಕೆ ಲೆವೆಲ್ ಏನು ಎಂಬುದು ಸಿನಿಮಾ ರಂಗಕ್ಕೆ ಗೊತ್ತಿದೆ ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top